ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ವೈದ್ಯಕೀಯ ಕಾಲೇಜಿನ ಮಹಿಳಾ ಹಾಸ್ಟೆಲ್ ನಲ್ಲಿ ಕಾಲರಾ ರೋಗ ಬಾಧಿಸಿರುವುದು ಸ್ಪಷ್ಟವಾಗಿದೆ. ಸದ್ಯ ಇಬ್ಬರು ವಿದ್ಯಾರ್ಥಿನಿಯರ ಪರೀಕ್ಷಾ ಮಾದರಿ ಪಾಸಿಟಿವ್ ಬಂದಿದೆ. ಸರಾಸರಿ 47 ವೈದ್ಯರಿಗೆ ಕಾಲರಾ ಅಟ್ಯಾಕ್ ಆಗಿರುವ ಬಗ್ಗೆ ಸುದ್ದಿಯಾಗಿತ್ತು. ವಿದ್ಯಾರ್ಥಿಗಳು ವಾಂತಿ, ಭೇದಿ ಹಾಗೂ ಹೊಟ್ಟೆ ನೋವಿನಿಂದ ಬಳಲುತ್ತಿದ್ದು, ಐಸಿಯು ನಲ್ಲಿ 4 ಜನ ಸಂಶೋಧನಾ ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಇನ್ನುಳಿದ ವಿದ್ಯಾರ್ಥಿಗಳು H ಬ್ಲಾಕ್ ನಲ್ಲಿ ದಾಖಲು ಮಾಡಲಾಗಿದೆ. ಹಾಸ್ಟೆಲ್ ಅವ್ಯವಸ್ಥೆಯಿಂದ ಕಾಲರಾ ಹರಡಿರುವ ಶಂಕೆ ವ್ಯಕ್ತವಾಗಿದೆ.
ತೆರೆಗೆ ಬರಲಿ ಬೆಂಗಳೂರು ನಿರ್ಮಾತೃ ಕೆಂಪೇಗೌಡ ಸಿನಿಮಾ…! ನಿರ್ದೇಶನ ಮಾಡುತ್ತಿರುವುದು ಯಾರು?
ಸದ್ಯ ಇಬ್ಬರು ವಿದ್ಯಾರ್ಥಿನಿಗೆ ಕಾಲರಾ ಬಂದಿರುವುದು ದೃಢವಾಗಿದೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿದ್ದ 47 ವೈದ್ಯಕೀಯ ವಿದ್ಯಾರ್ಥಿಗಳಲ್ಲಿ 26 ವರ್ಷದ ಫ್ರಫೂಲ್ಲ ಬ್ಲಡ್ ಸ್ಯಾಂಪಲ್ ನಲ್ಲಿ ಪಾಸಿಟಿವ್ ಆಗಿದೆ. ಬ್ಲಡ್ ಸ್ಯಾಂಪಲ್ ನಲ್ಲಿ ಕಾಲರಾ ಬಂದಿರುವುದು ದೃಢವಾಗಿದೆ. ಮಿಕ್ಕ 46 ಸಂಶೋಧನಾ ವಿದ್ಯಾರ್ಥಿನಿಯರ ಟೆಸ್ಟ್ ರಿಪೋರ್ಟ್ ಇನ್ನು ಬರಬೇಕಷ್ಟೇ. ಕಲ್ಚರ್ ರಿಪೋರ್ಟ್ ಇನ್ನು ಮೂರು ದಿನದಲ್ಲಿ ಬರುವ ಸಾಧ್ಯತೆ ಇದ್ದು, ಬಂದನಂತರ ಕಾಲರಾದ ಬಗ್ಗೆ ಸ್ಪಷ್ಟನೆ ಸಿಗಲಿದೆ.