ಹುಬ್ಬಳ್ಳಿ:- ರೈತರ ಮೇಲೆ ನಿಜಕ್ಕೂ ಕಾಳಜಿ ಇಲ್ಲದ ಸರ್ಕಾರ ಕಾಂಗ್ರೆಸ್ ಎಂದು ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ
ಈ ಸಂಬಂಧ ಮಾತನಾಡಿದ ಅವರು,ಯಡಿಯೂರಪ್ಪ ಅವರು ಸಿಎಂ ಆಗಿದ್ದಾಗ ನೀಡುತ್ತಿದ್ದ 4000 ರೂ. ಕಿಸಾನ್ ಸಮ್ಮಾನ್ ನಿಧಿಯನ್ನು ಈ ಸರ್ಕಾರದಲ್ಲಿ ಸಿಎಂ ಸಿದ್ದರಾಮಯ್ಯ ಸ್ಥಗಿತಗೊಳಿಸಿದ್ದಾರೆ. ಗ್ಯಾರಂಟಿ ಗ್ಯಾರಂಟಿ ಎನ್ನುತ್ತಾ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ರಾಜ್ಯ ಸರ್ಕಾರ, ಒಂದೇ ಒಂದು ಅಭಿವೃದ್ಧಿ ಕಾರ್ಯ ಕೈಗೊಂಡಿಲ್ಲ. ಕಡೇ ಪಕ್ಷ ರಸ್ತೆಗಳಿಗೆ ಒಂದು ಬುಟ್ಟಿ ಮಣ್ಣು ಸಹ ಹಾಕಿಲ್ಲ ಎಂದು ಕಿಡಿಕಾರಿದ್ದಾರೆ.
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಕಾರ್ಯಗತಗೊಳಿಸಿದ್ದ ಕಾಮಗಾರಿಗಳನ್ನು ಕಾಂಗ್ರೆಸ್ಸಿಗರು ಉದ್ಘಾಟನೆ, ಭೂಮಿಪೂಜೆ ಮಾಡಿ ಫೋಟೊಗೆ ಫೋಸ್ ಕೊಡುತ್ತಿದ್ದಾರೆ ಎಂದು ಸಚಿವ ಎಂದು ಹೇಳಿದರು.
ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆ ಸಮಾರಂಭವನ್ನು ಬಾಯ್ಕಾಟ್ ಮಾಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಬೇಡಿ ಎಂದ ಅವರು, ಕಾಂಗ್ರೆಸ್ ಪಕ್ಷ ಸರ್ಜಿಕಲ್ ಸ್ಟ್ರೈಕ್ಗೆ, ರಾಮ ಜನ್ಮ ಸ್ಥಳಕ್ಕೆ ಸಾಕ್ಷಿ ಕೇಳಿತ್ತು. ಇಂಥ ಪಕ್ಷಕ್ಕೆ ನೀವು ಬೆಂಬಲ ನೀಡಬೇಕೇ? ಎಂದು ಮಾರ್ಮಿಕವಾಗಿ ಹೇಳಿದರು.
ಕಾಂಗ್ರೆಸ್ ಪಕ್ಷ ಎಂದೂ ದೇಶದ ಹಿತ ಚಿಂತಿಸಿಲ್ಲ. ಬದಲಿಗೆ ತುಷ್ಟಿಕರಣದ ರಾಜಕಾರಣ, ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಾ ಬಂದಿದೆ. ಕಾಂಗ್ರೆಸ್ ನೇತಾರ ರಾಹುಲ್ ಗಾಂಧಿಗೆ ಬದ್ಧತೆಯೇ ಇಲ್ಲ. ಏನು ಮಾತನಾಡುತ್ತೇನೆ ಎಂಬುದು ಅವರಿಗೇ ತಿಳಿಯದು. ಅವರ ಪಕ್ಷದವರಿಗೂ ಅರ್ಥವಾಗದು. ಆ ರೀತಿ ತಾಳ-ಮೇಳ ಇಲ್ಲದಂತೆ ರಾಹುಲ್ ಬಾಬಾ ಮಾತನಾಡುತ್ತಾರೆ. ಹೀಗಿರುವಾಗ ದೇಶ ಆಳುವ ಬದ್ಧತೆ ಇವರಿಗೆಲ್ಲಿ ಬರಬೇಕು? ಎಂದು ಸಚಿವ ಪ್ರಲ್ಹಾದ್ ಜೋಶಿ ಲೇವಡಿ ಮಾಡಿದರು.