ದೇವನಹಳ್ಳಿ:-ಬೊಲೆನೋ ಮತ್ತು ಇನ್ನೋವಾ ಕಾರು ನಡುವೆ ಅಪಘಾತ ಸಂಭವಿಸಿದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಬೂದಿಗೆರೆಯ ನೂತನ ರಸ್ತೆಯಲ್ಲಿ ಜರುಗಿದೆ
ಕೆಂಪೇಗೌಡ ಏರ್ಪೋರ್ಟ್ನಿಂದ ಚನ್ನೈ ಕಡೆ ಇನೋವಾ ಕಾರು ಹೊರಟಿತ್ತು. ಹೊಸಕೋಟೆಯಿಂದ ಯಲಹಂಕ ಕಡೆಗೆಮತ್ತೊಂದು ಬುಲನೋ ಕಾರು ಹೊರಟಿತ್ತು. ಇದೆ ವೇಳೆ ಅಪಘಾತ ಸಂಭವಿಸಿದ್ದು, ಅದೃಷ್ಟವಶಾತ್ ಪ್ರಾಣಪಾಯದಿಂದ ಪ್ರಯಾಣಿಕರು ಪಾರಾಗಿದ್ದಾರೆ. ಸಧ್ಯ ರಸ್ತೆ ಪ್ರಾರಂಭಕ್ಕೂ ಮುನ್ನ ಇದು ಮೂರನೇ ಅಪಘಾತವಾಗಿದೆ. ಸರಣಿ ಅಪಘಾತಕ್ಕೆ ಸ್ಥಳೀಯ ಜನರು ಬೇಸತ್ತು ಹೋಗಿದ್ದಾರೆ.
ಇನ್ನು ರಸ್ತೆ ಕಾಮಗಾರಿ ಪೂರ್ಣ ಗೊಂಡಿಲ್ಲ . ಪರ್ಯಾಯ ರಸ್ತೆ ಇದ್ದರೂ ಕಾಮಗಾರಿ ಮಾಡ್ತಿರೋ ರಸ್ತೆ ಕಡೆ ವಾಹನ ಸಂಚಾರ ಮಾಡುತ್ತಿದೆ. ಒಂದು ಸ್ಪೀಡ್ ಬ್ರೇಕರ್ ಇಲ್ಲಾ ಸಂಚಾರಿ ನಾಮಪಲಕ ಇಲ್ಲಾ ಎಂದು ರಸ್ತೆ ಪ್ರಾಧಿಕಾರದ ವಿರುದ್ಧ
ಸ್ಥಳೀಯರು ಆಕ್ರೋಶ ಹೊರ ಹಾಕಿದ್ದಾರೆ.