CSK ವಿರುದ್ಧ SRH ಗೆಲುವಿನ ಬೆನ್ನಲ್ಲೇ ಪಾಯಿಂಟ್ಸ್ ಟೇಬಲ್ ನಲ್ಲಿ ಬದಲಾವಣೆ ಆಗಿದೆ. ಈ ಬಾರಿ ಪಾಯಿಂಟ್ಸ್ ಟೇಬಲ್ನಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ಅಗ್ರಸ್ಥಾನ ಅಲಂಕರಿಸಿದರೆ, ಮುಂಬೈ ಇಂಡಿಯನ್ಸ್ ಕೊನೆಯ ಸ್ಥಾನದಲ್ಲಿದೆ.
ಈ ಬಾರಿಯ ಐಪಿಎಲ್ನ ಮೊದಲ ಮೂರು ಪಂದ್ಯಗಳಲ್ಲಿ ಜಯ ಸಾಧಿಸಿ ಹ್ಯಾಟ್ರಿಕ್ ಗೆಲುವು ದಾಖಲಿಸಿರುವ ಕೊಲ್ಕತ್ತಾ ನೈಟ್ ರೈಡರ್ಸ್ ಒಟ್ಟು 6 ಅಂಕಗಳನ್ನು ಸಂಪಾದಿಸಿದೆ. ಅಲ್ಲದೆ +2.518 ನೆಟ್ ರನ್ ಹೊಂದುವ ಮೂಲಕ ಆರ್ಆರ್ ತಂಡವನ್ನು ಹಿಂದಿಕ್ಕಿ ಅಗ್ರಸ್ಥಾನ ಅಲಂಕರಿಸುವಲ್ಲಿ ಯಶಸ್ವಿಯಾಗಿದೆ.
ಬಿಜೆಪಿ ಕಾರ್ಯಕರ್ತನನ್ನು ಎನ್ಐಎ ವಶಕ್ಕೆ ಪಡೆದಿರುವ ಬಗ್ಗೆ ಆರಗ ಜ್ಞಾನೇಂದ್ರ ಸ್ಪಷ್ಟನೆ!
ರಾಜಸ್ಥಾನ್ ರಾಯಲ್ಸ್ ತಂಡವು ಇದುವರೆಗೆ ಮೂರು ಪಂದ್ಯಗಳನ್ನಾಡಿದ್ದು, ಮೂರು ಮ್ಯಾಚ್ನಲ್ಲೂ ಜಯ ಸಾಧಿಸಿದೆ. ಈ ಮೂಲಕ ಒಟ್ಟು 6 ಅಂಕಗಳೊಂದಿಗೆ ದ್ವಿತೀಯ ಸ್ಥಾನದಲ್ಲಿದೆ. ರಾಜಸ್ಥಾನ್ ರಾಯಲ್ಸ್ ತಂಡದ ಪ್ರಸ್ತುತ ನೆಟ್ ರನ್ ರೇಟ್ +1.249.
ಇನ್ನು ನಾಲ್ಕು ಪಂದ್ಯಗಳಲ್ಲಿ 2 ಜಯ ಹಾಗೂ 2 ಸೋಲಿನೊಂದಿಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಮೂರನೇ ಸ್ಥಾನದಲ್ಲಿದೆ.
ಲಕ್ನೋ ಸೂಪರ್ ಜೈಂಟ್ಸ್ ತಂಡವು ಅಂಕಪಟ್ಟಿಯಲ್ಲಿ 4ನೇ ಸ್ಥಾನದಲ್ಲಿ.
ಸನ್ರೈಸರ್ಸ್ ಹೈದರಾಬಾದ್ ತಂಡವು 4 ಪಂದ್ಯಗಳಲ್ಲಿ 2 ಜಯ ಸಾಧಿಸಿದ್ದು, ಇದೀಗ 4 ಅಂಕಗಳೊಂದಿಗೆ 5ನೇ ಸ್ಥಾನದಲ್ಲಿ ಕಾಣಿಸಿಕೊಂಡಿದೆ. ಎಸ್ಆರ್ಹೆಚ್ ತಂಡದ ನೆಟ್ ರನ್ ರೇಟ್ +0.409
ಪಂಜಾಬ್ ಕಿಂಗ್ಸ್ ತಂಡವು 6ನೇ ಸ್ಥಾನದಲ್ಲಿದ್ದು, ಆಡಿರುವ 4 ಪಂದ್ಯಗಳಲ್ಲಿ 2 ಗೆಲುವು ಸಾಧಿಸಿ 4 ಅಂಕಗಳನ್ನು ಸಂಪಾದಿಸಿದೆ.
ಆಡಿರುವ ನಾಲ್ಕು ಮ್ಯಾಚ್ಗಳಲ್ಲಿ 2 ಗೆಲುವು ದಾಖಲಿಸಿರುವ ಗುಜರಾತ್ ಟೈಟಾನ್ಸ್ ತಂಡವು 4 ಅಂಕಗಳನ್ನು ಹೊಂದಿದ್ದು, ಈ ಮೂಲಕ 7ನೇ ಸ್ಥಾನ ಅಲಂಕರಿಸಿದೆ. ಗುಜರಾತ್ ಟೈಟಾನ್ಸ್ ತಂಡದ ಪ್ರಸ್ತುತ ನೆಟ್ ರನ್ ರೇಟ್ -0.580 .
ನಾಲ್ಕು ಮ್ಯಾಚ್ಗಳಲ್ಲಿ 3 ರಲ್ಲಿ ಸೋತಿರುವ ಆರ್ಸಿಬಿ ಈ ಬಾರಿ 8ನೇ ಸ್ಥಾನದಲ್ಲಿದೆ
ನಾಲ್ಕು ಪಂದ್ಯಗಳಲ್ಲಿ ಒಂದು ಗೆಲುವು ದಾಖಲಿಸುವಲ್ಲಿ ಯಶಸ್ವಿಯಾಗಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡವು -1.347 ನೆಟ್ ರನ್ ರೇಟ್ನೊಂದಿಗೆ 2 ಅಂಕ ಪಡೆದುಕೊಂಡಿದೆ. ಅದರಂತೆ ಇದೀಗ 9ನೇ ಸ್ಥಾನದಲ್ಲಿದೆ.
ಇನ್ನು ಆಡಿರುವ ಮೂರು ಪಂದ್ಯಗಳಲ್ಲೂ ಸೋಲನುಭವಿಸಿರುವ ಮುಂಬೈ ಇಂಡಿಯನ್ಸ್ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ