ಸನ್ ರೈಸರ್ಸ್ ಹೈದರಾಬಾದ್ ತಂಡ ಐಪಿಎಲ್ನ 2024ನೇ ಆವೃತ್ತಿಯ 18ನೇ ಪಂದ್ಯದಲ್ಲಿ ಬಲಿಷ್ಠ ಸಿಎಸ್ಕೆ ತಂಡವನ್ನು ಸೋಲಿಸಿದೆ. ಇದರೊಂದಿಗೆ ಹೈದರಾಬಾದ್ ಮೂಲದ ತಂಡ ಹಾಲಿ ಆವೃತ್ತಿಯಲ್ಲಿ ಆಡಿದ ನಾಲ್ಕು ಪಂದ್ಯಗಳಲ್ಲಿ ಎರಡನೇ ಗೆಲುವು ದಾಖಲಿಸಿದೆ.
ಇಂದು RR VS RCB ಬಿಗ್ ಫೈಟ್ – ಈ ಪಂದ್ಯದಲ್ಲಾದ್ರೂ ವಿಲ್ ಜಾಕ್ಸ್ಗೆ ಚಾನ್ಸ್ ನೀಡುತ್ತಾ ಬೆಂಗಳೂರು!
ಅದ್ಭುತ ಬೌಲಿಂಗ್ ದಾಳಿ ಮಾಡಿದ ಸನ್ರೈಸರ್ಸ್ ಹೈದರಾಬಾದ್ ಚೆನ್ನೈ ತಂಡವನ್ನು 165 ರನ್ಗೆ ಕಟ್ಟಿಹಾಕಿತ್ತು. 166 ರನ್ ಟಾರ್ಗೆಟ್ ಪಡೆದ ಸನ್ರೈಸರ್ಸ್ ಹೈದರಾಬಾದ್ ಸ್ಫೋಟಕ ಆರಂಭ ಪಡೆಯಿತು. ಟ್ರಾವಿಸ್ ಹೆಡ್ ಹಾಗೂ ಅಭಿಷೇಕ್ ಶರ್ಮಾ ಆರಂಭಕ್ಕೆ ಸಿಎಸ್ಕೆ ಬೆಚ್ಚಿ ಬಿದ್ದಿತ್ತು. ಅಭಿಷೇಕ್ ಶರ್ಮಾ 12 ಎಸೆತದಲ್ಲಿ 3 ಬೌಂಡರಿ ಹಾಗೂ 4 ಸಿಕ್ಸರ್ ಮೂಲಕ 37 ರನ್ ಸಿಡಿಸಿ ಔಟಾದರು.
ಅಭಿಷೇಕ್ ಶರ್ಮಾ ಒಂದೆಡೆಯಿಂದ ಅಬ್ಬರಿಸಿದರೆ ಇತ್ತ ಟ್ರಾವಿಸ್ ಹೆಡ್ ಕೂಡ ಉತ್ತಮ ಆರಂಭ ನೀಡಿದರು. ಹೆಡ್ 24 ಎಸೆತದಲ್ಲಿ 31 ರನ್ ಸಿಡಿಸಿದರು. ಆರಂಭಿಕರ ವಿಕೆಟ್ ಪತನದ ಬಳಿಕ ಆ್ಯಡಿನ್ ಮರ್ಕ್ರಮ್ ಬ್ಯಾಟಿಂಗ್ ಹೈದರಾಬಾದ್ ತಂಡಕ್ಕೆ ನೆರವಾಯಿತು. ಇದೇ ವೇಲೆ ಮರ್ಕ್ರಮ್ ಹಾಫ್ ಸೆಂಚುರಿ ಸಿಡಿಸಿ ಮಿಂಚಿದರು. ಈ ಮೂಲಕ ಸನ್ರೈಸರ್ಸ್ ಹೈದರಾಬಾದ್ ತಂಡ ಗೆಲುವಿನ ಹಾದಿಯಲ್ಲಿ ಸಾಗಿತು.
ಆ್ಯಡಿನ್ ಮರ್ಕ್ರಮ್ 36 ಎಸೆತದಲ್ಲಿ 50 ರನ್ ಸಿಡಿಸಿದರು. ಶೆಹಬಾಜ್ ಅಹಮ್ಮದ್ 18 ರನ್ ಸಿಡಿಸಿ ಔಟಾದರು. ಹೆನ್ರಿಚ್ ಕ್ಲಾಸೆನ್ ಹಾಗೂ ನಿತೀಶ್ ರೆಡ್ಡಿ ಅಂತಿಮ ಹಂತದಲ್ಲಿ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶನ ನೀಡಿದರು. ನಿತೀಶ್ ರೆಡ್ಡಿ ಅಜೇಯ 14 ರನ್ ಹಾಗೂ ಕ್ಲಾಸೆನ್ ಅಜೇಯ 10 ರನ್ ಸಿಡಿಸಿದರು. ಈ ಮೂಲಕ ಸನ್ರೈಸರ್ಸ್ ಹೈದರಾಬಾದ್ 18.1 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು ಗುರಿ ತಲುಪಿತು.