ಬೆಂಗಳೂರು:- ಜಾಮೀನು ಸಿಕ್ಕರೂ ರೀಲ್ಸ್ ರಾಣಿ ಸೋನುಗೌಡಗೆ ಇಂದು ಸಹ ಜೈಲೇ ಗತಿ ಆಗಿದೆ. ಕಾನೂನುಬಾಹಿರವಾಗಿ ಮಗುವನ್ನು ದತ್ತು ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಗ್ಬಾಸ್ ಸ್ಪರ್ಧಿ ಸೋನು ಶ್ರೀನಿವಾಸ್ ಗೌಡ ಅವರು ಜಾಮೀನು ಪ್ರಕ್ರಿಯೆ ಪೂರ್ಣ ಮಾಡಿಲ್ಲ.
ಸಂಜೆ 7 ಗಂಟೆಯೊಳಗೆ ಜಾಮೀನು ಪ್ರತಿ ತಲುಪಬೇಕಿತ್ತು. ಆದರೆ ಇನ್ನೂ ಸಹ ಜೈಲಧಿಕಾರಿಗಳಿಗೆ ಜಾಮೀನು ಪ್ರತಿ ತಲುಪಿಲ್ಲ. ಹಾಗಾಗಿ ನಾಳೆಯವರೆಗೂ ಸೋನುಗೌಡ ಜೈಲಿನಲ್ಲೇ ಇರಲಿದ್ದು, ಪ್ರಕ್ರಿಯೆ ಪೂರ್ಣಗೊಂಡು ನಾಳೆ ಸಂಜೆ ವೇಳೆಗೆ ರಿಲೀಸ್ ಸಾಧ್ಯತೆ ಇದೆ.
ಬಿಗ್ಬಾಸ್ ಸ್ಪರ್ಧಿ ಸೋನು ಶ್ರೀನಿವಾಸ್ ಗೌಡಗೆ ನಿನ್ನೆ ಬೆಂಗಳೂರು ಗ್ರಾಮಾಂತರ ಪ್ರಧಾನ ಜಿಲ್ಲಾ ನ್ಯಾಯಾಲಯದಿಂದ ಜಾಮೀನು ಮಂಜೂರು ಮಾಡಲಾಗಿತ್ತು. ಈ ಕುರಿತಾಗಿ ಆದೇಶ ಸಹ ಹೊರಡಿಸಲಾಗಿತ್ತು. ಜೈಲಿನಿಂದ ಇಂದು ಬಿಡುಗಡೆ ಸಾಧ್ಯತೆ ಎಂದು ಹೇಳಲಾಗಿತ್ತು. ಆದರೆ ಜಾಮೀನಿನ ಷರತ್ತುಗಳು ಪೂರೈಕೆಯಾಗದ ಹಿನ್ನೆಲೆ ಇಂದು ಕೂಡ ಸೋನುಗೆ ಜೈಲೇ ಗತಿಯಾಗಿದೆ.