ಬೆಂಗಳೂರು:- ನಗರದ ಹೃದಯಭಾಗದಲ್ಲಿ ಕಟ್ಟಡವೊಂದರಲ್ಲಿ ಬೆಂಕಿ ಹೊತ್ತಿ ಉರಿದಿದೆ ಹಲವು ಕೆಲಸಗಾರರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಕಟ್ಟಡದೊಳಗೆ ಸಿಲುಕಿದವರ ರಕ್ಷಣಾ ಕಾರ್ಯಾಚರಣೆ ನಡೆದಿದೆ.
ನಿಮ್ಮ ಹೆಬ್ಬೆರಳಿನಿಂದ ನೀವು ಎಂಥವರು ಎಂದು ತಿಳಿಯಬಹುದು! – ಹೇಗೆ ಗೊತ್ತಾ!?
ಶುಕ್ರವಾರ ರಂದು ಆರ್ಟಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಟ್ಟಡದೊಳಗೆ ಬೆಂಕಿ ಕಂಡು ಬಂದಿದೆ. ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಆರ್ಟಿ ನಗರದ 80 ಅಡಿ ರಸ್ತೆಯಲ್ಲಿರುವ ಮಿರಾಕಲ್ ಡ್ರೀಂಕ್ಸ್ ಕಟ್ಟಡದಲ್ಲಿ ಈ ಅಗ್ನಿ ಅವಘಡ ಸಂಭವಿಸಿದೆ ಎಂದು ವರದಿ ಆಗಿದೆ.
ಸ್ಥಳಿಯರು ಸೇರಿದಂತೆ ಬೇರೆ ರಾಜ್ಯಗಳಿಂದ ಬಂದವರು ಸಹ ಈ ಕಟ್ಟಡದಲ್ಲಿ ಕೆಲಸ ಮಾಡುತ್ತಿದ್ದರು. ಘಟನೆಯಲ್ಲಿ ಅವರೇ ಸಿಲುಕಿಕೊಂಡಿದ್ದಾರೆ ಎನ್ನಲಾಗಿದೆ. ಬೆಂಕಿ ಕೆನ್ನಾಲಿಗೆ ಇಡೀ ಬಿಲ್ಡಿಂಗ್ ಆವರಿಸುತ್ತಿದ್ದಂತೆ ದಟ್ಟ ಹೊಗೆ ನೋಡ ನೋಡುತ್ತಿದ್ದಂತೆ ಬಾನೆತ್ತರಕ್ಕೆ ಚಿಮ್ಮಿತುಸ್ಥಳಿಯರು ಸೇರಿದಂತೆ ಬೇರೆ ರಾಜ್ಯಗಳಿಂದ ಬಂದವರು ಸಹ ಈ ಕಟ್ಟಡದಲ್ಲಿ ಕೆಲಸ ಮಾಡುತ್ತಿದ್ದರು. ಘಟನೆಯಲ್ಲಿ ಅವರೇ ಸಿಲುಕಿಕೊಂಡಿದ್ದಾರೆ ಎನ್ನಲಾಗಿದೆ. ಬೆಂಕಿ ಕೆನ್ನಾಲಿಗೆ ಇಡೀ ಬಿಲ್ಡಿಂಗ್ ಆವರಿಸುತ್ತಿದ್ದಂತೆ ದಟ್ಟ ಹೊಗೆ ನೋಡ ನೋಡುತ್ತಿದ್ದಂತೆ ಬಾನೆತ್ತರಕ್ಕೆ ಚಿಮ್ಮಿತು
ಕೂಡಲೇ ಸ್ಥಳೀಯರು ಪೊಲೀಸರಿಗೆ, ಅಗ್ನಿ ಶಾಮದ ದಳ ಸಿಬ್ಬಂದಿ ಹಾಗೂ ಮಾಧ್ಯಮಗಳಿಗೆ ಕರೆ ಮಾಡಿ ಮಾಹಿತಿ ನೀಡಿದರು. ಸದ್ಯ ಆರ್ಟಿ ನಗರದಲ್ಲಿ ಬೆಂಕಿ ಹೊತ್ತಿಕೊಂಡಿರುವ ಕಟ್ಟಡದ ಸ್ಥಳಕ್ಕೆ ಅಗ್ನಿ ಶಾಮಕ ಸಿಬ್ಬಂದಿ, ಪೊಲೀಸರು ದೌಡಾಯಿಸಿದ್ದಾರೆ.
ಬೆಂಕಿ ಹೊತ್ತಿಕೊಂಡ ಕೆಲವೇ ಕ್ಷಣಗಳಲ್ಲಿ ಸ್ಥಳೀಯರು ಕಟ್ಟಡಕ್ಕೆ ಹೊರಗೋಡೆಗೆ ಏನಿ ಇಟ್ಟು ಕಟ್ಟಡದ ಒಂದು ಬದಿ ಏರಿ ಒಳಗೆ ಸಿಲುಕಿದವರಲ್ಲಿ ಸಾಧ್ಯವಾದವರನ್ನು ರಕ್ಷಿಸಲು ಮುಂದಾಗಿದ್ದಾರೆ.
ಸದ್ಯದ ಮಾಹಿತಿ ಪ್ರಕಾರ ಯಾವುದೇ ಹಾನಿ ಆಗಿಲ್ಲ. ಅದೃಷ್ಟವಶಾತ್ ಜೀವ ಹಾನಿ, ಗಾಯಗಳು ಸಂಭವಿಸಿಲ್ಲ ಎನ್ನಲಾಗಿದೆ. ಮೇಲ್ನೋಟಕ್ಕೆ ಶಾರ್ಟ್ ಸರ್ಕ್ಯೂಟ್ನಿಂದ ಈ ಘಟನೆ ನಡೆದಿರುಬಹದು ಎಂದು ಶಂಕಿಸಲಾಗಿದೆ.