ಬೆಂಗಳೂರು: ರೀಲ್ಸ್ ರಾಣಿ, ಮಾಜಿ ಬಿಗ್ ಬಾಸ್ ಸ್ಪರ್ಧಿ ಸೋನು ಶ್ರೀನಿವಾಸ್ ಗೌಡಗೆ ಕಾನೂನು ಬಾಹಿರವಾಗಿ ಮಗುವನ್ನು ದತ್ತು ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ ಜಾಮೀನು ಮಂಜೂರಾಗಿತ್ತು. ಪಿಡಿಜೆ ಕೋರ್ಟ್ ನಿಂದ ಇಬ್ಬರು ಶ್ಯೂರಿಟಿ ಹಾಗೂ ಒಂದು ಲಕ್ಷ ರೂಪಾಯಿ ಬಾಂಡ್ ನೀಡಲು ಸೂಚಿಸಿ, ಷರತ್ತು ಬದ್ಧ ಜಾಮೀನು ನೀಡಿತ್ತು. ಹಾಗಾಗಿ ಜೈಲಿನಿಂದ ಇಂದು ಸೋನು ಬಿಡುಗಡೆ (Released)ಆಗಲಿದ್ದಾರೆ.
private Bus Rate: ಯುಗಾದಿ ಹಬ್ಬಕ್ಕೆ ಸಾಲು ಸಾಲು ರಜೆ: ಖಾಸಗಿ ಬಸ್ʼಗಳ ದರ ಕೇಳಿದ್ರೆ ಸುಸ್ತೋ ಸುಸ್ತು!
ಅಕ್ರಮವಾಗಿ ಮಗುವನ್ನು ಮನೆಯಲ್ಲಿಟ್ಟುಕೊಂಡಿರುವ ಆರೋಪದ ಮೇಲೆ ಬಂಧನವಾಗಿದ್ದ (Arrest) ರೀಲ್ಸ್ ರಾಣಿ ಸೋನು ಶ್ರೀನಿವಾಸ್ ಗೌಡ (Sonu Srinivas Gowda) ಪೊಲೀಸ್ ಠಾಣೆಯಲ್ಲಿ ಗೋಳಾಡಿದ್ದರು. ಮಗುವನ್ನು ಕರೆದುಕೊಂಡು ಬಂದಿರುವ ವಿಷಯದಲ್ಲಿ ನನ್ನಿಂದ ಯಾವುದೇ ತಪ್ಪು ಆಗಿಲ್ಲವೆಂದು ಹೇಳಿಕೊಂಡಿದ್ದರು.
ಮಗುವನ್ನು ಅಕ್ರಮವಾಗಿ ಮನೆಯಲ್ಲಿಟ್ಟುಕೊಂಡಿರುವ ವಿಚಾರವಾಗಿ ದೂರು ದಾಖಲಿಸಿಕೊಂಡಿದ್ದ ಬ್ಯಾಡರಹಳ್ಳಿ ಪೊಲೀಸರು ಮಾರ್ಚ್ 22ರಂದು ಬಂಧಿಸಿದ್ದರು. ಪೊಲೀಸರು ಹಾಗೂ CWC ಅಧಿಕಾರಿಗಳಿಂದ ಸೋನು ವಿಚಾರಣೆ ನಡೆದಿತ್ತು.