ನವದೆಹಲಿ: ಲೋಕಸಭಾ ಚುನಾವಣೆಯ (Lok Sabha Election) ಹಿನ್ನೆಲೆಯಲ್ಲಿ ಕಾಂಗ್ರೆಸ್ (Congress) ಚುನಾವಣಾ ಪ್ರಣಾಳಿಕೆಯನ್ನು (Election Manifesto) ಬಿಡುಗಡೆ ಮಾಡಿದ್ದು ದೇಶಾದ್ಯಂತ ಜಾತಿಗಣತಿ (Caste Census) ಮಾಡುವುದಾಗಿ ಭರವಸೆ ನೀಡಿದೆ. ದೆಹಲಿಯ ಕೇಂದ್ರ ಕಚೇರಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ವೇಣುಗೋಪಾಲ್, ಚಿದಂಬರಂ ಅವರು ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದರು.
ಒಂದೇ ರೂಂನಲ್ಲಿ ಗಂಡ-ಹೆಂಡತಿ, ಸ್ನೇಹಿತೆಯ ನಿಗೂಢ ಸಾವು: ವಾಮಾಚಾರಕ್ಕೆ ಬಲಿಯಾದ್ರಾ..?
ನಿರುದ್ಯೋಗವನ್ನು ಕೇಂದ್ರೀಕರಿಸಿ, ಸಾಮಾಜಿಕ ಆರ್ಥಿಕ ಜಾತಿ ಗಣತಿ ಮಾಡುವುದಾಗಿ ಕಾಂಗ್ರೆಸ್ ಭರವಸೆ ನೀಡಿದೆ. ಪ್ರಣಾಳಿಕೆಯ ಮುಖಪುಟದಲ್ಲಿ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಮತ್ತು ರಾಹುಲ್ ಗಾಂಧಿ (Rahul Gandhi) ಅವರ ಚಿತ್ರವಿದೆ. ಪ್ರಣಾಳಿಕೆಗೆ ʼನ್ಯಾಯ ಪತ್ರʼ ಎಂದು ಹೆಸರನ್ನು ಇಡಲಾಗಿದ್ದು ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆಯ ಫೋಟೋವನ್ನು ಹಾಕಲಾಗಿದೆ.
कांग्रेस अध्यक्ष श्री @kharge, CPP चेयरपर्सन श्रीमती सोनिया गांधी जी, पूर्व अध्यक्ष श्री @RahulGandhi, मैनिफेस्टो समिति अध्यक्ष श्री @PChidambaram_IN और कांग्रेस महासचिव (संगठन) श्री @kcvenugopalmp ने लोकसभा चुनाव, 2024 के लिए कांग्रेस का 'न्याय पत्र' लॉन्च किया।… pic.twitter.com/FIDauJzS8a
— Congress (@INCIndia) April 5, 2024
ಪ್ರಣಾಳಿಕೆಯಲ್ಲಿರುವ ಪ್ರಮುಖ ಅಂಶಗಳು
– ದೇಶಾದ್ಯಂತ ಜಾತಿ ಗಣತಿ, ಹಿರಿಯ ನಾಗರಿಕರಿಗೆ ಸಾರ್ವಜನಿಕ ಸಾರಿಗೆ (ರೈಲು ಮತ್ತು ರಸ್ತೆ) ಯಲ್ಲಿ ರಿಯಾಯಿತಿ ದರದಲ್ಲಿ ಪ್ರಯಾಣ ಮರುಜಾರಿ
– ಜಿಲ್ಲೆಗೊಂದು ಸರ್ಕಾರಿ ಮೆಡಿಕಲ್ ಕಾಲೇಜು/ಆಸ್ಪತ್ರೆ
– ಆಶಾ,ಅಂಗನವಾಡಿ, ಬಿಸಿಯೂಟ ಕಾರ್ಯಕರ್ತೆಯರ ಕೇಂದ್ರದ ಪಾಲು ದ್ವಿಗುಣ
– 2500ಕ್ಕಿಂತ ಜನಸಂಖ್ಯೆ ಜಾಸ್ತಿ ಇರುವ ಹಳ್ಳಿಗಳಲ್ಲಿ ಎರಡನೇ ಆಶಾ ಕಾರ್ಯಕರ್ತೆ ನೇಮಕ
– 12ನೇ ತರಗತಿಯವರೆಗೆ ಮಧ್ಯಾಹ್ನದ ಬಿಸಿಯೂಟ