ದೆಹಲಿ:– ಮನೆಯೊಂದರ ಕಪಾಟಿನಲ್ಲಿ 26 ವರ್ಷದ ಮಹಿಳೆಯ ಶವ ಪತ್ತೆಯಾದ ಘಟನೆ ಜರುಗಿದ್ದು, ಲಿವ್ ಇನ್ ಸಂಗಾತಿ ಕೈವಾಡ ಶಂಕೆ ವ್ಯಕ್ತವಾಗಿದೆ. ನೈಋತ್ಯ ದೆಹಲಿಯ ದ್ವಾರಕಾದಲ್ಲಿರುವ ಮನೆಯೊಂದರಲ್ಲಿ ಘಟನೆ ಜರುಗಿದೆ.
ಮಹಿಳೆಯ ತಂದೆ ಕೆಲವು ದಿನಗಳಿಂದ ಮಗಳಿಗೆ ಕರೆ ಮಾಡುತ್ತಿದ್ದರು ಆದರೆ ಆ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಇಲ್ಲದ ಕಾರಣ ಪೊಲೀಸರಿಗೆ ದೂರು ನೀಡಿದ್ದರು. ಬುಧವಾರ ರಾತ್ರಿ ಪೊಲೀಸರಿಗೆ ಕರೆ ಬಂದಿದೆ, ಮಹಿಳೆಯ ತಂದೆ ತನ್ನ ಮಗಳನ್ನು ಕೊಲೆ ಮಾಡಿರಬಹುದು ಎಂದು ಅನುಮಾನ ವ್ಯಕ್ತಪಡಿಸಿದ್ದರು
ರಸ್ತೆ ಬದಿ ನಿಂತಿದ್ದ KSRTC ಬಸ್ ಗೆ ಡಿಕ್ಕಿ, ಗಾಯಾಳುಗಳು ಆಸ್ಪತ್ರೆಗೆ ದಾಖಲು!
ನಂತರ ದಾಬ್ರಿ ಪೊಲೀಸ್ ಠಾಣೆಯ ತಂಡವು ದ್ವಾರಕಾದ ರಾಜಪುರಿ ಪ್ರದೇಶದಲ್ಲಿ ಹೇಳಿದ ಮನೆಗೆ ಹೋಗಿದ್ದಾರೆ. ಫ್ಲಾಟ್ಗೆ ತೆರಳಿದಾಗ ಆಕೆಯ ಮೃತದೇಹವು ರೂಮಿನ ಕಪಾಟಿನಲ್ಲಿ ಪತ್ತೆಯಾಗಿದೆ. ಮಹಿಳೆಯ ತಂದೆ, ತನ್ನ ಮಗಳನ್ನು ಆಕೆಯ ಲೈವ್-ಇನ್ ಸಂಗಾತಿ ವಿಪಾಲ್ ಹತ್ಯೆ ಮಾಡಿದ್ದಾನೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ
ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಡಿಡಿಯು ಆಸ್ಪತ್ರೆಯ ಶವಾಗಾರಕ್ಕೆ ವರ್ಗಾಯಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಗುಜರಾತ್ನ ಸೂರತ್ ಮೂಲದ ಆರೋಪಿ ವಿಪಾಲ್ ಪತ್ತೆಗೆ ಪ್ರಯತ್ನಗಳು ನಡೆಯುತ್ತಿವೆ ಎಂದು ಅಧಿಕಾರಿ ತಿಳಿಸಿದ್ದಾರೆ