ದೇವನಹಳ್ಳಿ:- ನನ್ನ ಹೃದಯದಲ್ಲಿ ಮೋದಿ ಹಾಗೂ ಶ್ರೀರಾಮ ಇದ್ದಾರೆ ಎಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ಸುಮಲತಾ ಬಿಜೆಪಿಗೆ ಬಂದಿರುವುದು ಸ್ವಾಗತ. ಬಿಜೆಪಿಗೆ ಯಾರೆಲ್ಲ ಬರುತ್ತಾರೋ ಅವರಿಗೆಲ್ಲಾ ಸ್ವಾಗತ. ನರೇಂದ್ರ ಮೋದಿ ಮತ್ತೆ ದೇಶದ ಪ್ರಧಾನಿಯಾಗಬೇಕು. ನನ್ನ ಹೃದಯದಲ್ಲಿ ಮೋದಿ ಹಾಗೂ ಶ್ರೀರಾಮ ಇದ್ದಾರೆ. ಮೋದಿಗೆ ಬೆಂಬಲ ಕೊಡದಿದ್ರೆ ನನ್ನ ಕೈಕಟ್ ಆಗಿಬಿಡುತ್ತೆ. ಚುನಾವಣೆಯಲ್ಲಿ ಗೆದ್ದ ಮೇಲೆ ಮೋದಿ ಬಳಿ ಹೋಗುತ್ತೇನೆ ಎಂದಿದ್ದಾರೆ.
ಇನ್ನೂ ಚುನಾವಣೆಗೆ ಸ್ಪರ್ಧಿಸಲು ದೆಹಲಿ ಯಾತ್ರೆ ಭಗವಂತ ಕೊಟ್ಟ ವರ. ಏ.12ರಂದು ಬೃಹತ್ ಮೆರವಣಿಗೆ ಮೂಲಕ ನಾಮಪತ್ರ ಸಲ್ಲಿಸುತ್ತೇನೆ. ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ನಿಂದಲೂ ನನಗೆ ಬೆಂಬಲ ಸಿಗುತ್ತಿದೆ ಎಂದು ಹೇಳಿದ್ದಾರೆ.
ದೆಹಲಿಯಲ್ಲಿ ಗೃಹ ಸಚಿವ ಅಮಿತ್ ಶಾ ಭೇಟಿಗೆ ಅವಕಾಶ ಕೊಟ್ಟಿಲ್ಲ. ಬೇಡಿಕೆಯಿಟ್ಟಿದ್ದ ಪ್ರಶ್ನೆಗೆ ಉತ್ತರಿಸಲಾಗದೆ ಭೇಟಿಗೆ ಅವಕಾಶ ನೀಡಿಲ್ಲ. ದೇಶದಲ್ಲಿ ಕಾಂಗ್ರೆಸ್ನಿಂದ ಕುಟುಂಬ ರಾಜಕಾರಣ ನಡೆಯುತ್ತಿದೆ. ಕರ್ನಾಟಕದಲ್ಲಿ ಬಿಎಸ್ ಯಡಿಯೂರಪ್ಪ ಕುಟುಂಬ ರಾಜಕಾರಣ ನಡೆಯುತ್ತಿದೆ. ಹೀಗಾಗಿ ಅವರ ವಿರುದ್ಧ ರಾಜ್ಯದಲ್ಲಿ ಹೋರಾಟ ಮಾಡ್ತಿದ್ದೀನಿ ಎಂದು ಹೇಳಿದ್ದಾರೆ