ಚಿಕ್ಕಬಳ್ಳಾಪುರ:– ಎಂದೂ ನಾನು ರಾಜಕೀಯ ಜಾತಿ ಮಾಡಿದವನಲ್ಲ ಎಂದು ಹೇಳಿ ಮಾಜಿ ಸಚಿವ ಕೆ ಸುಧಾಕರ್ ಬಿಕ್ಕಿ-ಬಿಕ್ಕಿ ಕಣ್ಣೀರು ಹಾಕಿದ್ದಾರೆ.
ನಿಖಿಲ್ ಗೆ ಮಾಡಿದಂತೆ ಮಂಜುನಾಥ ಗೆ ಮೋಸ ಮಾಡ್ಬೇಡಿ – ರಾಮನಗರ ಜನತೆಗೆ ಮುನಿರತ್ನ ಮನವಿ!
ನಾನು ಎಂದೂ ರಾಜಕೀಯ ಜಾತಿ ಮಾಡಿದವನಲ್ಲ. ನನ್ನನ್ನ ಜಾತಿಯಿಂದ ನೋಡಬೇಡಿ. ಎಲ್ಲ ಸಮುದಾಯಗಳನ್ನ ನಾನು ಸಮನಾಗಿ ಕಾಣುತ್ತೇನೆ ಅಂತ ಭಗವಂತನ ಮೇಲೆ ಪ್ರಮಾಣ ಮಾಡುತ್ತೇನೆ ಎಂದರು.
ಮಣ್ಣಿನ ಮಗನಾಗಿ ನನಗೆ ಮತ್ತೊಮ್ಮೆ ಸೇವೆ ಮಾಡಲು ಅವಕಾಶ ಮಾಡಿಕೊಡಿ. ನನ್ನನ್ನು ದೂರ ಮಾಡಿದ್ದೀರಿ. 10 ತಿಂಗಳಿಂದ ನಾನು ಅಜ್ಞಾತವಾಸ ಅನುಭವಿಸಿದ್ದೇನೆ. ನಾನೇನು ತಪ್ಪು ಮಾಡಿಲ್ಲ, ನಿಮ್ಮ ಸೇವೆಯನ್ನ ಮಗನಾಗಿ ಮಾಡುತ್ತೇನೆ. ಮತ್ತೊಮ್ಮೆ ಅವಕಾಶ ಕೊಡಿ ಅಂತ ಭಾವುಕರಾಗಿ ಕಣ್ಣೀರಿಟ್ಟರು
ಬಳಿಕ ಮಾತನಾಡಿದ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಜೆಡಿಎಸ್- ಬಿಜೆಪಿ ಮೈತ್ರಿ ನಮ್ಮ ಸ್ವಾರ್ಥಕ್ಕಾಗಿ ಅಲ್ಲ. ಸುಧಾಕರ್ ಹಾಗೂ ನಾನು ಸೇರಿ ಬಯಲುಸೀಮೆಗೆ ಶಾಶ್ವತ ನೀರಾವರಿ ಯೋಜನೆಗಳನ್ನ ತರುತ್ತೇವೆ. ಇಲ್ಲವಾದಲ್ಲಿ ನಾವು ರಾಜಕೀಯದಿಂದಲೇ ನಿವೃತ್ತಿ ಆಗುತ್ತೇವೆ ಅಂತ ಸಾವಲು ಹಾಕಿದರು.