ರಾಮನಗರ:- ನಿಖಿಲ್ ಗೆ ಮಾಡಿದಂತೆ ಮಂಜುನಾಥ ಗೆ ಮೋಸ ಮಾಡ್ಬೇಡಿ ಎಂದು ರಾಮನಗರ ಜನತೆಗೆ ಮುನಿರತ್ನ ಮನವಿ ಮಾಡಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮುಗ್ದ ಯುವಕನನ್ನ 5 ಸಾವಿರದ ಗಿಫ್ಟ್ ಕಾರ್ಡ್ ಕೊಟ್ಟು ಸೋಲಿಸಿದರು. ಆ ದೇವರು ನಿಮ್ಮನ್ನ ಕ್ಷಮಿಸಲ್ಲ. ಆ ಪಾಪಕ್ಕೆ ಪ್ರಾಯಶ್ಚಿತ್ತ ಆಗಬೇಕು ಅಂದ್ರೆ ಮಂಜುನಾಥ್ ಅವರನ್ನ ಗೆಲ್ಲಿಸಬೇಕು ಅಂತಾ ಜನತೆಗೆ ಕರೆ ನೀಡಿದ್ದಾರೆ
ರಾಜ್ಯ ಸರ್ಕಾರ ತನ್ನ ಖಜಾನೆಯಿಂದ ಬರ ಪರಿಹಾರ ನೀಡಿ ಗಂಡಸ್ತನ ತೋರಿಸಲಿ: ಬಸವರಾಜ ಬೊಮ್ಮಾಯಿ!
ಡಾ.ಮಂಜುನಾಥ್ ಅವರು 75 ಲಕ್ಷ ಆಪರೇಷನ್ ಮಾಡಿದ್ದಾರೆ. ಆರೋಗ್ಯ ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸಿದ್ದಾರೆ. ಇವರ ಸ್ಪರ್ಧೆಯಿಂದ ಇಲ್ಲಿ ಅಣ್ಣತಮ್ಮಂದಿರ ಹೃದಯ ಬಡಿತ ಜಾಸ್ತಿ ಆಗಿದೆ. ಹೆಂಗೋ ಕುಕ್ಕರು, ತವ ಕೊಟ್ಟು ಗೆಲ್ತಿದ್ವಿ, ಈಗ ಡಾಕ್ಟರ್ ವಕ್ಕರಿಸಕೊಂಡ್ರು ಅಂತ ಟೆನ್ಷನ್ ಮಾಡಿಕೊಂಡಿದ್ದಾರೆ. ಧರ್ಮಸ್ಥಳದ ಮಂಜುನಾಥ ನಂತೆ ನಮ್ಮ ಡಾ.ಮಂಜುನಾಥ್. 91 ವರ್ಷ ವಯಸ್ಸಿನ ದೇವೆಗೌಡರ ಮಾತುಕೇಳಿದ್ರೆ ಮೈ ರೋಮಾಂಚನ ಆಗುತ್ತೆ. ಸಿದ್ದರಾಮಯ್ಯಗೆ ಜನತಾದಳ ಇರೋದನ್ನ ತೋರಿಸುತ್ತೇನೆ ಅಂತಾ ಎಚ್ಚರಿಸುತ್ತಾರೆ. ಅದಕ್ಕೆ ಕಾರಣ ರಾಮನಗರದ ಜನ. ಮಂಜುನಾಥ್ರಿಗೆ ವೋಟ್ ಮಾಡಿದ್ರೆ ದೇವಾನು ದೇವತೆಗಳು ತಥಾಸ್ತು ಅಂತಾರೆ. ಅವರಿಗೆ ವೋಟ್ ಹಾಕದಿದ್ದರೆ ಯಮ ನರಕಕ್ಕೆ ಕಳುಹಿಸ್ತಾನೆ ಎಂದು ನುಡಿದಿದ್ದಾರೆ