ಉತ್ತರ ಕನ್ನಡ:- ಶೀಘ್ರದಲ್ಲೇ ಕುಟುಂಬ ರಾಜಕಾರಣದಿಂದ ಬಿಜೆಪಿ ಮುಕ್ತವಾಗಲಿದೆ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ಯಾರ್ಯಾರು ಅಸಮಾಧಾನಿತರು ಇದ್ದಾರೋ ಅವರಿಗೆ ವಿನಂತಿ ಮಾಡುವೆ. ವೈಯಕ್ತಿಕ ವಿಚಾರ ಬಿಟ್ಟು, ನರೇಂದ್ರ ಮೋದಿಗಾಗಿ ನಾವೆಲ್ಲರೂ ಕೂಡಿ ಕೆಲಸ ಮಾಡೋಣ. ಹಿಂದುತ್ವದ ರಾಜಕಾರಣಿಗಳನ್ನು ಯಾವತ್ತೂ ಮುಗಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ನನಗೆ ವಿಪಕ್ಷ ನಾಯಕನಾಗುವ ಅರ್ಹತೆ ಇದ್ದರೂ ಸಹ ಮಾಡಲಿಲ್ಲ. ಜೂನ್ 4ರ ನಂತರ ಕುಟುಂಬ ರಾಜಕಾರಣದಿಂದ ಬಿಜೆಪಿ ಮುಕ್ತವಾಗುತ್ತೆ. ನನಗೆ ಹೈಕಮಾಂಡ್ ಭರವಸೆ ನೀಡಿದೆ ಎಂದರು.
ಹೈಕಮಾಂಡ್ K.S.ಈಶ್ವರಪ್ಪ ಹೇಳುವ ವಿಚಾರವನ್ನು ಗಂಭೀರವಾಗಿ ಪರಿಗಣಿಸಬೇಕು. ಪಕ್ಷಕ್ಕೆ ಮುಜುಗರ ಆಗದ ರೀತಿಯಲ್ಲಿ ಎಲ್ಲಾ ಸಮಸ್ಯೆ ಬಗೆಹರಿಸಬೇಕು. ನಾನು ಹೈಕಮಾಂಡ್ಗೆ ವಿನಂತಿ ಮಾಡಿಕೊಳ್ಳುತ್ತೇನೆ. ಲೋಕಸಭೆಲ್ಲಿ 28 ಕ್ಷೇತ್ರದಲ್ಲಿ ಗೆಲ್ಲುವುದು ನಮ್ಮೆಲ್ಲರ ಗುರಿ ಎಂದಿದ್ದಾರೆ.