ಕಲಬುರಗಿ: ದಾಖಲೆ ಇಲ್ಲದೇ ಸಾಗಿಸುತಿದ್ದ 30 ಲಕ್ಷ ರೂಪಾಯಿ ಪತ್ತೆ ಮಾಡುವಲ್ಲಿ ಕಲಬುರಗಿಯ ಚುನಾವಣಾ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ..ಸೇಡಂ ತಾಲೂಕಿನ ಮೇದಕ್ ಚಕ್ ಪೋಸ್ಟ್ ಬಳಿ ಕಾರ್ ತಪಾಸಣೆ ವೇಳೆ ಕಂತೆ ಕಂತೆ ನೋಟು ಸಿಕ್ಕಿವೆ..
ನಾರಾಯಣಪುರದಿಂದ ಕೊಡಂಗಲ್ ಕಡೆ ಕಾರ್ ಹೊರಟಿದ್ದು ಇಬ್ಬರನ್ನ ಮುಧೋಳ ಪೋಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈವೇಳೆ ಒಂದೂವರೆ ಲಕ್ಷ ಮೌಲ್ಯದ ಸೀರೆಗಳನ್ನು ಸಹ ಜಪ್ತಿಮಾಡಲಾಗಿದೆ.