ಸಾಮಾನ್ಯವಾಗಿ ನಮ್ಮ ಭಾರತದಲ್ಲಿ ಆಪಲ್ ಕೃಷಿ ಎಂದ ತಕ್ಷಣ ಕಾಶ್ಮೀರವೇ ನೆನಪಾಗುವುದು. ಇದುವರೆಗೂ ನಮ್ಮ ಮನಸ್ಸಿನಲ್ಲಿ ಎಂತಹ ಭಾವನೆ ಹುಟ್ಟಿದೆ ಎಂದರೆ ಕಾಶ್ಮೀರದ ವಾತಾವರಣ ಮಾತ್ರ ಆಪಲ್ ಬೆಳೆಯಲು ಸೂಕ್ತವಾಗಿದೆ ಎಂದು ಆದರೆ ಇದು ತಪ್ಪು ಇತರೆ ಭಾಗಗಳಲ್ಲೂ ಕೂಡ ಆಪಲ್ ಬೆಳೆಯಬಹುದು ಎನ್ನುವುದನ್ನು ನಮ್ಮ ರಾಜ್ಯದ ಕೋಲಾರ ಜಿಲ್ಲೆಯ ರೈತರೊಬ್ಬರು ಸಾಧಿಸಿ ತೋರಿಸಿಕೊಟ್ಟಿದ್ದಾರೆ.
ಮಗ ಹೇಳಿದ ಒಂದು ಮಾತಿನಿಂದ ಪ್ರೇರಣೆಗೊಂಡು ಕೃಷಿಯಲ್ಲಿಯೇ ಬಹಳ ದುಡ್ಡು ಮಾಡುವ ರೀತಿ ಪ್ಲಾನ್ ಮಾಡಬೇಕು ಎಂದುಕೊಂಡ ರೈತನ ಮನಸ್ಸಿನಲ್ಲಿ ಹುಟ್ಟಿದ ಒಂದೇ ಆಲೋಚನೆ ಆಪಲ್ ಕೃಷಿಯನ್ನೇ ಮಾಡಬೇಕು ಎಂದು ಅದಕ್ಕಾಗಿ ಇವರು ಪಟ್ಟ ಕಷ್ಟ ಅಷ್ಟಿಷ್ಟಲ್ಲ.
ಕೃಷಿ ಇಲಾಖೆ ಹಾಗೂ ತೋಟಗಾರಿಕೆ ಇಲಾಖೆಯಲ್ಲೂ ಕೂಡ ಅಪಲ್ ಕೃಷಿ ಮಾಡುವುದಕ್ಕೆ ಮಾಹಿತಿ ಕೇಳಿದಾಗ ಅದರ ಬದಲು ಹಣ್ಣು ಅಥವಾ ಹೂವಿನ ಖುಷಿ ಮಾಡುವಂತೆ ಸಲಹೆ ನೀಡಿದ್ದರಂತೆ ಅಧಿಕಾರಿಗಳು ಆದರೂ ಹಠ ಬಿಡದೆ ಈ ರೈತ ತಾನೇ ಹಲವು ಮಾಹಿತಿಗಳನ್ನು ಕಲೆ ಹಾಕಲು ಶುರು ಮಾಡಿದರು.
ಅವರ ಆಸಕ್ತಿ ಅವರನ್ನು ಬಹಳ ಕಡೆ ಸುತ್ತಾಡಿಸಿತು ಕೊನೆಗೆ ಕರ್ನಾಟಕದಲ್ಲಿ ಇತರೆ ಭಾಗಗಳಲ್ಲಿ ಎಲ್ಲೆಲ್ಲಿ ಆಪಲ್ ಕೃಷಿ ಮಾಡುತ್ತಿದ್ದಾರೆ ಎಂದು ತಿಳಿದುಕೊಂಡು ಒಂದೆರಡು ಕಡೆ ವಿಚಾರಿಸಿದ ಇವರಿಗೆ ಎಲ್ಲಿಯೂ ಸರಿಯಾದ ಮಾಹಿತಿ ಸಿಗಲಿಲ್ಲವಂತೆ ಆಗ ಅವರು ಎಲ್ಲಿ ಖರೀದಿ ಮಾಡುತ್ತಿದ್ದರು ಅವರ ಮಾಹಿತಿ ತಿಳಿದುಕೊಂಡು ಕಾಶ್ಮೀರಕ್ಕೆ ಹೋಗಿ ಕಾಂಟಾಕ್ಟ್ ಮಾಡಿ ಒಂದು ಗಿಡಕ್ಕೆ 300 ರೂಪಾಯಿಗಿಂತ ಒಂದು ಎಕರೆಗೆ ಒಟ್ಟು 440 ಗಿಡಗಳನ್ನು ಖರೀದಿಸಿದ್ದರಂತೆ.
ಈ ಸುದ್ದಿ ಓದಿ:-10*10 ರೂಮ್ ನಲ್ಲಿ ಫಾಲ್ ಸೀಲಿಂಗ್ ಮಾಡಿಸಲು ತಗಲುವ ವೆಚ್ಚವೆಷ್ಟು.?
ಆದರೆ ಅದರಲ್ಲಿ 150 ಗಿಡ ವೇಸ್ಟ್ ಆಯಿತು ಮತ್ತೆ ಹಾಕಬೇಕಾಯಿತು ಹಾಗಾಗಿ ನಮ್ಮ ಜಮೀನಲ್ಲಿ ಎರಡು ಬಗೆಯ ಗಿಡಗಳು ಸಿಗುತ್ತದೆ. ಒಂದು ಒಂದೂವರೆ ಅಡಿ ಗಿಡ ಕೊಡುತ್ತಾರೆ ನಾನು ಕಪ್ಪು ಮಣ್ಣು ನಂತರ ಜಮೀನಿನ ಮಣ್ಣು ಕೊಟ್ಟಿಗೆ ಗೊಬ್ಬರ ನಂತರ ನಮ್ಮ ಜಮೀನಿನ ಮಣ್ಣು ಬೇವಿನ ಹಿಂಡಿ ಮತ್ತು ನಮ್ಮ ಜಮೀನ ಮಣ್ಣು ಈ ರೀತಿಯಾಗಿ ಮಿಶ್ರಣ ಮಾಡಿ ಗಿಡಗಳನ್ನು ನೆಟ್ಟು ಸ್ವಲ್ಪ ಎತ್ತರಕ್ಕೆ ಬಂದ ಮೇಲೆ ಅದರ ಕವಲುಗಳನ್ನು ಕಡಿಯಬೇಕು ಆಗ ಸಮೃದ್ಧವಾಗಿ ಹಬ್ಬಲು ಶುರುವಾಗುತ್ತದೆ ಎನ್ನುವುದನ್ನು ಅರಿತುಕೊಂಡೆ.
ಆಪಲ್ ಸಾಮಾನ್ಯವಾಗಿ ಕಸಿಮಾಡಿ ಗಿಡ ಕೊಡುವುದು, ಸಾವಯವ ಗೊಬ್ಬರವನ್ನು ಹಾಕುತ್ತೇನೆ ಬೇವಿನ ಎಣ್ಣೆಯನ್ನು ಸ್ಪ್ರೇ ಹಾಕಿ ಮಾಡುತ್ತೇನೆ ದಿನಕ್ಕೆ ಒಂದು ಗಂಟೆ ನೀರು ಕಟ್ಟುತ್ತೇನೆ ಅಷ್ಟೇ. ಆಸಕ್ತಿ ಇರುವ ಯಾರು ಬೇಕಾದರೂ ಇಂದು ನನ್ನ ಜಮೀನಿಗೆ ಬಂದು ಕೇಳಿ ತಿಳಿದುಕೊಂಡು ಹೋಗಬಹುದು ಎಂದು ಧೈರ್ಯ ಕೊಡುತ್ತಾರೆ.
ಆರಂಭದಲ್ಲಿ ಇವರ ಬಗ್ಗೆ ಬಹಳ ತಾತ್ಸಾರ ಮಾಡಿದ್ದರಂತೆ ನಮ್ಮ ಕಡೆ ಆಪಲ್ ಬೆಳೆಯುವುದಕ್ಕೆ ಆಗುವುದಿಲ್ಲ ನಿನಗೆ ಮೋ’ಸ ಮಾಡಿ ಬೇರೆ ಗಿಡ ಕೊಡುತ್ತಿದ್ದಾರೆ ಎನ್ನುತ್ತಿದ್ದವರು ಇಂದು ಬೆಳೆಬಂದ ಮೇಲೆ ಅವರೇ ಕೊಂಡು ಹೋಗುತ್ತಿದ್ದಾರಂತೆ ವರ್ಷಕ್ಕೆ ಒಂದು ಸೀಸನ್ ನಲ್ಲಿ ಈ ಬೆಳೆ ಬರುತ್ತದೆ.