ಸ್ಯಾಂಡಲ್ವುಡ್ ನಟಿ, ಬಿಗ್ ಬಾಸ್ ಕನ್ನಡ 7ರ ಸ್ಪರ್ಧಿ ದೀಪಿಕಾ ದಾಸ್ ಇತ್ತೀಚೆಗೆ ದೀಪಕ್ ಎಂಬುವವರ ಜೊತೆ ಮದುವೆಯಾಗಿದ್ದಾರೆ. ಇದೀಗ ಪತಿ ಜೊತೆ ದೀಪಿಕಾ ದಾಸ್ ವೆಕೇಷನ್ ಮೂಡ್ನಲ್ಲಿದ್ದಾರೆ. ಟರ್ಕಿಗೆ ತೆರಳಿರುವ ಜೋಡಿ ನಟಿಯ ಸುಂದರ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಪತಿ ಜೊತೆ ದೀಪಿಕಾ ಟರ್ಕಿಗೆ ತೆರಳಿದ್ದು, ರೆಕ್ಕೆಯನ್ನು ಬೆನ್ನಿಗೆ ಸಿಕ್ಕಿಸಿ, ಕಲರ್ಫುಲ್ ಡ್ರೆಸ್ನಲ್ಲಿ ನಟಿ ಮಿಂಚಿದ್ದಾರೆ. ಯಾವಾಗಲೂ ಸೂರ್ಯನ ಕಿರಣಕ್ಕೆ ಮುಖ ಒಡ್ಡಿಕೊಳ್ಳಿ, ಆಗ ನೆರಳು ನಿಮ್ಮ ಹಿಂದೆಯೇ ಉಳಿಯುತ್ತದೆ ಎಂದು ಕ್ಯಾಪ್ಷನ್ ನೀಡಿದ್ದಾರೆ.
ದೀಪಿಕಾ ದಾಸ್ಗೆ ಗೋವಾದಲ್ಲಿ ಆಪ್ತರ ಸಮ್ಮುಖದಲ್ಲಿ ಹಸೆಮಣೆ ಏರಿದ್ದರು. ಬಳಿಕ ಬೆಂಗಳೂರಿನಲ್ಲಿ ಅದ್ದೂರಿಯಾಗಿ ಆರತಕ್ಷತೆ ಹಮ್ಮಿಕೊಳ್ಳಲಾಗಿತ್ತು. ದೀಪಿಕಾ ಉದ್ಯಮಿ ದೀಪಕ್ ಎಂಬವವರ ಜೊತೆ ಹಸೆಮಣೆ ಏರಿದ್ದಾರೆ.