ಉಡುಪಿ:- ಸಂವಿಧಾನ ಬದಲಿಸುವಂತಹ ಕೆಲಸ ಮೋದಿ ಯಾವತ್ತು ಮಾಡಲ್ಲ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು, ಬಿಜೆಪಿ ಬಂದರೆ ಸಂವಿಧಾನ ಬದಲಾವಣೆ ಮಾಡುತ್ತಾರೆ ಎಂಬುದು ಕೇವಲ ಭ್ರಮೆ. ಯಾವ ಕಾರಣಕ್ಕೂ ನರೇಂದ್ರ ಮೋದಿ ಭಾರತದ ಸಂವಿಧಾನವನ್ನು ಬದಲಾವಣೆ ಮಾಡುವಂತಹ ಕೆಲಸ ಮಾಡಲು ಸಾಧ್ಯವಿಲ್ಲ ಎಂದರು.
ನಿಂಬೆಹಣ್ಣನ್ನು ಈ ರೀತಿ ಸೇವಿಸಿದ್ರೆ ಡಯಾಬಿಟಿಸ್ ಕಂಟ್ರೋಲ್ ಬರುತ್ತಂತೆ!
ಉಡುಪಿಯಲ್ಲಿ ಕೋಟ, ಮಂಗಳೂರಿನಲ್ಲಿ ಚೌಟ, ಕಾಂಗ್ರೆಸ್ಗೆ ಕೇವಲ ಗೂಟ. ಈ ಚುನಾವಣೆ ಮೋದಿ, ಅಧಿಕಾರಕ್ಕಾಗಿ ಅಲ್ಲ. ಬದಲು ದೇಶ, ಧರ್ಮ ಉಳಿಸುವ ಚುನಾವಣೆಯಾಗಿದೆ. ಮೋದಿ ನಡೆಸಿರುವ 10 ವರ್ಷಗಳ ಆಡಳಿತ ಕೇವಲ ಟ್ರೇಲರ್ ಮಾತ್ರ. ಇನ್ನು ಪೂರ್ಣ ಪಿಕ್ಚರ್ ಮುಂದಿನ 10 ವರ್ಷಗಳಲ್ಲಿ ತೋರಿಸಲಿದ್ದಾರೆ. ಯಾವುದೇ ಭ್ರಷ್ಟಾಚಾರಿಗಳನ್ನು ಮೋದಿ ಬಿಡುವುದಿಲ್ಲ. ಈಗ ಕೆಜ್ರಿವಾಲ ಮುಂದೆ ಡಿಂಗ್ರಿವಾಲ ಎಂದು ಅವರು ಟೀಕಿಸಿದರು.
ಬಿಜೆಪಿ ನಿಕಟಪೂರ್ವ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಮೋದಿ ಸರಕಾರ 10 ವರ್ಷಗಳ ನೀತಿಯ ಕಾರಣ ಕ್ಕಾಗಿ ಮತ್ತೆ ಬಿಜೆಪಿಗೆ ಮತ ಹಾಕಿ ಅವರನ್ನು ಪ್ರಧಾನಿಯನ್ನಾಗಿ ಮಾಡಬೇಕಾಗಿದೆ. ಒಂದು ಕಣ್ಣಿಗೆ ಬೆಣ್ಣೆ ಇನ್ನೊಂದು ಕಣ್ಣಿಗೆ ಸುಣ್ಣ ಎಂಬ ನೀತಿ ನಮ್ಮಲ್ಲಿ ಇಲ್ಲ. ಕಾಂಗ್ರೆಸ್ ಅಂದರೆ ಸುಳ್ಳು. ಸುಳ್ಳು ಮತ್ತು ಕಾಂಗ್ರೆಸ್ ಒಂದೇ ನಾಣ್ಯದ ಎರಡು ಮುಖಗಳು ಇದ್ದಂತೆ ಎಂದು ದೂರಿದರು.