ಗದಗ:- 2024 ರ ಲೋಕಸಭಾ ಚುನಾವಣೆ ಹಿನ್ನೆಲೆ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಪರ ಪುತ್ರ ಭರತ್ ಬೊಮ್ಮಾಯಿ ಪ್ರಚಾರಕ್ಕಿಳಿದಿದ್ದಾರೆ.
Kolara: ರೋಗಿ ಸಾವಿಗೆ ವೈದ್ಯರ ನೀರ್ಲಕ್ಷ ಕಾರಣವಲ್ಲ- ಡಾ. ನಾರಾಯಣಸ್ವಾಮಿ!
ಅತ್ತ ಹಾವೇರಿಯಲ್ಲಿ ಬಸವರಾಜ ಬೊಮ್ಮಾಯಿ ಭರ್ಜರಿ ಪ್ರಚಾರ ನಡೆಸಿದ್ರೆ ಇತ್ತ ಗದಗದಲ್ಲಿ ಮಗ ಭರತ್ ಬೊಮ್ಮಾಯಿಯಿಂದ ಮುಖಂಡರ ಭೇಟಿ ಮಾಡಿದ್ದು, ಚುನಾವಣೆ ರಣತಂತ್ರಗಳ ಕುರಿತು ಮುಖಂಡರೊಂದಿಗೆ ಚರ್ಚೆ ನಡೆದಿದೆ.
ಪ್ರಧಾನಿ ಮೋದಿಯವರನ್ನು ಮತ್ತೊಮ್ಮೆ ಆರಿಸಿ ತರೋ ಅಲೆ ಇದೆ. ಒಳ್ಳೆಯ ರೆಸ್ಪಾನ್ಸ್ ಕ್ಷೇತ್ರದಲ್ಲಿ ಇದೆ. ಹಾವೇರಿ- ಗದಗ ಕ್ಷೇತ್ರದಲ್ಲಿ ಬಸವರಾಜ ಬೊಮ್ಮಾಯಿ ಅವರನ್ನು ಆರಿಸಿ ತರಲು ಪುತ್ರ ಮನವಿ ಮಾಡಿದ್ದಾರೆ. ಬೊಮ್ಮಾಯಿ ಅವರು ಸಿಎಂ ಆದವರು, ವರಿಷ್ಠರು ದೊಡ್ಡ ಜವಾಬ್ದಾರಿ ಕೊಟ್ಟಿದ್ದಾರೆ ಎರಡು ಗುರಿ ಇದೆ. ಪ್ರಧಾನಮಂತ್ರಿಯವರನ್ನ ಮತ್ತೆ ಪ್ರಧಾನಿ ಮಾಡಬೇಕು ಎಂದರು
ಇನ್ನೂ ಭರತ್ ಬೊಮ್ಮಾಯಿಗೆ ಮಾಜಿ ಸಚಿವ ಸಿಸಿ ಪಾಟೀಲ್ ಪುತ್ರ ಉಮೇಶಗೌಡ ಪಾಟೀಲ್ ಸಾಥ್ ನೀಡಿದ್ದಾರೆ.
ಬಿಜೆಪಿ ಯುವ ಘಟಕದ ಜಿಲ್ಲಾಧ್ಯಕ್ಷ ಸಂತೋಷ ಅಕ್ಕಿ, ಮುಖಂಡರಾದ ಅಶೋಕ್ ಸಂಕಣ್ಣವರ, ಅನಿಲ್ ಅಬ್ಬಿಗೇರಿ, ಶಿವರಾಜಗೌಡ ಹಿರೇಮನಿ ಪಾಟೀಲ್, ಪ್ರಶಾಂತ್ ನಾಯ್ಕರ್ ಉಪಸ್ಥಿತರಿದ್ದರು.