ಮಂಡ್ಯ:- ಚುನಾವಣಾ ಕಣದಿಂದ ಹಿಂದೆ ಸರಿದಿರುವ ಸುಮಲತಾ ನಿರ್ಧಾರ ಸ್ವಾಗತಾರ್ಹ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ.
ಲೋಕಸಭಾ ಚುನಾವಣಾ ಕಣದಿಂದ ಹಿಂದೆ ಸರಿದ ಸುಮಲತಾರ ನಿರ್ಧಾರವನ್ನು ಸ್ವಾಗತಿಸುತ್ತೇವೆ. ಬಿಜೆಪಿ ಸೇರುವ ನಿರ್ಧಾರ ಪ್ರಕಟಿಸಿದ್ದರಿಂದ ನನಗೆ ಬೆಂಬಲ ಕೊಟ್ಟಂತೆ. ಇಂದು ತೀರ್ಮಾನ ಮಾಡಿದ್ದಾರೆ, ಮುಂದೆ ಪ್ರಚಾರಕ್ಕೂ ಕರೆಯುತ್ತೇವೆ ಎಂದಿದ್ದಾರೆ.
MP Election: ಹಳ್ಳಿಹಕ್ಕಿ ಹೆಚ್ ವಿಶ್ವನಾಥ್ ಮನೆಗೆ ಭೇಟಿ ನೀಡಿದ ಯದುವೀರ್!
ಬಿಜೆಪಿ ಜತೆ ಸುಮಲತಾ ಅಂಬರೀಶ್ಗೆ ಮೊದಲಿನಿಂದ ಒಳ್ಳೆಯ ಬಾಂಧವ್ಯವಿದೆ. ಮೋದಿ ಮತ್ತೆ ಪ್ರಧಾನಿ ಆಗಬೇಕೆಂದು ಈ ನಿರ್ಧಾರ ಮಾಡಿದ್ದಾರೆ. ಮಂಡ್ಯ ಕ್ಷೇತ್ರದ ಸಂಸದೆ ಸುಮಲತಾ ನಿರ್ಧಾರ ಸ್ವಾಗತಾರ್ಹ. ಈ ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಅಂಬರೀಶ್ ಸಹಕಾರ ಕೇಳಿದ್ದೇನೆ ಎಂದರು.
ಮಂಡ್ಯದ ಕಾಳಿಕಾಂಬ ದೇವಸ್ಥಾನದ ಆವರಣದಲ್ಲಿ ಬೆಂಬಲಿಗರ ಎದುರು ಮಾತನಾಡಿ ಸಂಸದೆ ಸುಮಲತಾ ಅಂಬರೀಶ್, ಮಂಡ್ಯ ನೆಲದಲ್ಲೇ ನಿಂತು ನಾನು ಎಂಪಿ ಸೀಟ್ ಬಿಟ್ಟು ಕೊಡ್ತಿದ್ದೇನೆ. ಬಿಜೆಪಿ ಸೇರಲು ನಿರ್ಧರಿಸಿದ್ದೇನೆ ಅಂತಾ ಘೋಷಣೆ ಮಾಡಿದರು
ಬಿಜೆಪಿಯವರು ಬೆಂಗಳೂರು ಉತ್ತರ, ಚಿಕ್ಕಬಳ್ಳಾಪುರ ಹಾಗೂ ಮೈಸೂರು ಕ್ಷೇತ್ರದಲ್ಲಿ ಸ್ಪರ್ಧಿಸುವಂತೆ ನನಗೆ ಆಫರ್ ನೀಡಿದ್ದರು. ನಾನು ಮಂಡ್ಯ ಬಿಟ್ಟು ಎಲ್ಲೂ ನಿಲ್ಲಲ್ಲ ಅಂತಾ ಹೇಳಿದ್ದೆ. ಗೆದ್ರೂ.. ಸೋತ್ರೂ ಅದು ಮಂಡ್ಯದಲ್ಲೇ. ಮಂಡ್ಯ ಬಿಟ್ಟು ಎಲ್ಲೂ ಹೋಗೋದಿಲ್ಲ ಅಂತಾ ಸುಮಲತಾ ಅಂಬರೀಶ್ ಹೇಳಿದ್ದಾರೆ.
ಹೆಚ್ಡಿ ಕುಮಾರಸ್ವಾಮಿ ನನ್ನ ಮನೆಗೆ ಬಂದಿದ್ದು ಸೌಜನ್ಯದ ಭೇಟಿ ಅಷ್ಟೇ. ಚುನಾವಣಾ ಪ್ರಚಾರದ ಬಗ್ಗೆ ಬಿಜೆಪಿ ಸೇರ್ಪಡೆ ಬಳಿಕ ಹೇಳುತ್ತೇನೆ. ಆ ಮೂಲಕ ಮಂಡ್ಯದಲ್ಲಿ ಕುಮಾರಸ್ವಾಮಿ ಪರ ಪ್ರಚಾರದ ಬಗ್ಗೆ ಸುಮಲತಾ ಅಂಬರೀಶ್ ಸ್ಪಷ್ಟನೆ ನೀಡಿದ್ದಾರೆ.