ಮೈಸೂರು:– ದೇವೇಗೌಡರೇ ಪ್ರತಾಪ್ ಸಿಂಹಗೆ ಬಿಜೆಪಿ ಟಿಕೆಟ್ ತಪ್ಪಿಸಿದ್ದಾರೆ ಎಂಬ ಸಚಿವ ಕೆ ವೆಂಕಟೇಶ್ ಹೇಳಿಕೆಗೆ ಪ್ರತಾಪ್ ಸಿಂಹ ಪ್ರತಿಕ್ರಿಯೆ ನೀಡಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ಅನ್ನ ತಿನ್ನುವ ಬಾಯಲ್ಲಿ ಏನೇನೋ ಮಾತನಾಡಬೇಡಿ. ನನಗೆ ಟಿಕೆಟ್ ಕೊಡಿಸಬೇಕು ಎಂದು ಅಮಿತ್ ಶಾ ಅವರ ಜೊತೆ ಫೋನಿನಲ್ಲಿ ದೇವೇಗೌಡರು ಮಾತನಾಡಿದ್ದರು ಎಂದು ತಿಳಿಸಿದರು
ವಿಪರೀತ ಗಂಟಲು ಕೆರತದಿಂದ ಬಳಲುತ್ತಿದ್ದೀರಾ!? – ಹಾಗಾದ್ರೆ ಈ ಪದಾರ್ಥ ಸೇವಿಸಿ!
ನನಗೆ ಟಿಕೆಟ್ ಕೊಡಿ ಎಂದು ಅಮಿತ್ ಶಾ ಅವರಲ್ಲಿ ಕೇಳಿದವರಲ್ಲಿ ದೇವೇಗೌಡರು ಪ್ರಮುಖರು. ಇಂತಹ ವ್ಯಕ್ತಿ ನನಗೆ ಟಿಕೆಟ್ ತಪ್ಪಿಸುತ್ತಾರೆ ಅಂತ ಹೇಳಿದರೆ ಹೇಗೆ ಎಂದು ಪ್ರತಾಪ್ ಸಿಂಹ ಪ್ರಶ್ನಿಸಿದರು.
ವೆಂಕಟೇಶ್ ಅವರು ಇಂತಹ ಹೇಳಿಕೆ ಕೊಡುವುದನ್ನು ನಿಲ್ಲಿಸಬೇಕು. ಈ ಹೇಳಿಕೆ ನೋಡಿ ವೆಂಕಟೇಶ್ ಅವರ ಮೇಲೆ ಇದ್ದ ಎಲ್ಲಾ ಗೌರವವು ಮರೆಯಾಗಿದೆ. ನಿಮ್ಮನ್ನು ರಾಜಕೀಯವಾಗಿ ಬೆಳೆಸಿ ಶಕ್ತಿ ತುಂಬಿದ್ದು ದೇವೇಗೌಡರು ಎಂಬುದನ್ನು ಮರೆಯಬೇಡಿ ಎಂದರು.