ನವದೆಹಲಿ:- ಇಡಿ ಬಂಧನ ವಿರೋಧಿಸಿ ಕೇಜ್ರಿವಾಲ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್, ತೀರ್ಪು ಕಾಯ್ದಿರಿಸಿದೆ.
ಮಾರ್ಚ್ 21ರಂದು ಬಂಧಿತರಾಗಿದ್ದ ಅರವಿಂದ್ ಕೇಜ್ರಿವಾಲ್ ಸದ್ಯ ನ್ಯಾಯಾಂಗದ ಕಸ್ಟಡಿಯಲ್ಲಿದ್ದಾರೆ. ಮಾರ್ಚ್ 22ರಂದು ಕೆಳಗಿನ ನ್ಯಾಯಾಲಯ (ಟ್ರಯಲ್ ಕೋರ್ಟ್) ಕೇಜ್ರಿವಾಲ್ ಅವರನ್ನು ಆರು ದಿನಗಳ ಕಾಲ ಇಡಿ ಕಸ್ಟಡಿಗೆ ಒಪ್ಪಿಸಿತ್ತು. ನಂತರ ಮತ್ತಷ್ಟು ನಾಲ್ಕು ದಿನ ಅವರ ಕಸ್ಟಡಿ ಅವಧಿ ವಿಸ್ತರಣೆ ಆಗಿತ್ತು. ಅಲ್ಲಿಗೆ 10 ದಿನಗಳ ಕಾಲ ಅವರು ಜಾರಿ ನಿರ್ದೇಶನಾಲಯದ ಕಸ್ಟಡಿಯಲ್ಲಿದ್ದರು. ಎಪ್ರಿಲ್ 1ರಂದು ಅವರನ್ನು ನ್ಯಾಯಾಂಗ ಕಸ್ಟಡಿಗೆ ವರ್ಗಾಯಿಸಲಾಗಿದೆ. ಏಪ್ರಿಲ್ 15ರವರೆಗೂ ಅವರು ಜುಡಿಷಿಯಲ್ ಕಸ್ಟಡಿಯಲ್ಲಿ ಮುಂದುವರಿಯಲಿದ್ದಾರೆ. ಈಗ ಉಚ್ಚ ನ್ಯಾಯಾಲಯವು ಕೇಜ್ರಿವಾಲ್ರಿಗೆ ಜಾಮೀನು ನೀಡಿ ಅವರನ್ನು ಬಂಧಮುಕ್ತಗೊಳಿಸುತ್ತದಾ ಕಾದು ನೋಡಬೇಕು.
ಯಡಿಯೂರಪ್ಪ ಸೇರಿ ಅವರ ಪುತ್ರನ ರಿಪೇರಿ ಕೆಲಸ ಬೇರೆಯವರಿಗೆ ವಹಿಸಿದ್ದೇನೆ – ಯತ್ನಾಳ್!
ಇಡಿಯಿಂದ ಬಂಧನವಾಗಿರುವುದನ್ನು ಪ್ರಶ್ನಿಸಿ ಅರವಿಂದ್ ಕೇಜ್ರಿವಾಲ್ ಸಲ್ಲಿಸಿದ ಅರ್ಜಿಯ ವಿಚಾರಣೆ ವೇಳೆ ದೆಹಲಿ ಹೈಕೋರ್ಟ್ ನ್ಯಾಯಪೀಠ ತತ್ಕ್ಷಣಕ್ಕೆ ಜಾಮೀನು ಕೊಡುವ ಮನಸು ತೋರಲಿಲ್ಲ. ಕೇಜ್ರಿವಾಲ್ ವಿರುದ್ಧ ಪ್ರಬಲವಾದ ಸಾಕ್ಷ್ಯಗಳಿವೆ. ಅಬಕಾರಿ ಪ್ರಕರಣದಲ್ಲಿ ಅವರೇ ಸೂತ್ರಧಾರರಾಗಿದ್ದಾರೆ. ಅವರಿಂದ ಅಕ್ರಮ ಹಣ ವರ್ಗಾವಣೆ (ಮನಿ ಲಾಂಡರಿಂಗ್) ಆಗಿರುವುದಕ್ಕೆ ಪುರಾವೆಗಳಿವೆ. ಕೇಜ್ರಿವಾಲ್ ಎಸಗಿದ ಈ ಹಣಕಾಸು ಅಕ್ರಮದಿಂದ ಆಮ್ ಆದ್ಮಿ ಪಕ್ಷಕ್ಕೆ ಹೆಚ್ಚು ಲಾಭವಾಗಿದೆ ಎಂದು ಜಾರಿ ನಿರ್ದೇಶನಾಲಯವು ವಿಚಾರಣೆ ವೇಳೆ ದೆಹಲಿ ಹೈಕೋರ್ಟ್ ಪೀಠದ ಮುಂದೆ ವಾದ ಮುಂದಿಟ್ಟಿತು.