ಬಿಸಿಲಿನ ತಾಪ ಈಗಾಗಲೇ ಹೆಚ್ಚಾಗಿದ್ದು, ಮುಂಬರುವ ದಿನಗಳಲ್ಲಿ ತಾಪಮಾನ ಇನ್ನಷ್ಟು ಏರಿಕೆಯಾಗುವ ಎಲ್ಲಾ ಸಂಭಾವನೆ ಇದೆ. ಜನರು ಸಹ ಬಿಸಿಲಿನ ತಾಪದಿಂದ ಪಾರಾಗಲು ಮತ್ತು ತಮ್ಮ ದೇಹವನ್ನು ನಿರ್ಜಲೀಕರಣದಿಂದ ದೂರವಿರಿಸಿಕೊಳ್ಳಲು ಹಣ್ಣಿನ ಜ್ಯೂಸ್, ಲಸ್ಸಿ, ಮಜ್ಜಿಗೆ ಮತ್ತು ಎಳನೀರನ್ನು ಹೆಚ್ಚಾಗಿ ಅವಲಂಬಿಸುತ್ತಿದ್ದಾರೆ
ಸುಡುವ ಬಿಸಿಲಿನಲ್ಲಿ ಒಂದು ಎಳನೀರು ಸಾಮಾನ್ಯ ನೀರಿಗಿಂತ ಹೆಚ್ಚು ಉಲ್ಲಾಸಕರವಾದ ಅನುಭವವನ್ನು ನೀಡುತ್ತದೆ. ಆದರೆ ಏರುತ್ತಿರುವ ಬಿಸಿಲಿನ ತಾಪಮಾನದೊಂದಿಗೆ ಬೇಡಿಕೆಯ ಉಲ್ಬಣವು ಬರುತ್ತದೆ ಮತ್ತು ಅದೇ ರೀತಿಯಾಗಿ ಎಳನೀರಿನ ಬೆಲೆಯು ಸಹ ಹಿಂದೆಗಿಂತ ಈಗ ಜಾಸ್ತಿಯಾಗಿದೆ.
Supreme Court: EVM- VVPAT ಸ್ಲಿಪ್ ಹೊಂದಾಣಿಕೆ: ವಿಚಾರಣೆಗೆ ಸುಪ್ರೀಂ ಕೋರ್ಟ್ ಒಪ್ಪಿಗೆ
ಭಾರೀ ಬೆಲೆಯ ಟ್ಯಾಗ್ಗಳ ಹೊರತಾಗಿಯೂ, ಎಳನೀರಿನ ಹಾಗೆ ಅನೇಕ ಪ್ರಯೋಜನಗಳನ್ನು ಇನ್ನಿತರೆ ಪಾನೀಯಗಳಿಂದ ಪಡೆಯುತ್ತೀರಿ ಎಂಬುದಕ್ಕೆ ಯಾವುದೇ ಗ್ಯಾರೆಂಟಿ ಇಲ್ಲ. ಆದ್ದರಿಂದ, ನೀವು ಪ್ರತಿ ಬಾರಿಯೂ ರಸ್ತೆಯ ಬದಿಯಲ್ಲಿ ಎಳನೀರು ಕುಡಿಯಲು ನಿಂತಾಗ, ಅಲ್ಲಿ ತಾಜಾ ಮತ್ತು ಹೆಚ್ಚು ತೇವಾಂಶವುಳ್ಳ ಎಳನೀರನ್ನು ಹೇಗೆ ಅರಿಸಿಕೊಳ್ಳುತ್ತೀರಿ ಎಂಬುದು ತುಂಬಾನೇ ಮುಖ್ಯವಾದ ವಿಷಯವಾಗುತ್ತದೆ.
ಒಳ್ಳೆಯ ನೀರಿರುವ ಎಳನೀರನ್ನು ಆಯ್ಕೆ ಮಾಡಿಕೊಳ್ಳುವುದು ಅನೇಕರಿಗೆ ಸ್ವಲ್ಪ ಕಷ್ಟಕರವಾದ ಕೆಲಸ ಅಂತ ಅನ್ನಿಸಬಹುದು, ಆದರೆ ಇದು ನೀವು ಯೋಚಿಸುವುದಕ್ಕಿಂತ ಸರಳವಾಗಿದೆ. ನೀವು ಕೇವಲ ಐದು ಪ್ರಮುಖ ಅಂಶಗಳನ್ನು ನೆನಪಿಟ್ಟುಕೊಳ್ಳಬೇಕು ಮತ್ತು ನಿಮ್ಮ ಮುಂದಿನ ಖರೀದಿಯ ಸಮಯದಲ್ಲಿ ಹೆಚ್ಚಿನ ನೀರಿನ ಅಂಶವಿರುವ ಉತ್ತಮ ಎಳನೀರನ್ನು ನೀವೇ ಆಯ್ಕೆ ಮಾಡಿಕೊಳ್ಳಬಹುದು
ಚೆನ್ನಾಗಿ ಅಲ್ಲಾಡಿಸಿ ನೋಡಿ: ತೆಂಗಿನಕಾಯಿ ಅಥವಾ ಎಳನೀರನ್ನು ಖರೀದಿ ಮಾಡುವ ಮೊದಲು ಅದನ್ನು ಕೈಯಲ್ಲಿ ಎತ್ತಿಕೊಂಡು ಚೆನ್ನಾಗಿ ಅಲ್ಲಾಡಿಸಿ ನೋಡಿ. ಅದನ್ನು ಅಲುಗಾಡಿಸಿದ ಸಮಯದಲ್ಲಿ ಅದರೊಳಗಿಂದ ನೀರಿನ ಶಬ್ದ ನಿಮಗೆ ಬಂದರೆ, ಅದು ಕಡಿಮೆ ನೀರನ್ನು ಹೊಂದಿದೆ ಅಂತ ಅರ್ಥವಾಗುತ್ತದೆ. ವ್ಯತಿರಿಕ್ತವಾಗಿ, ಅಲುಗಾಡಿಸಿದಾಗ ಯಾವುದೇ ಶಬ್ದ ಬರದೇ ಇದ್ದರೆ, ಆ ತೆಂಗಿನಕಾಯಿಯಲ್ಲಿ ಸಾಕಷ್ಟು ನೀರಿದೆ ಅಂತ ಅರ್ಥ ಬರುತ್ತದೆ.
ಅದರ ಗಾತ್ರ ನೋಡಿ: ಸಣ್ಣ ಎಳನೀರಿಗಿಂತ ದೊಡ್ಡ ಗಾತ್ರದ ತೆಂಗಿನಕಾಯಿಯಲ್ಲಿ ಹೆಚ್ಚು ನೀರು ಇರುತ್ತದೆ ಅಂತ ಎಲ್ಲರಿಗೂ ಗೊತ್ತಿರುವ ವಿಚಾರವೇ ಆಗಿದೆ. ಹಾಗಾಗಿ ದೊಡ್ಡ ಆಕಾರದ ತೆಂಗಿನಕಾಯಿಯನ್ನು ಖರೀದಿಸುವ ಮುನ್ನ ಆಯ್ಕೆ ಮಾಡಿಕೊಳ್ಳಿ. ತೆಂಗಿನಕಾಯಿ ಗಾತ್ರ ತೆಂಗಿನಕಾಯಿಯಲ್ಲಿನ ಹೆಚ್ಚಿನ ನೀರಿನ ಅಂಶವನ್ನು ಸೂಚಿಸುತ್ತದೆ.
ಕೆಲವು ಎಳನೀರುಗಳು ಗಾಢ ಕಂದು ಬಣ್ಣದ ಚುಕ್ಕೆಗಳನ್ನು ಹೊಂದಿರಬಹುದು, ಎಂದರೆ ಅವು ಶೀಘ್ರದಲ್ಲಿಯೇ ಪ್ರಬುದ್ಧ ತೆಂಗಿನಕಾಯಿಗಳಾಗಿ ಬದಲಾಗುತ್ತವೆ. ಈ ಎಳನೀರು ಕಡಿಮೆ ನೀರನ್ನು ಹೊಂದಿರುತ್ತವೆ, ಏಕೆಂದರೆ ಅವು ಪಕ್ವತೆಯ ಪ್ರಕ್ರಿಯೆಯಲ್ಲಿ ಮತ್ತಷ್ಟು ಮುಂದುವರೆದಿರುತ್ತವೆ. ಪ್ರಕಾಶಮಾನವಾದ ಹಸಿರು ಬಣ್ಣವನ್ನು ಹೊಂದಿರುವ ತೆಂಗಿನಕಾಯಿಗಳನ್ನು ಆಯ್ಕೆ ಮಾಡಲು ಸಲಹೆ ನೀಡಲಾಗುತ್ತದೆ, ಏಕೆಂದರೆ ಅವುಗಳು ಹೆಚ್ಚಿನ ನೀರಿನ ಅಂಶವಿರುವ ಸಾಧ್ಯತೆ ಇರುತ್ತದೆ.
ವೈಯಕ್ತಿಕ ಆಯ್ಕೆ: ಕೆಲವರು ಹೊಸದಾಗಿ ಒಡೆದ ಎಳನೀರನ್ನು ಖರೀದಿಸಲು ಬಯಸುತ್ತಾರೆ. ಈ ರೀತಿಯ ಎಳನೀರು ಸಾಮಾನ್ಯವಾಗಿ ಸ್ವಲ್ಪ ಸಿಹಿ ರುಚಿಯನ್ನು ನೀಡುತ್ತದೆ. ಆದಾಗ್ಯೂ, ಮೊದಲೇ ಒಡೆದು ಇಟ್ಟ ಎಳನೀರನಲ್ಲಿನ ನೀರಿಗೆ ಹೋಲಿಸಿದರೆ ಒಡೆಯದೆ ಇಟ್ಟಿರುವ ಎಳನೀರಿನಲ್ಲಿರುವ ನೀರಿನ ಪ್ರಮಾಣವು ಕಡಿಮೆ ಇರಬಹುದು ಎಂಬುದನ್ನು ಗಮನಿಸುವುದು ಮುಖ್ಯ. ಆದ್ದರಿಂದ, ನಿಮ್ಮ ಆದ್ಯತೆಗೆ ಅನುಗುಣವಾಗಿ ಖರೀದಿಸಲು ಸಲಹೆ ನೀಡಲಾಗುತ್ತದೆ.
ಮತ್ತೊಂದು ಪ್ರಮುಖ ಪರಿಗಣನೆಯು ತಾಜಾ ಎಳನೀರನ್ನು ಖರೀದಿಸಿದ ತಕ್ಷಣ, ಮೇಲಾಗಿ ಅಂಗಡಿಯ ಬಳಿಯೇ ನಿಂತು ಅದನ್ನು ಸೇವಿಸುವುದು ಮುಖ್ಯವಾಗುತ್ತದೆ. ಹಾಗೆ ಮಾಡುವುದರಿಂದ ನೀವು ನೀರಿನಲ್ಲಿ ಇರುವ ಎಲ್ಲಾ ಪೋಷಕಾಂಶಗಳಿಂದ ಸಂಪೂರ್ಣವಾಗಿ ಪ್ರಯೋಜನ ಪಡೆಯುತ್ತೀರಿ ಎಂದು ಖಚಿತಪಡಿಸುತ್ತದೆ.