ಚಾಮರಾಜನಗರ: ಸುನೀಲ್ ಬೋಸ್ ವಿರುದ್ಧ ಗೋ ಬ್ಯಾಕ್ ಪೋಸ್ಟರ್ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ಹೆಚ್.ಸಿ ಮಹಾದೇವಪ್ಪ ಪ್ರತಿಕ್ರಿಯೇ ನೀಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರೋ ಒಬ್ಬ ತಲೆ ಕೆಟ್ಟವನು ಮಾಡಿರೋ ಪಿತೂರಿ ಆಗಿದೆ.
ಇದಕ್ಕೆಲ್ಲ ತಲೆ ಕೆಡಿಸಿಕೊಳ್ಳೋ ಅವಶ್ಯಕತೆಯೇ ಬರೋದಿಲ್ಲ ಎಂದರು. ಇನ್ನೂ 8 ವಿಧಾನ ಸಭಾ ಕ್ಷೇತ್ರಗಳಲ್ಲೂ ಸಭೆ ನಡೆಸಿದ್ದೇವೆ ಉತ್ತಮ ಸ್ಪಂದನೆ ಸಿಕ್ಕಿದೆ. ಯಾರೋ ಒಬ್ಬ ಗೋ ಬ್ಯಾಕ್ ಅಂತಾ ಹೇಳಿದ ತಕ್ಷಣ ಸುನೀಲ್ ಬೋಸ್ ನಾ ವಿರೋಧಿಸಲು ಸಾಧ್ಯವಿಲ್ಲ ಎಂದು ಹೇಳಿದರು.