ಬೆಂಗಳೂರು: ‘ಡೆವಿಲ್’ ಸಿನಿಮಾ ಶೂಟಿಂಗ್ ವೇಳೆ ನಟ ದರ್ಶನ್ ಅವರು ಕೈಗೆ ಪೆಟ್ಟಾಗಿದೆ. ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಿದೆ. ಈಗಾಗಲೇ ಅವರು ಸರ್ಜರಿ ಮಾಡಿಸಿಕೊಳ್ಳಬೇಕಿತ್ತು. ಆದರೆ, ಅವರು ಅದನ್ನು ಮುಂದೂಡಿಕೊಂಡಿದ್ದಾರೆ
ಈ ವೇಳೆ ದರ್ಶನ್ ತಮ್ಮ ಕೈಯನ್ನು ಹ್ಯಾಂಡ್ ಸ್ಲಿಂಗ್ (Hand sling) ಮೇಲೆ ಇಟ್ಟುಕೊಂಡಿದ್ದಾರೆ. ಇದನ್ನು ನೋಡಿದ ಅವರ ಅಭಿಮಾನಿಗಳು ತಳಮಳಗೊಂಡಿದ್ದಾರೆ. ನೆಚ್ಚಿನ ಸ್ಟಾರ್ಗೆ ಏನಾಯಿತು? ಕೈಗೆ ಏನು ಪೆಟ್ಟಾಗಿದೆ ಎಂದು ಕೇಳಿ ತಿಳಿದುಕೊಳ್ಳಲು ಪ್ರಯತ್ನಿಸುತ್ತಾರೆ
‘ನಾನು ಈಗಾಗಲೇ ಆಪರೇಷನ್ ಮಾಡಿಸಿಕೊಳ್ಳಬೇಕಿತ್ತು. ಆದರೆ, ಅಮ್ಮನಿಗೆ ಡೇಟ್ಸ್ ಕೊಟ್ಟಿದ್ದೇನೆ. ಅದನ್ನು ಮುಗಿಸಿ ಬರ್ತೀನಿ. ರಾತ್ರಿ ವೇಳೆಗೆ ಆಸ್ಪತ್ರೆಗೆ ಅಡ್ಮಿಟ್ ಆಗ್ತೀನಿ. ನಾಳೆ ಆಪರೇಷನ್ ಮಾಡಿಸಿಕೊಳ್ಳುತ್ತೇನೆ’ ಎಂದರು ದರ್ಶನ್.