ಕಲಬುರಗಿ: ತುಂಬಿ ತುಳುಕುತಿದ್ದ ಬಸ್ಸಲ್ಲಿ ಆಗಿದ್ದ ಪ್ರಯಾಣಿಕರ ಸಾಲಿನಲ್ಲಿ ಬಂದು ಚಿನ್ನದ ಸರ ಎಗರಿಸಿದ್ದ ತಾಯಿ-ಮಗಳನ್ನ ಲಾಕ್ ಮಾಡುವಲ್ಲಿ ಕಲಬುರಗಿ ಪೋಲೀಸರು ಸಕ್ಸಸ್ ಆಗಿದ್ದಾರೆ..ತಾಯಿ ಹಸೀನಾ ಮಗಳು ಸಕೀನಾ ಬಂಧಿತ ಆರೋಪಿಗಳು. ಅಂದಹಾಗೆ ಕಲಬುರಗಿಯ ಸೆಂಟ್ರಲ್ ಬಸ್ ನಿಲ್ದಾಣದಲ್ಲಿ 40 ಗ್ರಾಂ ಚಿನ್ನರ ಸರ ಕದ್ದು ಎಸ್ಕೇಪ್ ಆಗಿದ್ರು.
ಈ ಬಗ್ಗೆಆಳಂದ ತಾಲ್ಲೂಕಿನ ಭೀಮಾಬಾಯಿ ಎಂಬುವವರು ಅಶೋಕ ನಗರ ಠಾಣೆಯಲ್ಲಿ ದೂರು ನೀಡಿದ್ರು. ಈ ಬಗ್ಗೆ ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯ ಆಧರಿಸಿ ಆರೋಪಿಗಳನ್ನ ಹಿಡಿದು ಜೈಲಿಗೆ ಕಳಿಸಿದ್ದಾರೆ..