ಕೈ ಅಥವಾ ಕಾಲುಗಳಲ್ಲಿ ಕೆಲವರಿಗೆ ಪದೇ ಪದೇ ಮರಗಟ್ಟುವಿಕೆ ಸಮಸ್ಯೆಯು ಕಾಣಿಸುವುದು. ಇದು ತುಂಬಾ ಜಟಿಲ ಸಮಸ್ಯೆ ಮತ್ತು ಇದಕ್ಕೆ ಹಲವಾರು ಕಾರಣಗಳು ಇರಬಹುದು. ಕಾಲು ಅಥವಾ ಕೈಗಳ ಭಾಗದಲ್ಲಿ ನರಗಳು ಒತ್ತಲ್ಪಟ್ಟ ವೇಳೆ ಇಂತಹ ಸಮಸ್ಯೆಯು ಆಗುವುದು. ನರಗಳು ಸರಿಯಾಗಿ ಮೆದುಳು ಮತ್ತು ಬೆನ್ನುಹುರಿಗೆ ಸರಿಯಾಗಿ ಪ್ರತಿಕ್ರಿಯಿಸಲು ಆಗದೆ ಇರುವುದು ಕೂಡ ಇದಕ್ಕೆ ಕಾರಣ.
ವಿಟಮಿನ್ ಬಿ12 ಎನ್ನುವುದು ಪ್ರಮುಖ ಪೋಷಕಾಂಶವಾಗಿದ್ದು, ಇದು ಕೆಲವರ ಆಹಾರದಲ್ಲಿ ಇರದು. ದುರಾದೃಷ್ಟದಿಂದ ಬಿ12 ಕೊರತೆಯು ಪ್ರತಿಯೊಬ್ಬರನ್ನು ಕಾಡುವುದು ಮತ್ತು ಇದರಿಂದಾಗಿ ನರಗಳಿಗೆ ಹಾನಿ ಆಗುವುದು.
ಬೇಸಿಗೆಯಲ್ಲಿ ಎಳೆನೀರು ಕುಡಿಯುವುದರಿಂದ ತೂಕವನ್ನು ಈಸಿಯಾಗಿ ಇಳಿಸಬಹುದು!
ಕೈ ಕಾಲುಗಳ ಮರಗಟ್ಟುವಿಕೆಗೆ ಸರಳ ಮನೆ ಮದ್ದುಗಳು ಇದೆ ಇಲ್ಲಿದೆ ನೋಡಿ!
- ಒಂದು ಚಮಚ ಚಕ್ಕೆಯ ಪುಡಿ ಹಾಗೂ ಒಂದು ಚಮಚ ಜೇನುತುಪ್ಪ ಇವೆರಡನ್ನು ಬೆರೆಸಿ ಸೇವಿಸುವುದು ಈ ಸಮಸ್ಯೆಗೆ ಉತ್ತಮವಾದ ಔಷಧಿಯಾಗಿದೆ.
- ವಿಟಮಿನ್ ಬಿ, ವಿಟಮಿನ್ ಬಿ6, ವಿಟಮಿನ್ ಬಿ12 ಹೇರಳವಾಗಿರುವ ಆಹಾರಗಳ ಸೇವನೆಯಿಂದ ಈ ಸಮಸ್ಯೆಯು ಬಾರದಂತೆ ನೋಡಿಕೊಳ್ಳಬಹುದು.
- ಒಂದು ಬಕೆಟ್ ಬಿಸಿನೀರಿಗೆ ಎರಡು ಚಮಚ ಉಪ್ಪು ಹಾಕಿ ಕೆಲವು ನಿಮಿಷ ಕೈ ಕಾಲುಗಳನ್ನು ಇಟ್ಟರೆ ಜುಮ್ಮ್ ಎನ್ನುವ ಅನುಭವವು ದೂರವಾಗುತ್ತದೆ.
- ವಾರಕ್ಕೊಮ್ಮೆ ಕೈ ಕಾಲುಗಳಿಗೆ ಎಳ್ಳೆಣ್ಣೆಯಿಂದ ನಿಧಾನವಾಗಿ ಮಸಾಜ್ ಮಾಡಿದರೆ ರಕ್ತ ಪರಿಚಲನೆ ಸರಿಯಾಗಿ ಜೋಮು ಹಿಡಿಯುವುದಿಲ್ಲ.
- ಬೆಳಗ್ಗೆ ಒಂದು ಲೋಟ ಹಾಲಿಗೆ ಒಂದು ಚಮಚ ಅರಿಶಿನ ಹಾಕಿ ಕುಡಿಯುವುದು ಕೂಡ ಪರಿಣಾಮಕಾರಿಯಾಗಿದೆ.
- ಅಶ್ವತ್ಥ ಮರದ ಮೂರು ನಾಲ್ಕು ತಾಜಾ ಎಲೆಗಳನ್ನು ಸಾಸಿವೆ ಎಣ್ಣೆಯಲ್ಲಿ ಬಿಸಿ ಮಾಡಿ, ಈ ಎಣ್ಣೆಯಿಂದ ಕೈ ಕಾಲುಗಳನ್ನು ಮಸಾಜ್ ಮಾಡುವುದರಿಂದ ಮರಗಟ್ಟುವಿಕೆ ಸಮಸ್ಯೆಯು ಶಮನವಾಗುತ್ತದೆ.
- ಬೆಳಗ್ಗೆ ಸ್ವಲ್ಪ ಪ್ರಮಾಣದಲ್ಲಿ ಒಣ ಶುಂಠಿ, ಒಂದೆರಡು ಲವಂಗ ಹಾಗೂ ಬೆಳ್ಳುಳ್ಳಿಯನ್ನು ಅಗಿದು ತಿನ್ನುವುದರಿಂದ ಈ ಸಮಸ್ಯೆಯನ್ನು ದೂರವಾಗಿಸಬಹುದು.
- ರಾತ್ರಿ ಮಲಗುವುದಕ್ಕೂ ಮೊದಲು ದೇಸಿ ತುಪ್ಪವನ್ನು ಸ್ವಲ್ಪ ಬಿಸಿ ಮಾಡಿ ಪಾದದ ಅಡಿಭಾಗಕ್ಕೆ ಹಾಗೂ ಕೈಗೆ ಮಸಾಜ್ ಮಾಡುವುದು ಪರಿಣಾಮಕಾರಿಯಾಗಿದೆ.