ಲಕ್ನೋ ವಿರುದ್ಧ ಸೋಲಿನ ಬಳಿಕ ಎಬಿ ಡೀ ವಿಲಿಯರ್ಸ್ ನೆನೆದು RCB ಫ್ಯಾನ್ಸ್ ಕಣ್ಣೀರು ಹಾಕುತ್ತಿದ್ದಾರೆ.
ಎಬಿ ಡೀ ವಿಲಿಯರ್ಸ್ 2008ರಲ್ಲಿ ಐಪಿಎಲ್ ಅಖಾಡಕ್ಕೆ ಎಂಟ್ರಿ ಕೊಟ್ಟಿದ್ದರು. ಹೀಗೆ ದಕ್ಷಿಣ ಆಫ್ರಿಕಾ ತಂಡದ ಸ್ಟಾರ್ ಪ್ಲೇಯರ್ ಆಗಿದ್ದ ಎಬಿ ಡೀ ವಿಲಿಯರ್ಸ್ ಐಪಿಎಲ್ ಟೂರ್ನಿ ತುಂಬಾ ಹವಾ ಎಬ್ಬಿಸಿದ್ದರು. ಅದರಲ್ಲೂ ಆರ್ಸಿಬಿ ಬೆಂಗಳೂರು ತಂಡದ ಪರವಾಗಿ ಎಬಿ ಡೀ ವಿಲಿಯರ್ಸ್ ನಿರ್ಮಿಸಿದ ದಾಖಲೆಗಳನ್ನ ಹಿಂದೆ ಯಾರೂ ಮುರಿದಿಲ್ಲ, ಮುಂದೆ ಕೂಡ ಸುಲಭವಾಗಿ ಮುರಿಯಲು ಆಗಲ್ಲ ಎನ್ನಬಹುದು. ಇದೇ ಕಾರಣಕ್ಕೆ ಇದೀಗ ಆರ್ಸಿಬಿ ತಂಡ ಲಖನೌ ವಿರುದ್ಧ ಹೀನಾಯವಾಗಿ ಸೋತ ಬೆನ್ನಲ್ಲೇ, ಅಭಿಮಾನಿಗಳು ಎಬಿ ಡೀ ವಿಲಿಯರ್ಸ್ ಅವರನ್ನು ನೆನಪು ಮಾಡಿಕೊಂಡು ಕಣ್ಣೀರು ಹಾಕುತ್ತಿದ್ದಾರೆ.
ಪ್ಯಾಕೆಟ್ ಜ್ಯೂಸ್ ಕುಡಿದ ತಕ್ಷಣ ವ್ಯಕ್ತಿ ಅಸ್ವಸ್ಥ – ವಿಷ ಹಾಕಿರುವ ಆರೋಪ!
ವಾಪಸ್ ಬರ್ತಾರಾ ಎಬಿ ಡೀ ವಿಲಿಯರ್ಸ್?
ಐಪಿಎಲ್ ಅಖಾಡದಲ್ಲಿ ಅತಿಹೆಚ್ಚು ಸ್ಟ್ರೈಕ್ ರೇಟ್ ಹೊಂದಿರುವ ಈ ಎಬಿ ಡೀ ವಿಲಿಯರ್ಸ್ ಅವರಿಗೆ, ಅವರೇ ಸಾಟಿ ಎನ್ನಬಹುದು. ಸುಮಾರು 151.69 ಸ್ಟ್ರೈಕ್ ರೇಟ್ ಹೊಂದಿದ್ದಾರೆ ಎಬಿ ಡೀ ವಿಲಿಯರ್ಸ್. ಅದರಲ್ಲೂ 39.71 ಆವರೇಜ್ ಮೂಲಕ ಐಪಿಎಲ್ ಟೂರ್ನಿಯಲ್ಲಿ, 5,162 ರನ್ ಕಲೆಹಾಕಿರುವ ಅವರು 184 ಐಪಿಎಲ್ ಪಂದ್ಯ ಆಡಿದ್ದರು. ಈ ಪೈಕಿ ಹೆಚ್ಚಾಗಿ ಆರ್ಸಿಬಿ ಬೆಂಗಳೂರು ತಂಡದ ಪರವೇ ಬ್ಯಾಟ್ ಬೀಸಿದ್ದರು.
ಇದರ ಜೊತೆ 40 ಅರ್ಧಶತಕ ಕೂಡ ಎಬಿ ಡೀ ವಿಲಿಯರ್ಸ್ ಅವರ ಹೆಸರಲ್ಲೇ ಇದೆ. ಹೀಗಾಗಿಯೇ ನಿನ್ನೆ ಲಖನೌ ವಿರುದ್ಧ ಆರ್ಸಿಬಿ ತಂಡವು ಕೇವಲ 182 ರನ್ ಬಾರಿಸಲು ತಿಣುಕಾಡುವಾಗ, ಆರ್ಸಿಬಿ ಫ್ಯಾನ್ಸ್ಗೆ ನೇರ ಎಬಿ ಡೀ ವಿಲಿಯರ್ಸ್ ಅವರ ನೆನಪಾಗಿತ್ತು. ನಿನ್ನೆಯ ಪಂದ್ಯದಲ್ಲಿ ಆರ್ಸಿಬಿ ಟೀಂ ಕೇವಲ 153 ರನ್ಗೆ ಆಲೌಟ್ ಆಗಿ, 28 ರನ್ಗಳ ಅಂತರದಲ್ಲಿ ಹೀನಾಯ ಸೋಲು ಕಂಡಿತ್ತು. ಹೀಗಾಗಿ ಆರ್ಸಿಬಿ ಅಭಿಮಾನಿಗಳು ತೀವ್ರ ನೋವಿನಲ್ಲಿದ್ದು, ನಮಗೀಗ ಎಬಿ ಡೀ ವಿಲಿಯರ್ಸ್ ವಾಪಸ್ ಬರಬೇಕು ಅಂತಿದ್ದಾರೆ.