ಆನೇಕಲ್:- ಗೆದ್ದ ಮೇಲೆ ದೇವೇಗೌಡರ ಕುಟುಂಬ ಜನರಿಗೆ ಕೃತಜ್ಞತೆ ಸಲ್ಲಿಸಲ್ಲ ಎಂದು ಡಿಕೆ ಸುರೇಶ್ ಹೇಳಿದ್ದಾರೆ.
ಜೆಡಿಎಸ್ ಭವನದಲ್ಲಿ ಚುನಾವಣಾ ತುರ್ತು ಸಭೆ – ಪರಿಷತ್ ಸದಸ್ಯ ಟಿಎ ಶರವಣ ಭಾಗಿ!
ಜಿಲ್ಲೆಯ ಕಾರ್ಮಿಕರು, ರೈತರು ಮತ್ತು ಸಾಮಾನ್ಯ ಜನ ಗೆಲ್ಲಿಸಿದ್ದಕ್ಕೆ ಬದಲಾಗಿ ಏನನ್ನೂ ಅವರಿಗೆ ನೀಡಲಿಲ್ಲ, ಒಂದೇ ಒಂದು ಸಭೆ ನಡೆಸಿ ಅವರ ಕಷ್ಟಸುಖ ವಿಚಾರಿಸಲಿಲ್ಲ ಎಂದು ಸುರೇಶ್ ಹೇಳಿದರು. ವೇದಿಕೆ ಮೇಲೆ ಮತ್ತು ನೆರೆದ ಜನರಲ್ಲಿ ಕುಮಾರಸ್ವಾಮಿ ಮತ್ತು ದೇವೇಗೌಡರಿಗಾಗಿ ಕೆಲಸ ಮಾಡಿದ ಜನರಿದ್ದಾರೆ, ಕ್ಷೇತ್ರಕ್ಕೆ ಆ ಕುಟುಂಬದಿಂದ ಆಗಿರುವ ಪ್ರಯೋಜನದ ಬಗ್ಗೆ ಅವರೇ ಹೇಳಲಿ ಎಂದು ಸುರೇಶ್ ಹೇಳಿದರು. ಆದರೆ, ಕಳೆದ 10 ವರ್ಷ ಮತ್ತು 8 ತಿಂಗಳ ಅವಧಿಯಲ್ಲಿ ತಾನು ಪ್ರತಿ ತಿಂಗಳು ಸಭೆ ನಡೆಸಿ ಜನರ ಕಷ್ಟಸುಖ ವಿಚಾರಿಸುವ ಪ್ರಯತ್ನ ಮಾಡಿದ್ದೇನೆ ಅಂತ ಹೆಮ್ಮಯಿಂದ ಹೇಳಿಕೊಳ್ಳುವುದಾಗಿ ಸುರೇಶ್ ಹೇಳಿದರು.