ತುಮಕೂರು: ರಾಜಕಾರಣಿಗಳ ಮಕ್ಕಳು ಮಾತ್ರ ರಾಜಕೀಯ ಮಾಡಬೇಕಾ? ಬೇರೆಯವರ ಮಕ್ಕಳು ರಾಜಕೀಯಕ್ಕೆ ಬರೋದು ಬೇಡ್ವಾ? ನನ್ನ ಉಸಿರು ಇರೋವರೆಗೂ ತುಮಕೂರು ರಾಜಕಾರಣಕ್ಕೆ ನನ್ನ ಮಗ ಬರಲ್ಲ ಎಂದು ಮಾಜಿ ಸಚಿವ, ತುಮಕೂರು ಲೋಕಸಭೆ ಅಭ್ಯರ್ಥಿ ವಿ ಸೋಮಣ್ಣ ಹೇಳಿದರು. ಸೋಮಣ್ಣ ತುಮಕೂರಿಗೆ ಬಂದ್ರೆ ಮಗನನ್ನೂ ಕರೆತರುತ್ತಾರೆ ಅನ್ನೋರಿಗೆ ಟಾಂಗ್ ಕೊಟ್ಟಿದ್ದಾರೆ. ಸೋಮಣ್ಣನ ಮಗ ಒಬ್ಬ ವೈದ್ಯ. ಇನ್ನೊಬ್ಬ ಮಗ ಡಬಲ್ ಗ್ರಾಜುಯೇಟ್.
ಕ್ರೆಡಿಟ್ ಕಾರ್ಡ್ʼದಾರರಿಗೆ ಬಿಗ್ ಅಪ್ಡೇಟ್..! ಏಪ್ರಿಲ್ 1 ರಿಂದ ನಿಯಮದಲ್ಲಿ ಬದಲಾವಣೆ
ನನ್ನ ಮಗಳು ಇಂಜಿನಿಯರ್. ನಾನು ಬುದ್ದಿವಂತನಾಗಿ ರಾಜಕೀಯ ಮಾಡಿಕೊಂಡು ಬಂದವನು. ಬೇರೆಯವರ ಹಾಗೇ ನಾನು ಎಲ್ಲೂ ಮೂತಿ ತೂರಿಸುವ ಕೆಲಸ ಮಾಡಿಲ್ಲ, ರಾಜಕಾರಣಿಗಳ ಮಕ್ಕಳು ಮಾತ್ರ ರಾಜಕೀಯ ಮಾಡಬೇಕು?, ಬೇರೆಯವರ ಮಕ್ಕಳು ರಾಜಕೀಯಕ್ಕೆ ಬರೋದು ಬೇಡ್ವಾ?, ಆ ತರ ನಮ್ಮ ತಲೆಯಲ್ಲೂ ಇಲ್ಲ. ಯೋಚನೆಯನ್ನು ಮಾಡಿಲ್ಲ ಎಂದು ಹೇಳಿದರು. ನನ್ನ ಉಸಿರು ಇರುವ ತನಕ ನನ್ನ ಮಗ ತುಮಕೂರು ರಾಜಕಾರಣಕ್ಕೆ ಬರಲ್ಲ ಎಂದರು.