ಭಾರತೀಯ ರೈಲ್ವೆಯಲ್ಲಿ ಆನ್ಲೈನ್ ಸೇವೆಗಳು ಇದ್ದರೂ ಕ್ಯೂಆರ್ ಕೋಡ್ ಸೇವೆ ಇರಲಿಲ್ಲ. ಅದರಲ್ಲೂ ಟಿಕೆಟ್ ಬುಕ್ಕಿಂಗ್ಗೆ ಪ್ರಯಾಣಿಕರು ಕ್ಯೂರ್ಆರ್ ಕೋಡ್ ಸೇವೆ ಆರಂಭಿಸುವಂತೆ ಒತ್ತಾಯಿಸುತ್ತಲೇ ಇದ್ದರು. ಆದರೆ ರೈಲ್ವೆ ಇದನ್ನು ಆರಂಭಿಸಲು ಮೀನ ಮೇಷ ಎಣಿಸುತ್ತಲೇ ಇತ್ತು. ಇದೀಗ ಗ್ರಹಕರ ಮನವಿಗೆ ಗ್ರೀನ್ ಸಿಗ್ನಲ್ ಸಿಕ್ಕಿದ್ದು ರೈಲ್ವೆ ಆನ್ ಲೈನ್ ಪಾವತಿಗೆ ಕ್ಯೂಆರ್ ಕೋಡ್ ಆರಂಭಿಸಲಾಗಿದೆ.
ರೈಲ್ವೆ ಪ್ರಯಾಣಕ್ಕೆ ಪರ್ಯಾಯ ಇಲ್ಲದೇ ಇದ್ದುದರಿಂದ ಜನ ಇರುವ ಸೌಲಭ್ಯವನ್ನೇ ಬಳಸಿಕೊಂಡು ಮುಂಗಡ ಟಿಕೆಟ್ ಇಲ್ಲವೇ ದಿನದ ಪ್ರಯಾಣದ ಟಿಕೆಟ್ ಪಡೆದು ಸಂಚರಿಸುತ್ತಿದ್ದರು. ಈಗ ಭಾರತೀಯ ರೈಲ್ವೆ ಕೂಡ ಒಂದು ಹೆಜ್ಜೆ ಮುಂದೆ ಹೋಗಿ ಕ್ಯೂಆರ್ ಕೋಡ್ ಸೇವೆಯನ್ನು ಟಿಕೆಟ್ ಬುಕ್ಕಿಂಗ್ ಸೇವೆಗೆ ಆರಂಭಿಸಿದೆ.
ಕೆಲವು ರೈಲ್ವೆ ನಿಲ್ದಾಣಗಳಲ್ಲಿ ಪ್ರಾಯೋಗಿಕವಾಗಿ ಕ್ಯೂಆರ್ ಕೋಡ್ ಬಳಸುವ ಸೇವೆ ಆರಂಭಿಸಲಾಗಿತ್ತು. ಪ್ರಯಾಣಿಕರಿಂದ ಉತ್ತಮ ಪ್ರತಿಕ್ರಿಯೆ ಬಂದಿದ್ದರಿಂದ ಇದನ್ನು ದೇಶಾದ್ಯಂತ ಜಾರಿಗೊಳಿಸಲು ಭಾರತೀಯ ರೈಲ್ವೆ ಮುಂದಾಗಿದೆ. ಏಪ್ರಿಲ್ 1ರಿಂದಲೇ ಕ್ಯೂಆರ್ ಕೋಡ್ ಸೇವೆಯು ಆರಂಭಗೊಂಡಿದೆ.
ಬರೀ ಟಿಕೆಟ್ ಮಾತ್ರವಲ್ಲದೇ ರೈಲ್ವೆಯ ಪಾರ್ಕಿಂಗ್ ವ್ಯವಸ್ಥೆ, ಫುಡ್ ಕೌಂಟರ್ಗಳಲ್ಲೂ ಪ್ರಯಾಣಿಕರು ಕ್ಯೂರ್ ಆರ್ ಕೋಡ್ ಬಳಸಿಕೊಳ್ಳುವ ವ್ಯವಸ್ಥೆ ಮಾಡಲಾಗಿದೆ. ಭಾರತೀಯ ರೈಲ್ವೆಯು ಹಲವಾರು ಸುಧಾರಣಾ ಕ್ರಮಗಳನ್ನು ಈಗಾಗಲೇ ಕೈಗೊಂಡಿದೆ. ಡಿಜಿಟಲ್ ಪಾವತಿ ವಿಚಾರದಲ್ಲೂ ಸಾಕಷ್ಟು ಬದಲಾವಣೆ ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಉನ್ನತೀಕರಣಗೊಳ್ಳಲಿದೆ. ಇದರಿಂದ ಪ್ರಯಾಣಿಕಗಿರಿಗೆ ಅನುಕೂಲವಾಗಲಿದೆ ಎಂದು ರೈಲ್ವೆ ಅಧಿಕಾರಿಗಳ ತಿಳಿಸಿದ್ದಾರೆ.