ಕೆ.ಆರ್.ಪುರ: ನಮ್ಮ ದೇಶಕ್ಕೆ ಮತ್ತೊಂದು ಬಾರಿ ನರೇಂದ್ರ ಮೋದಿ ಅವರ ಸೇವೆ ಅಗತ್ಯವಿದೆ, ಮತ್ತೊಮ್ಮೆ ಮೋದಿಯವರನ್ನ
ಪ್ರಧಾನಮಂತ್ರಿಗಳನ್ನಾಗಿ ಮಾಡಲು ನಾವೆಲ್ಲರೂ ಶ್ರಮಿಸಬೇಕೆಂದು ಮಾಜಿ ಸಚಿವ ಅರವಿಂದ ಲಿಂಬಾವಳಿ ಅವರು ಕರೆ ನೀಡಿದರು.
ಮಹದೇವಪುರ ಕ್ಷೇತ್ರದ ಹೋಪ್ ಫಾರ್ಮ್ ಬಳಿ ಏರ್ಪಡಿಸಿದ್ದ ಕಾರ್ಯಕರ್ತರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು. ದೇಶದ ಮತ್ತು ಬೆಂಗಳೂರಿನ ಅಭಿವೃದ್ಧಿಗೆ ಕೇಂದ್ರದ ಬಿಜೆಪಿ ಸರ್ಕಾರ ಅನೇಕಾರು ಕೆಲಸಗಳನ್ನು ಮಾಡಿದೆ, ಹೂಡಿಯಲ್ಲಿ ರೈಲ್ವೇ ನಿಲ್ದಾಣ ಮತ್ತು ಹೂಡಿ ಮುಖಾಂತರ ಸಬ್ ಅರ್ಬನ್ ರೈಲು ಬರುತ್ತಿದೆ. ಅದೇ ರೀತಿ ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿ, ದೇಶದ ಜನತೆಯ ಆಯುಷ್ಮಾನ್ ಭಾರತ ಯೋಜನೆಯಿಂದ
ಆರೋಗ್ಯ ಕಾರ್ಡ್ ಗಳು ದೊರಕಿದೆ,ಕೇಂದ್ರದಿಂದ 80 ಕೋಟಿ ಜನರಿಗೆ 5 ಕೆಜಿ ಅಕ್ಕಿ ಸಿಗುತ್ತಿದೆ.ಬಡವರಿಗೆ ಸುರನ್ನು ಕೊಡುವ ನಿಟ್ಟಿನಲ್ಲಿ ಅವಾಜ್ ಯೋಜನೆಯನ್ನು ತಂದು ಕೋಟ್ಯಾಂತರ ಜನರಿಗೆ ಮನೆಗಳನ್ನ ನಿಡಲಾಗಿದೆ ಎಂದರು.
ಕೊವೀಡ್ ಸಮಯದಲ್ಲಿ ಉಚಿತ ವ್ಯಾಕ್ಸಿನ್ ಕೊಟ್ಟಿದ್ದು ಮೋದಿಯವರು,ಈಗ ಬಡವರು ಶ್ರೀಮಂತರು ಎಲ್ಲಾ ವರ್ಗದ ಜನರ ಪ್ರಾಣರಕ್ಷಣೆ ಮಾಡಿದ್ದು ಪ್ರಧಾನಿ ನರೇಂದ್ರ ಮೋದಿ ಅವರು ಎಂದು ನೆನಪಿನಲ್ಲಿಟ್ಟುಕೊಳ್ಳಬೇಕು ಎಂದು ತಿಳಿಸಿದರು
ಮೋದಿಯವರ ಕೈ ಬಲಪಡಿಸಬೇಕು ಎಂದರೆ ನಮ್ಮ ಕ್ಷೇತ್ರದ ಅಭ್ಯರ್ಥಿಯನ್ನ ಗೆಲ್ಲಿಸುವ ಕೆಲಸ ಮಾಡಬೇಕು. ಕಳೆದ ಬಾರಿ ನಮ್ಮ ವಿಧಾನಸಭಾ ಕ್ಷೇತ್ರದಿಂದ 73 ಸಾವಿರ ಮುನ್ನಡೆ ಕೊಟ್ಟಿದ್ದು, ಈ ಬಾರಿ ಆ ಮತಗಳ ಸಂಖ್ಯೆ ಇನ್ನೂ ಹೆಚ್ಚಾಗಬೇಕು ಎಂದು ಹೇಳಿದರು.
ನಮ್ಮ ಕ್ಷೇತ್ರದಲ್ಲಿ ಸುಮಾರು 6 ಲಕ್ಷ 30 ಸಾವಿರ ಮತದಾರರ ಇದ್ದಾರೆ,ನಾವೆಲ್ಲಾರೂ ಈಸಲ ಪ್ರತಿ ಹಳ್ಳಿ,ಗ್ರಾಮ,ಬಡಾವಣೆ, ಅಪಾರ್ಟ್ ಮೆಂಟ್, ವಿಲ್ಲಾಗಳಿಗೆ ಭೇಟಿ ನೀಡಿ ನರೇಂದ್ರ ಮೋದಿಯವರ
ಅಭಿವೃದ್ಧಿ ಕಾರ್ಯಗಳ ಬಗ್ಗೆ ಮನವರಿಕೆ ಮಾಡಿಕೊಟ್ಟು
ಪ್ರತಿಯೊಬ್ಬರ ಮನವೊಲಿಕೆ ಮಾಡಿ ಬಿಜೆಪಿಗೆ ಮತ ಹಾಕುವಂತೆ ಮನವಿ ಮಾಡೋಣ ಎಂದರು.
ಕ್ಷೇತ್ರದಲ್ಲಿ 22 ಸಾವಿರ ಪೇಜ್ ಮುಖಂಡರನ್ನ ಮಾಡಲಾಗಿದೆ, 522 ಬೂತ್ಗಳಲ್ಲಿ 522 ತಂಡ ರಚಿಸಿ ಸಂಜೆ 5 ರಿಂದ 8 ಗಂಟೆಯವರೆಗೆ ಒಟ್ಟು 3 ಗಂಟೆಗಳ ಕಾಲ ಮನೆ ಮನೆ ಸಂಪರ್ಕ ಮಾಡಿ ಪ್ರಚಾರ ಮಾಡೋಣ, ಅಭಿವೃದ್ಧಿ ಅಂದರೆ ಬಿಜೆಪಿ, ಅಭಿವೃದ್ಧಿ ಅಂದರೆ ನರೇಂದ್ರ ಮೋದಿ ಎನ್ನುವ ಮಾತನ್ನು ಪ್ರತಿಯೊಬ್ಬರಿಗೂ ತಲುಪುವಂತೆ ಮಡೋಣ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಸಹ ಉಸ್ತುವಾರಿ ಸುಧಾಕರ್ ರೆಡ್ಡಿ, ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ರಾಜೇಶ್ ಜಿ. ವಿ, ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಪಿ. ಸಿ. ಮೋಹನ್, ಕ್ಷೇತ್ರದ ಉಸ್ತುವಾರಿ ಗುರುರಾಜ್ ಗಂಟಿಹೊಳಿ, ಶಾಸಕಿ ಮಂಜುಳಾ ಅರವಿಂದ ಲಿಂಬಾವಳಿ, ಮಂಡಲ ಅಧ್ಯಕ್ಷರಾದ ಮನೋಹರ ರೆಡ್ಡಿ, ಬಿ. ಎನ್. ನಟರಾಜ್, ಮುಖಂಡರಾದ ಮಹೇಂದ್ರ ಮೋದಿ, ವರ್ತುರು ಶ್ರೀಧರ್,ಚನ್ನಸಂದ್ರ ಚಂದ್ರಶೇಖರ, ಎಲ್.ರಾಜೇಶ್,ಹೂಡಿ ಪಿಳ್ಳಪ್ಪ ಇದ್ದರು.