ಬೆಂಗಳೂರು : ಕೇಂದ್ರ ಲೋಕಸಭಾ ಬಿಜೆಪಿ ಅಭ್ಯರ್ಥಿ ಪಿಸಿ ಮೋಹನ್ ಅವರು ಪತ್ನಿ ಶೈಲಾ ಮೋಹನ್ ಆಸ್ತಿ ಸೇರಿ ಒಟ್ಟು 16.5 ಕೋಟಿ ರೂ. ಆಸ್ತಿಯನ್ನು ಘೋಷಣೆ ಮಾಡಿದ್ದಾರೆ.
ಇಂದು ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಾಗೂ ಹಾಲಿ ಸಂಸದ ಪಿ.ಸಿ. ಮೋಹನ್ ಅವರು ಬಿಬಿಎಂಪಿ ಮುಖ್ಯ ಕಚೇರಿಯಲ್ಲಿ ಚುನಾವಣಾ ಅಧಿಕಾರಿಗೆ ನಾಮಪತ್ರ ಸಲ್ಲಿಸಿದರು. ಸೂಚಕರಾಗಿ ಮಾಜಿ ಸಿಎಂ ಡಾ.ಬಿ.ಎಸ್. ಯಡಿಯೂರಪ್ಪ, ವಿಪಕ್ಷ ನಾಯಕ ಆರ್. ಅಶೋಕ್, ಶಾಸಕ ಜನಾರ್ದನ ರೆಡ್ಡಿ, ಲಿಂಬಾವಳಿ ಈ ವೇಳೆ ಪಿ.ಸಿ. ಮೋಹನ್ ಅವರಿಗೆ ಸಾಥ್ ನೀಡಿದರು.
‘ಬಡವರ ಕಣ್ಣೀರು ಒರೆಸುವುದೇ ದೊಡ್ಡ ಕಾಲರ್: ಡಿಕೆ ಸುರೇಶ್ʼಗೆ ಟಾಂಗ್ ಕೊಟ್ಟ ಬಿಜೆಪಿ ಅಭ್ಯರ್ಥಿ!
ಪಿಸಿ ಮೋಹನ್ ಆಸ್ತಿ ಎಷ್ಟಿದೆ?
16.5 ಕೋಟಿ ಒಡೆಯ ಪಿಸಿ ಮೋಹನ್
ಒಟ್ಟು ಚರಾಸ್ತಿ – 10.46 ಕೋಟಿ ರೂ.
ಒಟ್ಟು ಸ್ಥಿರಾಸ್ತಿ – 6.02 ಕೋಟಿ ರೂ.
ಪತ್ನಿ ಶೈಲಾ ಮೋಹನ್ ಬಳಿ ಇರುವ ಚರಾಸ್ತಿ – 4.39 ಕೋಟಿ ರೂ.
ಸ್ಥಿರಾಸ್ತಿ – 7.25 ಕೋಟಿ ರೂ.
ಪಿಸಿ ಮೋಹನ್ ವಿರುದ್ಧ 02 ಕ್ರಿಮಿನಲ್ ಕೇಸ್ ದಾಖಲಾಗಿವೆ
ವಿವಿಧ ಬ್ಯಾಂಕ್ಗಳು, ಹಣಕಾಸು ಸಂಸ್ಥೆಗಳಿಂದ ಪಿಸಿ ಮೋಹನ್ ಮಾಡಿರುವ ಸಾಲ 5.79 ಕೋಟಿ ರೂ.
ಪತ್ನಿ ಮಾಡಿರುವ ಸಾಲ 10 ಕೋಟಿ ರೂ
ಪಿಸಿ ಮೋಹನ್ ಬಳಿ 39,590 ನಗದು ಇದೆ
ಪತ್ನಿ ಬಳಿ 4 ಲಕ್ಷ ರೂ. ನಗದು ಇದೆ
ಪಿಸಿ ಮೋಹನ್ಬಳಿ 1/2 kg ಚಿನ್ನ, 3 kg ಬೆಳ್ಳಿ ಒಡವೆ ಇವೆ
ಪತ್ನಿ ಶೈಲ ಮೋಹನ್ ಬಳಿ 1/2 kg ಚಿನ್ನ, 5kg ಬೆಳ್ಳಿ ಒಡವೆಗಳಿವೆ
ಪಿ ಸಿ ಮೋಹನ್ – 2022-23ರಲ್ಲಿ 49 ಲಕ್ಷ ರೂ ಆದಾಯ ತೋರಿಸಿದ್ದಾರೆ
ಶೈಲಾ ಮೋಹನ್ – 2022-23ರಲ್ಲಿ 2.40 ಕೋಟಿ ರೂ. ಆದಾಯ ತೋರಿಸಿದ್ದಾರೆ