ಬೇಸಿಗೆಯಲ್ಲಿ ಹೆಚ್ಚಿನವರು ಐಸ್ಕ್ರೀಮ್ ತಿನ್ನಲು ಇಷ್ಟಪಡುತ್ತಾರೆ. ಮಕ್ಕಳಿಂದ ಹಿಡಿದು ವಯಸ್ಸಾದವರ ವರೆಗೂ ಪ್ರತಿಯೊಬ್ಬರೂ ಐಸ್ಕ್ರೀಮ್ನ್ನು ಇಷ್ಟಪಡುತ್ತಾರೆ. ಐಸ್ಕ್ರೀಮ್ ತಿನ್ನುವುದರಿಂದ ದೇಹವು ತಂಪಾಗಿರುತ್ತದೆ ಮತ್ತು ಶಾಖದಿಂದ ಪರಿಹಾರವನ್ನು ನೀಡುತ್ತದೆ ಎಂದು ಅವರು ನಂಬುತ್ತಾರೆ.
ಆದರೆ ನೀವು ಗಮನಿಸಿದ್ದೀರಾ? ಐಸ್ ಕ್ರೀಂ ತಿಂದಾಗಲೆಲ್ಲ ನಮಗೇಕೆ ಬಾಯಾರಿಕೆಯಾಗುತ್ತದೆ ಯಾಕೆ ಎಂದು ಯೋಚಿಸಿದ್ದೀರಾ. ಐಸ್ ಕ್ರೀಂ ತಿಂದ ನಂತರ ಎಷ್ಟೇ ಬಾಯಾರಿಕೆಯಾದರೂ ನೀರು ಕುಡಿಯಬಾರದು
ಐಸ್ ಕ್ರೀಂ ತಿಂದ ನಂತರ ಬಿಸಿಯಾದ ಆಹಾರ ಮತ್ತು ನೀರನ್ನು ಸೇವಿಸಬೇಡಿ. ಚಹಾ, ಕಾಫಿ, ಸೂಪ್, ಗ್ರೀನ್ ಟೀ ಇತ್ಯಾದಿ.. ಅಷ್ಟೇ ಅಲ್ಲ, ಐಸ್ ಕ್ರೀಂ ತಿಂದ ನಂತರ ಕಿತ್ತಳೆ, ನಿಂಬೆ ಪಾನಕ, ದ್ರಾಕ್ಷಿಯಂತಹ ಹಣ್ಣುಗಳನ್ನು ಸೇವಿಸುವುದರಿಂದಲೂ ದೇಹಕ್ಕೆ ಅಪಾಯ.
ನೋಡಲು ಸುಂದರವಾಗಿ ಕಾಣುವ ದಾಳಿಂಬೆ ಹಣ್ಣಲ್ಲಿದೆ ಮಾರಕ ಕಾಯಿಲೆ ಗುಣಪಡಿಸೋ ಶಕ್ತಿ!
ಐಸ್ ಕ್ರೀಂ ತಿಂದ ನಂತರ ಮದ್ಯಪಾನ ಮಾಡಬಾರದು. ಒಂದು ವೇಳೆ ಸೇವಿಸಿದರೆ ವಾಂತಿ, ಭೇದಿ ಮತ್ತು ತಲೆತಿರುಗುವಿಕೆಯಂತಹ ಸಮಸ್ಯೆ ಶುರುವಾಗುತ್ತದೆ. ಐಸ್ ಕ್ರೀಮ್ ತಿಂದ ನಂತರ ಮಟನ್, ಬೆಣ್ಣೆ, ತುಪ್ಪ ಆಧಾರಿತ ಖಾದ್ಯಗಳು, ಬಿರಿಯಾನಿ, ಚೈನೀಸ್ ಫುಡ್, ಜಂಕ್ ಫುಡ್ ಮುಂತಾದ ಘಟ್ಟಿ ಪದಾರ್ಥ ಸೇವಿಸುವುದನ್ನು ತಪ್ಪಿಸಬೇಕು.
ನಮ್ಮ ಮೆದುಳು ಈ ಸಂಪೂರ್ಣ ಪ್ರಕ್ರಿಯೆಯನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುತ್ತದೆ ಮತ್ತು ಅದರ ಒಂದು ಸಣ್ಣ ಭಾಗಕ್ಕೆ ಸಂಕೇತಗಳನ್ನು ಕಳುಹಿಸುತ್ತದೆ. ಇದನ್ನು ಹೈಪೋಥಾಲಮಸ್ ಎಂದು ಕರೆಯಲಾಗುತ್ತದೆ.
ಈ ಸಂಕೇತವು ನಮಗೆ ಬಾಯಾರಿಕೆಯನ್ನುಂಟು ಮಾಡುತ್ತದೆ. ಹಾಗಾಗಿ ನಮಗೆ ಐಸ್ ಕ್ರೀಮ್ ತಿಂದ ನಂತರ ಬಾಯಾರಿಕೆಯಾಗುತ್ತದೆ.
ಆರೋಗ್ಯ ತಜ್ಞರ ಪ್ರಕಾರ ಐಸ್ ಕ್ರೀಮ್ ತಿಂದ ತಕ್ಷಣ ನೀರು ಕುಡಿಯಬಾರದು. ಇದು ನಿಮ್ಮ ಆರೋಗ್ಯಕ್ಕೆ ಒಳ್ಳೆಯದಲ್ಲ. ಐಸ್ ಕ್ರೀಮ್ ತಿಂದ ಕೆಲವೇ ನಿಮಿಷಗಳಲ್ಲಿ ನೀರು ಕುಡಿದರೆ ಗಂಟಲಿನಲ್ಲಿ ಸಮಸ್ಯೆಗಳು ಕಾಣಿಸಿಕೊಳ್ಳಬಹುದು.
ಗಂಟಲು ನೋವು ಉಂಟಾಗಬಹುದು. ಈ ಕಾರಣದಿಂದಾಗಿ ಹಲ್ಲುಗಳಲ್ಲಿ ಸಮಸ್ಯೆಗಳು ಪ್ರಾರಂಭವಾಗುತ್ತವೆ. ಅದಕ್ಕಾಗಿಯೇ ನೀವು ಐಸ್ ಕ್ರೀಮ್ ತಿಂದಾಗಲೆಲ್ಲಾ 15 ನಿಮಿಷಗಳ ನಂತರ ನೀರು ಕುಡಿಯಿರಿ.