IPl 2024 ರ ಪಾಯಿಂಟ್ಸ್ ಟೇಬಲ್ನಲ್ಲಿ ದೊಡ್ಡ ಬದಲಾವಣೆ ಕಂಡಿದೆ.
ಭಾನುವಾರ ಎರಡು ಪಂದ್ಯಗಳು ನಡೆದವು. ಅಹ್ಮದಾಬಾದ್ನಲ್ಲಿ ನಡೆದ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಗುಜರಾತ್ ಟೈಟಾನ್ಸ್ ತಂಡ 7 ವಿಕೆಟ್ಗಳ ಭರ್ಜರಿ ಜಯ ಸಾಧಿಸಿತು. ವಿಶಾಖಪಟ್ಟಣಂನಲ್ಲಿ ನಡೆದ ಮತ್ತೊಂದು ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ 20 ರನ್ಗಳಿಂದ ಗೆದ್ದು ಬೀಗಿತು.
ಮಧುಮೇಹಿಗಳೇ ಬ್ಲಡ್ ಶುಗರ್ ಕಂಟ್ರೋಲ್ ಬರಲು ಇದನ್ನು ತಪ್ಪದೇ ಸೇವಿಸಿ!
ಹೀಗಾಗಿ ಕೊಂಚ ಬದಲಾವಣೆ ಕಂಡಿದೆ. ಶ್ರೇಯಸ್ ಅಯ್ಯರ್ ನಾಯಕತ್ವದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಎರಡನೇ ಸ್ಥಾನದಿಂದ ಅಗ್ರಸ್ಥಾನಕ್ಕೆ ಜಿಗಿದಿದೆ. ಇವರು ಆಡಿದ ಎರಡೂ ಪಂದ್ಯಗಳಲ್ಲಿ ಜಯ ಸಾಧಿಸಿ 4 ಪಾಯಿಂಟ್ಸ್ ಪಡೆದಿದೆ. ಇವರ ನೆಟ್ ರನ್ರೇಟ್ +1.047 ಆಗಿದೆ.
ರುತುರಾಜ್ ಗಾಯಕ್ವಾಡ್ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಅಗ್ರಸ್ಥಾನದಿಂದ ಎರಡನೇ ಸ್ಥಾನಕ್ಕೆ ಕುಸಿದಿದೆ. ಇವರು ಆಡಿರುವ ಮೂರು ಪಂದ್ಯಗಳ ಪೈಕಿ ಎರಡರಲ್ಲಿ ಜಯ, ಒಂದರಲ್ಲಿ ಸೋಲು ಕಂಡು ನಾಲ್ಕು ಅಂಕ ಪಡೆದು +0.976 ರನ್ರೇಟ್ ಹೊಂದಿದೆ.
ಸಂಜು ಸ್ಯಾಮ್ಸನ್ ನಾಯಕತ್ವದ ರಾಜಸ್ಥಾನ್ ರಾಯಲ್ಸ್ ತಂಡ ಪಾಯಿಂಟ್ಸ್ ಟೇಬಲ್ನಲ್ಲಿ ಮೂರನೇ ಸ್ಥಾನದಲ್ಲಿದೆ. ಆಡಿದ ಎರಡೂ ಪಂದ್ಯದಲ್ಲಿ ಜಯ ಸಾಧಿಸಿ ನಾಲ್ಕು ಅಂಕ ಪಡೆದು +0.800 ರನ್ರೇಟ್ ಹೊಂದಿದೆ.
ಎಂಟನೇ ಸ್ಥಾನದಲ್ಲಿದ್ದ ಶುಭ್ಮನ್ ಗಿಲ್ ನಾಯಕತ್ವದ ಗುಜರಾತ್ ಟೈಟಾನ್ಸ್ ತಂಡ ಇದೀಗ ನಾಲ್ಕನೇ ಸ್ಥಾನಕ್ಕೇರಿದೆ. ಆಡಿದ ಮೂರು ಪಂದ್ಯಗಳ ಪೈಕಿ ಎರಡರಲ್ಲಿ ಜಯ-ಒಂದರಲ್ಲಿ ಸೋಲು ಕಂಡು 4 ಪಾಯಿಂಟ್ಸ್ ಪಡೆದಿದೆ. ಇವರ ನೆಟ್ ರನ್ರೇಟ್ -0.738 ಆಗಿದೆ.
ಇನ್ನು ಪ್ಯಾಟ್ ಕಮ್ಮಿನ್ಸ್ ನಾಯಕತ್ವದ ಸನ್ರೈಸರ್ಸ್ ಹೈದರಾಬಾದ್ ತಂಡ ಆಡಿದ ಮೂರು ಪಂದ್ಯಗಳಲ್ಲಿ ಎರಡು ಸೋಲು- ಒಂದು ಜಯ ಕಂಡು 2 ಪಾಯಿಂಟ್ಸ್ ಪಡೆದು ಐದನೇ ಸ್ಥಾನದಲ್ಲಿದೆ. ಇವರ ನೆಟ್ ರನ್ರೇಟ್ +0.204ಆಗಿದೆ.
ಕೆಎಲ್ ರಾಹುಲ್ ನಾಯಕತ್ವದ ಲಖನೌ ಸೂಪರ್ ಜೇಂಟ್ಸ್ ತಂಡ ಆರನೇ ಸ್ಥಾನದಲ್ಲಿದೆ. ಇವರು ಆಡಿದ ಎರಡು ಪಂದ್ಯಗಳಲ್ಲಿ ತಲಾ ಒಂದು ಜಯ-ಸೋಲು ಕಂಡು 2 ಅಂಕ ಪಡೆದುಕೊಂಡಿದೆ. ಇವರ ನೆಟ್ ರನ್ರೇಟ್ +0.025 ಆಗಿದೆ.
ರಿಷಭ್ ಪಂತ್ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಆಡಿದ ಮೂರು ಪಂದ್ಯಗಳಲ್ಲಿ ಎರಡು ಸೋಲು ಕಂಡು, ಒಂದು ಜಯದೊಂದಿಗೆ 2 ಪಾಯಿಂಟ್ಸ್ ಪಡೆದು ಏಳನೇ ಸ್ಥಾನದಲ್ಲಿದೆ. ಇವರ ನೆಟ್ ರನ್ರೇಟ್ -0.016 ಆಗಿದೆ.
ಶಿಖರ್ ಧವನ್ ನಾಯಕತ್ವದ ಪಂಜಾಬ್ ಕಿಂಗ್ಸ್ ಆಡಿದ ಮೂರು ಪಂದ್ಯದಲ್ಲಿ ಒಂದು ಜಯ, ಎರಡು ಸೋಲು ಕಂಡು 2 ಪಾಯಿಂಟ್ಸ್ ಪಡೆದು ಎಂಟನೇ ಸ್ಥಾನದಲ್ಲಿದೆ. ಇವರ ನೆಟ್ ರನ್ರೇಟ್ +0.337 ಆಗಿದೆ.
ಫಾಫ್ ಡುಪ್ಲೆಸಿಸ್ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಎಂಬತ್ತನೇ ಸ್ಥಾನಕ್ಕೆ ಕುಸಿದಿದೆ. ಆಡಿದ 3 ಪಂದ್ಯದಲ್ಲಿ ಎರಡು ಸೋಲು, ಒಂದು ಜಯ ಕಂಡು 2 ಅಂಕ ಪಡೆದು ಕೊಂಡಿದೆ. ಇವರ ನೆಟ್ ರನ್ರೇಟ್ -0.711 ಆಗಿದೆ.
ಹಾರ್ದಿಕ್ ಪಾಂಡ್ಯ ನಾಯಕತ್ವದ ಮುಂಬೈ ಇಂಡಿಯನ್ಸ್ ತಂಡ ಆಡಿದ ಎರಡೂ ಪಂದ್ಯದಲ್ಲಿ ಸೋಲು ಕಂಡು ಯಾವುದೇ ಪಾಯಿಂಟ್ಸ್ ಪಡೆಯದೆ ಹತ್ತನೇ ಸ್ಥಾನದಲ್ಲಿದೆ. ಇವರ ನೆಟ್ ರನ್ರೇಟ್ -0.925 ಆಗಿದೆ.
ಆರೆಂಜ್ ಕ್ಯಾಪ್ ಪಟ್ಟಿಯಲ್ಲಿ, ಆರ್ಸಿಬಿ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಅಗ್ರ ಸ್ಥಾನದಲ್ಲಿದ್ದಾರೆ. ಇವರು ಆಡಿರುವ ಮೂರು ಪಂದ್ಯಗಳಲ್ಲಿ ಒಟ್ಟು 181 ರನ್ ಗಳಿಸಿದ್ದಾರೆ. ಹೈದರಾಬಾದ್ ತಂಡದ ಹೆನ್ರಿಚ್ ಕ್ಲಾಸೆನ್ ಎರಡನೇ ಸ್ಥಾನದಲ್ಲಿದ್ದಾರೆ. ಇವರು ಆಡಿರುವ ಮೂರು ಪಂದ್ಯಗಳಲ್ಲಿ 167 ರನ್ ಕಲೆಹಾಕಿದ್ದಾರೆ. ಪಂಜಾಬ್ ತಂಡದ ನಾಯಕ ಶಿಖರ್ ಧವನ್ ಮೂರನೇ ಸ್ಥಾನಕ್ಕೆ ಜಿಗಿದಿದ್ದು, ಇವರು ಆಡಿರುವ ಮೂರು ಪಂದ್ಯಗಳಿಂದ 137 ರನ್ ಸಿಡಿಸಿದ್ದಾರೆ