2024 ರ ಇಂಡಿಯನ್ ಪ್ರೀಮಿಯರ್ ಲೀಗ್ ನ ಸೀಸನ್ 17 ರಲ್ಲಿ ಸೋಲಿಲ್ಲದೆ ಆಡುತ್ತಿದ್ದ ಚೆನ್ನೈ ಪಡೆಗೆ ಪಂತ್ ಪಡೆ ಮೊದಲ ಸೋಲುಣಿಸಿದೆ.
ವೈಜಾಗ್ ನಲ್ಲಿ ನಡೆದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ತಂಡ ಡೇವಿಡ್ ವಾರ್ನರ್ ಮತ್ತು ಪಂತ್ ಅವರ ಅರ್ಧಶತಕಗಳ ನೆರವಿನಿಂದ 20 ಓವರ್ಗೆ 5 ವಿಕೆಟ್ಗೆ 191 ರನ್ ಗಳಿಸಿತು. ಈ ಪಂದ್ಯದಲ್ಲಿ ಇಂದು ರಿಷಭ್ ಪಂತ್ ಎಲ್ಲರ ಗಮನಸೆಳೆದರು. ಈ ಬೃಹತ್ ಮೊತ್ತ ಬೆನ್ನಟ್ಟಿದ ಚೆನ್ನೈ ಸೂಪರ್ ಕಿಂಗ್ಸ್ ನಿಗದಿತ 20 ಓವರ್ಗೆ 6 ವಿಕೆಟ್ ನಷ್ಟಕ್ಕೆ 171 ರನ್ ಸಿಡಿಸುವ ಮೂಲಕ 20 ರನ್ ಗಳಿಂದ ಸೋಲನ್ನಪ್ಪಿತು.
ಇನ್ನು, ಡೆಲ್ಲಿ ಕ್ಯಾಪಿಟಲ್ಸ್ ನೀಡಿದ ಟಾರ್ಗೆಟ್ ಬೆನ್ನಟ್ಟಿದ ಚೆನ್ನೈ ಸೂಪರ್ ಕಿಂಗ್ಸ್ಗೆ ಆರಂಭಿಕ ಆಘಾತ ಎದುರಿಸಿತು. ನಾಯಕ ರುತುರಾಜ್ ಗಾಯಕ್ವಡ್ ಕೇವಲ 1 ರನ್ ಗಳಿಸಿ ವಿಕೆಟ್ ಒಪ್ಪಿಸಿದರೆ, ರಚಿನ್ ರವೀಂದ್ರ 12 ಎಸೆತದಲ್ಲಿ 2 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಆದರೆ ಅಜಿಂಕ್ಯಾ ರಹಾನೆ 30 ಎಸೆತದಲ್ಲಿ 45 ರನ್ ಸಿಡಿಸಿದರೆ, ಡ್ಯಾರಿಯಲ್ ಮಿಚೆಲ್ 26 ಎಸೆತದಲ್ಲಿ 34 ರನ್ ಸಿಡಿಸಿದರು. ಶಿವಂ ದುಜಬೆ 18 ರನ್ ಹಾಗೂ ಸಮೀರ್ ರಿಜ್ವಿ ಶೂನ್ಯಕ್ಕೆ ಔಟ್ ಆದರು. ರವೀಂದ್ರ ಜಡೇಜಾ 21 ರನ್ ಮತ್ತು ಧೋನಿ 16 ಎಸೆತದಲ್ಲಿ 37 ರನ್ ಸಿಡಿಸಿದರು.
ಚೆನ್ನೈ ಗೆಲುವಿನ ಓಟಕ್ಕೆ ಬ್ರೇಕ್ ಹಾಕಿದ ಡೆಲ್ಲಿ, ಪಂತ್ ಪಡೆ ಮೊದಲ ಸೋಲುಣಿಸಿದೆ.