ಬೆಂಗಳೂರು ಗ್ರಾಮಾಂತರ:- ಹಲವು ವರ್ಷಗಳಿಂದಿದ್ದ ರಸ್ತೆ ರಾತ್ರೋ ರಾತ್ರಿ ಮಾಯವಾಗಿದ್ದು, ರಸ್ತೆಗಾಗಿ ಬೀದಿಗಳಿದು ಸ್ಥಳೀಯರು ಆಕ್ರೋಶ ಹೊರ ಹಾಕಿದ್ದಾರೆ.
ಹೆದ್ದಾರಿಯಿಂದ ಒಳಗೆ ಹೋಗಲು ಇದ್ದ ರಸ್ತೆಯ ಪಕ್ಕದಲ್ಲೆ ರಾಜಣ್ಣ ಎಂಬುವವರಿಗೆ ಸೇರಿದ ಸೈಟ್ ಇದೆ. ಇದೇ ಸೈಟ್ಲ್ಲಿ ವಾಣಿಜ್ಯ ಕಟ್ಟಡ ಮಾಡಿ ಬಾರ್ ತೆರೆಯಲು ಮುಂದಾಗಿದ್ದು, ಸೈಟ್ ಪಕ್ಕದ ರಸ್ತೆಯನ್ನ ಕಬ್ಜ ಮಾಡಿ ಕಾಮಗಾರಿ ಮಾಡಲು ಹೊರಟಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ನಿಗೂಢವಾಗಿಯೇ ಉಳಿದ ಸುಮಲತಾ ಅಂಬರೀಶ್ ನಡೆ – ರೇಬಲ್ ಲೇಡಿಯ ಮುಂದಿನ ನಿಲುವೇನು!?
ಜೊತೆಗೆ ರಸ್ತೆಯನ್ನ ಮುಚ್ಚಿ ಬಾರ್ ಒಪನ್ ಮಾಡುತ್ತಿರುವುದಕ್ಕೆ ಆಕ್ರೋಶ ಹಾಕಿರುವ ಸ್ಥಳಿಯರು, ಒತ್ತುವರಿ ಮಾಡಿರುವ ರಸ್ತೆಯನ್ನ ಮೊದಲಿನಂತೆ ನಿರ್ಮಾಣ ಮಾಡಿಸುವಂತೆ ಒತ್ತಾಯಿಸಿದ್ದಾರೆ. ದಶಕಗಳಿಂದ ಹಾದು ಹೋಗಿದ್ದ ರಸ್ತೆಗೆ ಈ ಹಿಂದೆ ಚರಂಡಿ, ನೀರಿನ ಪೈಪ್ಲೈನ್ ಎಲ್ಲವೂ ಇತ್ತಂತೆ. ಆದ್ರೆ, ಸೈಟ್ನಲ್ಲಿ ಕಾಮಗಾರಿ ಆರಂಭಿಸಿರುವ ರಾಜಣ್ಣ ಎನ್ನುವವರು ರಾತ್ರಿಯಾಗುತ್ತಿದ್ದಂತೆ ರಸ್ತೆಯ ಜಾಗವೂ ನಮಗೆ ಸೇರಬೇಕೆಂದು ರಸ್ತೆಯನ್ನ ಕಿತ್ತುಹಾಕಿ ಕಾಮಗಾರಿ ಶುರು ಮಾಡಿದ್ದಾನೆ. ಜೊತೆಗೆ ರಾತ್ರೋರಾತ್ರಿ ಫಿಲ್ಲರ್ಗಳನ್ನ ಕೂಡ ಕಟ್ಟಲಾಗಿದ್ದು, ಜರೂರಾಗಿ ಬಿಲ್ಡಿಂಗ್ ನಿರ್ಮಾಣಕ್ಕೆ ಕೈಹಾಕಿದ್ದಾನೆ.
ಇನ್ನು ಓಡಾಡಲು ರಸ್ತೆಯಿಲ್ಲದೆ 40 ಮನೆಗಳ ನಿವಾಸಿಗಳು ಕಾಮಗಾರಿ ತಡೆದು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಜೊತೆಗೆ ರಸ್ತೆಯನ್ನ ಕಬ್ಜ ಮಾಡಿರುವ ರಾಜಣ್ಣ, ಸ್ಥಳೀಯ ಪಂಚಾಯತಿಯಲ್ಲೂ ಯಾವುದೇ ಅನುಮತಿ ಪಡೆದಿಲ್ಲ ಎಂದು ಸ್ಥಳೀಯರು ಆಕ್ರೋಶ ಹೊರ ಹಾಕಿದ್ದಾರೆ. ಹೀಗಾಗಿ ಯಾವುದೇ ಕಾರಣಕ್ಕೂ ರಸ್ತೆಯನ್ನ ಕಬ್ಜ ಮಾಡಿ ಬಿಲ್ಡಿಂಗ್ ಕಟ್ಟಲು ಬಿಡೋದಿಲ್ಲ ಎಂದು ಪಟ್ಟು ಹಿಡಿದಿದ್ದು, ಈ ಬಗ್ಗೆ ಜಿಲ್ಲಾಧಿಕಾರಿ ತಹಶೀಲ್ದಾರ್ಗೂ ಮನವಿ ಸಲ್ಲಿಸಿದ್ದಾರೆ.