ಮಂಡ್ಯ :- ಮಂಡ್ಯ ಸಂಸದೆ ಸುಮಲತಾ (Sumalatha) ರಾಜಕೀಯ ನಡೆ ನಿಗೂಢವಾಗಿದ್ದು, ಮುಂದಿನ ರಾಜಕೀಯ ಭವಿಷ್ಯಕ್ಕಾಗಿ ಯಾವ ನಿರ್ಧಾರ ಕೈಗೊಳ್ಳಲಿದ್ದಾರೆ ಎಂಬುದು ಕೂತುಹಲ ಮೂಡಿಸಿದೆ. ಆಪ್ತರು ಹಾಗೂ ಬೆಂಬಲಿಗರ ಅಭಿಪ್ರಾಯಕ್ಕೆ ತಲೆ ಬಾಗ್ತಾರಾ, ಅಥವಾ ಬಿಜೆಪಿ ಹೈಕಮಾಂಡ್ ನಿರ್ಧಾರಕ್ಕೆ ಗೌರವ ಕೊಡ್ತಾರ ಎಂಬುದನ್ನ ಕಾದು ನೋಡಬೇಕಿದೆ.
ನೀತಿ ಸಂಹಿತೆ: ಸಿಎಂ ಸಿದ್ದರಾಮಯ್ಯ ಚಲಿಸುತ್ತಿದ್ದ ಕಾರು ಪರಿಶೀಲಿಸಿದ ಅಧಿಕಾರಿಗಳು!
ಮಂಡ್ಯದಲ್ಲೆ ಸುಮಲತಾರ ಮುಂದಿನ ರಾಜಕೀಯ ನಡೆ ನಿರ್ಧಾರವಾಗಲಿದ್ದು, ಏಪ್ರಿಲ್ 3 ರಂದು ತನ್ನ ಅಂತಿಮ ನಿರ್ಧಾರ ಪ್ರಕಟ ಮಾಡುವುದಾಗಿ ತಿಳಿಸಿದ್ದಾರೆ. ಜೊತೆಗೆ ಪಕ್ಷೇತರವಾಗಿ ಸ್ಪರ್ಧಿಸುವಂತೆ ಆಪ್ತರು, ಬೆಂಬಲಿಗರ ಒತ್ತಾಯ ಮಾಡುತ್ತಿದ್ದಾರೆ. ಹೀಗಾಗಿ ಮೈತ್ರಿಗೆ ಸೆಡ್ಡು ಹೊಡೆದು ನಮ್ಮನ್ನ ಉಳಿಸಿ ಎನ್ನುತ್ತಿದ್ದಾರೆ ಅಭಿಮಾನಿಗಳು. ಇತ್ತ ಸುಮಲತಾ ಕೂಡ ಮಂಡ್ಯ ಬಿಡಲ್ಲ, ಮಂಡ್ಯ ಮಣ್ಣಿನ ಋಣ ಮರೆಯಲ್ಲ ಎಂದು ಜನರಿಗೆ ಹೇಳಿದ್ದಾರೆ. ಆದರೆ, ಮತ್ತೊಂದೆಡೆ ಮೈತ್ರಿ ಬೆಂಬಲಿಸಿ, ಪಕ್ಷ ನಿಮ್ಮ ಜೊತೆ ಇರಲಿದೆ. ಸೂಕ್ತ ಸ್ಥಾನಮಾನದ ಭರವಸೆಯನ್ನ ಕೂಡ ನೀಡುವುದಾಗಿ ಬಿಜೆಪಿ ಹೈಕಮಾಂಡ್ ಹೇಳುತ್ತಿದೆ. ಹೀಗಾಗಿ ಸದ್ಯ ತ್ರಿಶಂಕು ಸ್ಥಿತಿಗೆ ತಲುಪಿದ್ದು, ಬುಧವಾರ ಮಂಡ್ಯದಲ್ಲಿಯೇ ತಮ್ಮ ಅಂತಿಮ ತೀರ್ಮಾನ ಪ್ರಕಟಿಸುವುದಾಗಿ ಘೋಷಣೆ ಮಾಡಿದ್ದಾರೆ