ಶಿವಮೊಗ್ಗ:- ನಮ್ಮ ಬಿಜೆಪಿ ಕಾರ್ಯಕರ್ತರಿಗೆ ಶಿವಮೊಗ್ಗದಲ್ಲಿ ಧಮ್ಕಿ ಹಾಕಲಾಗುತ್ತಿದೆ ಎಂದು ಬಿವೈ ರಾಘವೇಂದ್ರ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು ನರೇಂದ್ರ ಮೋದಿ ನೇತೃತ್ವದಲ್ಲಿ ಬಿಜೆಪಿ ಪ್ರಪಂಚದಲ್ಲೇ ದೊಡ್ಡ ರಾಜಕೀಯ ಪಕ್ಷವಾಗಿದೆ. ಇಷ್ಟು ದೊಡ್ಡ ಮಟ್ಟದಲ್ಲಿ ಪಕ್ಷ ಹೊರಹೊಮ್ಮಲು ಪೇಜ್ ಪ್ರಮುಖರೇ ಕಾರಣ ಎಂದರು.
ಗುವಾಹಟಿಯಲ್ಲಿ ಭಾರೀ ಮಳೆ – ಅಂತರಾಷ್ಟ್ರೀಯ ವಿಮಾನ ನಿಲ್ದಾಣದೊಳಗೆ ನುಗ್ಗಿದ ನೀರು!
ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಪಕ್ಷ ಇಡೀ ಪ್ರಪಂಚದಲ್ಲಿ ದೊಡ್ಡ ರಾಜಕೀಯ ಪಕ್ಷವಾಗಿದೆ. ಪಕ್ಷ ಇಷ್ಟು ದೊಡ್ಡ ಮಟ್ಟದಲ್ಲಿ ಹೊರ ಹೊಮ್ಮಲು ಪೇಜ್ ಪ್ರಮುಖರು ಕಾರಣ. ಪ್ರಪಂಚದಲ್ಲಿ ನರೇಂದ್ರ ಮೋದಿ ನೋಡಲು ಜನರು ಹುಚ್ಚೆಂದು ಕಣಿಯುತ್ತಿದ್ದಾರೆ. ಮೋದಿ ಅವರ ಮಾತು ಕೇಳಬೇಕು ಅಂತಾ ಕಾತುರದಿಂದ ಇರುತ್ತಾರೆ. ಅಂತಹ ಪ್ರಧಾನಮಂತ್ರಿ ಅವರು ಶಿವಮೊಗ್ಗ ಜಿಲ್ಲೆಗೆ ಕಳೆದ ಒಂದೂವರೆ ವರ್ಷದಲ್ಲಿ ಮೂರು ಬಾರಿ ಬಂದಿದ್ದರು ಎಂದು ರಾಘವೇಂದ್ರ ಹೇಳಿದರು.
ಭಾರತವನ್ನು ಆಳಿದ ಕಾಂಗ್ರೆಸ್ ಪಕ್ಷ ಅಧಿಕೃತ ವಿರೋಧ ಪಕ್ಷ ಸ್ಥಾನ ಕಳೆದುಕೊಂಡಿದೆ. ಗ್ರಾಮ ಪಂಚಾಯ್ತಿಯಲ್ಲಿ ಒಂದು ಸ್ಥಾನವೂ ಇರದಿದ್ದ ಬಿಜೆಪಿ ಇಂದು ದೊಡ್ಡದಾಗಿ ಬೆಳೆದಿದೆ ಎಂದರು. ಸೈನಿಕರ ತಪ್ಪಸ್ಸಿನ ಪ್ರತಿಫಲದಿಂದ ನಾವೆಲ್ಲ ನೆಮ್ಮದಿಯಿಂದ ಬದುಕುತ್ತಿದ್ದೇವೆ. ಕಾಂಗ್ರೆಸ್ನವರು ಬಡತನ ಪ್ರೀತಿ ಮಾಡಿದರು, ಬಡವರನ್ನು ದ್ವೇಷ ಮಾಡಿದರು. ಅದರ ಪ್ರತಿಫಲ ಇಂದಿಗೂ ಹಲವು ಯೋಜನೆಗಳನ್ನು ಕೊಡುವಂತಾಗಿದೆ. ಶಿವಮೊಗ್ಗ ಕ್ಷೇತ್ರದಲ್ಲಿ ಅಭಿವೃದ್ಧಿ ಏನಾದರೂ ಆಗಿದ್ದರೆ ಅದು ಬಿಜೆಪಿ ಸರಕಾರದ ಅವಧಿಯಲ್ಲಿ ಮಾತ್ರ ಎಂದರು.
ಶಿವಮೊಗ್ಗ ಲೋಕಸಭಾ ಕ್ಷೇತ್ರವು ಈ ಬಾರಿ ಜಿದ್ದಾಜಿದ್ದಿಯ ಕಣಗಳಲ್ಲಿ ಒಂದಾಗಿದೆ. ಇದಕ್ಕೆ ಕಾರಣ ಬಿಜೆಪಿಯ ಕಟ್ಟಾಳು ಕೆಎಸ್ ಈಶ್ವರಪ್ಪ ಅವರು ಯಡಿಯೂರಪ್ಪ ಮತ್ತು ಮಕ್ಕಳ ವಿರುದ್ಧ ಬಂಡಾಯದ ಬಾವುಟ ಹಾರಿಸಿರುವುದು.