ಬನ್ನೇರುಘಟ್ಟ:- ಜಾತ್ರೆ ಅಂದ್ರೆ ಅದೊಂದು ರೀತಿಯ ಸಂಭ್ರಮ ಸಡಗರದ ಆಚರಣೆ. ತಮ್ಮ ಊರಿನ ದೇವತೆಗಳಿಗೆ ವರ್ಷಕ್ಕೊಂದು ರಥೋತ್ಸವ, ಕರಗ, ಪಲ್ಲಕ್ಕಿ ನಡೆಸುವ ಮೂಲಕ ಗ್ರಾಮದ ಜನ ದೇವರ ಕೃಪೆಗೆ ಪಾತ್ರರಾಗುತ್ತಾರೆ. ಅದ್ರೆ ಇಲ್ಲೊಂದು ಕಡೆ ಮಂಗಳಮುಖಿಯರಿಗೆಂದೆ ವಿಶಿಷ್ಟ ಜಾತ್ರೆ ನಡೆಯುತ್ತಿದ್ದು ತಮ್ಮ ಆರಾಧ್ಯ ದೇವಿಗೆ ವರ್ಷಕೊಂದು ಬಾರಿ ಜಾತ್ರೆ ನಡೆಸಿ ತಮ್ಮ ಹರಕೆಗಳನ್ನು ತೀರಿಸುತ್ತಾರೆ. ಅಷ್ಟಕ್ಕು ಮಂಗಳ ಮುಖಿಯರ ಆ ದೇವಿ ಯಾರು, ಎಲ್ಲಿ ನಡೆಯುತ್ತೆ ಆ ಜಾತ್ರೆ ಅಂತೀರ ನೋಡಿ ಈ ಸ್ಟೋರಿ ನೋಡಿ……
ವಿಷ, ವೈರಿ ಎಂಬ ಡಿಸಿಎಂ ಹೇಳಿಕೆ ಆಶ್ಚರ್ಯ ತಂದಿದೆ – ಸುಮಲತಾ ಅಂಬರೀಶ್!
ಹೌದು ಹೀಗೆ ಮೈತುಂಭ ಹರಿಶಿಣ ಬಳಿದುಕೊಂಡು ತಲೆ ತುಂಬಾ ಹೂ ಮೂಡಿದು ತಮಟೆ ಸದ್ದಿಗೆ ಹೆಜ್ಜೆ ಹಾಕುತ್ತಿರುವ ಮಂಗಳ ಮುಖಿಯರು ತಮ್ಮ ನೆಚ್ಚಿನ ಆರಾಧ್ಯ ದೇವಿ ಬೇಗಾಳಮ್ಮನಿಗೆ ಹರಕೆ ಸಲ್ಲಿಸಲು ತೆರಳುತಿರುವ ದೃಶ್ಯ ಕಂಡು ಬಂದದ್ದು ಬೆಂಗಳೂರು ಹೊರವಲಯ ಬನ್ನೇರುಘಟ್ಟದಲ್ಲಿ. ಪ್ರತಿವರ್ಷ ಮಾರ್ಚ್ ತಿಂಗಳಲ್ಲಿ ಬನ್ನೇರುಘಟ್ಟದ
ಚಂಪಕದಾಮ ಸ್ವಾಮಿಯ ರಥೋತ್ಸವದಂದು ಕರ್ನಾಟಕ, ತಮಿಳುನಾಡು ಆಂಧ್ರ ಸೇರಿದಂತೆ ಹಲವು ಕಡೆಗಳಿಂದ ಸಾವಿರಾರು ಜನ ಮಂಗಳಮುಖಿಯರು ಒಟ್ಟಾಗಿ ಸೇರಿ ಇಲ್ಲಿನ ತಮ್ಮ ಆರಾಧ್ಯ ದೇವಿ ಬೇಗಾಳಮ್ಮನಿಗೆ ಪೂಜೆಸಲ್ಲಿಸುತ್ತಾರೆ. ಇನ್ನು ಕೆಲವು ಕುಟುಂಬದವರು ತಮ್ಮ ಮನೆಯಲ್ಲಿರುವ ಮಂಗಳಮುಖಿಯರನ್ನು ಸಿಂಗರಿಸಿ ದೇವಾಲಯಕ್ಕೆ ಕರೆತಂದು ತಮ್ಮ ಕುಟುಂಬಕ್ಕೆ ಒಳ್ಳೆಯದಾಗಲಿ ಎಂದು ದೇವಿಯ ಬಳಿ ಪ್ರಾರ್ಥಿಸುತ್ತಾರೆ,ಇನ್ನು ಮಕ್ಕಳಾಗದವರು ಸಹ ಬೇಗಾಳಮ್ಮನಿಗೆ ಹರಕೆ ಹೊತ್ತು ತಮ್ಮ ಮನೆಯ ಮಕ್ಕಳಿಗೆ ಮಂಗಳಮುಖಿಯರಂತೆ ಸಿಂಗರಿಸಿ ಇಲ್ಲಿಗೆ ಕರೆತಂದು ತಮ್ಮ ಹರಕೆ ತೀರಿಸುವುದು ಇಲ್ಲಿನ ವಿಶೇಷ ವಾಗಿದೆ.
ಪ್ರತಿವರ್ಷ ಇದೇ ಸಮಯದಲ್ಲಿ ರಥೋತ್ಸ ನಡೆಯುತ್ತದೆ, ಬೆಳಿಗ್ಗೆ ರಥದಲ್ಲಿ ಚಂಪಕದಾಮಸ್ವಾಮಿಯನ್ನು ಕುಳ್ಳಿರಿಸಿ ಬನ್ನೇರುಘಟ್ಟದ ರಥ ಬೀದಿಯಲ್ಲಿ ಎಳೆಯುತ್ತಾರೆ ಈ ಸಮಯದಲ್ಲಿ ಸಾವಿರಾರು ಜನ ರಥವನ್ನು ಎಳೆದು ರಥದ ಮೇಲೆ ಬಾಳೆಹಣ್ಣು ಧವನ ಎಸೆದು ಪುನೀತರಾಗುತ್ತಾರೆ, ಇನ್ನು ಇಲ್ಲಿನ ರಥೋತ್ಸವಕ್ಕೆ ತಮಿಳುನಾಡು ಹಾಗು ಬೆಂಗಳೂರಿನ ಸುತ್ತಮುತ್ತಲಿನ ಜನ ಆಗಮಿಸುತ್ತಾರೆ. ಹೀಗೆ ಬಂದ ಜನರಿಗೆ ಸುತ್ತ ಮುತ್ತಲಿನ ಗ್ರಾಮಸ್ಥರು ಅರವಂಟಿಕೆಗಳನ್ನು ನಿರ್ಮಿಸಿ ತಂಪಾದ ಮಜ್ಜಿಗೆ ಬೆಲ್ಲದ ಪಾನಕ ಹಾಗು ಕೋಸಂಬರಿ ನೀಡಿ ಬಾಯಿ ತಣಿಸುವ ಮೂಲಕ ದೇವರ ಕೃಪೆಗೆ ಪಾತ್ರರಾಗುತ್ತಿದ್ದು ಈ ಜಾತ್ರೆ ಮಹೋತ್ಸಹವ ಎರಡು ತಿಂಗಳಿನಿಂದ ತಯಾರಿ ನಡೆಯುತ್ತದೆ ದೇಶದಲ್ಲಿ ಬಿದಿರು ನಲ್ಲಿ ತಯಾರು ಮಾಡಿದ ಹಗ್ಗವನ್ನು ಬಳಸಿ ರಥ ಎಳೆಯುವುದು ಇಲ್ಲಿನ ವಿಶೇಷ ಹಾಗೆ ಇಲ್ಲಿನ ಜಾತ್ರೆಯು ವಿಶ್ವ ವಿಖ್ಯಾತಿ ಪಡೆಯುತ್ತಿದ್ದು ಕಾಡಂಚಿನಲ್ಲಿರುವ ಈ ದೇವಾಲಯ ವಿಶೇಷ ಭಕ್ತ ವೃಂದವನ್ನು ಹೊಂದಿದೆ.
ಒಟ್ಟಾರೆ ಬೆಂಗಳೂರಿಗೆ ಹೊಂದಿಕೊಂಡಿರುವ ಬನ್ನೇರುಘಟ್ಟ ಚಂಪಕದಾಮ ಸ್ವಾಮಿಯ
ಗ್ರಾಮೀಣ ಸೊಬಗಿನ ಜಾತ್ರೆಯ ವೈಭವ ಒಂದೆಡೆಯಾದರೆ, ಮತ್ತೊಂದೆಡೆ ಮಂಗಳಮುಖಿಯರು
ವರ್ಷಕ್ಕೊಮ್ಮೆ ತಮ್ಮ ಆರಾಧ್ಯ ದೇವಿಗೆ ಪೂಜೆ ಸಲ್ಲಿಸುವುದು ಈ ಜಾತ್ರೆಯ ವೈಶಿಷ್ಟ್ಯವಾಗಿದೆ.