ಬೆಂಗಳೂರು:- ವಿಷ, ವೈರಿ ಎಂಬ ಡಿಸಿಎಂ ಹೇಳಿಕೆ ಆಶ್ಚರ್ಯ ತಂದಿದೆ ಎಂದು ಸುಮಲತಾ ಅಂಬರೀಶ್ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ವಿಷ, ವೈರಿ ಎಂಬ ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿಕೆ ನನಗೆ ಆಶ್ಚರ್ಯ ಮೂಡಿಸಿದೆ. ಈಗ ಈ ವಿಷಯ ಮಾತನಾಡಿದ್ದು ಯಾಕೆ ಎಂದು ಪ್ರಶ್ನಿಸಿದ್ದಾರೆ. ಕಾಂಗ್ರೆಸ್ನ ಯಾರ್ಯಾರು ಸಂಪರ್ಕ ಮಾಡಿದ್ದಾರೆ, ಮಾಡುತ್ತಿದ್ದಾರೆ. ಈ ಬಗ್ಗೆ ನಿಮ್ಮ ಊಹೆಗೆ ಬಿಡುತ್ತೇನೆ ಎಂದು ಹೇಳಿದ್ದಾರೆ.
ಅಧಿಕಾರ ಶಾಶ್ವತವಲ್ಲ, ದುರಹಂಕಾರ ಛಿದ್ರಗೊಳ್ಳುತ್ತದೆ – ಬಿಜೆಪಿ ವಿರುದ್ಧ ಪ್ರಿಯಾಂಕಾ ವಾಗ್ದಾಳಿ !
2019ಕ್ಕೂ ಮುಂಚೆ ನನಗೆ ಯಾವುದೇ ರಾಜಕೀಯ ಅನುಭವ ಇರಲಿಲ್ಲ. ರಾಜಕೀಯ ಚದುರಂಗದ ಆಟ ಅನ್ನೋದು ಅರಿವಾಗಿದೆ. ಮಂಡ್ಯದ ಜನರ ಅಭಿಪ್ರಾಯ ಕೇಳಿ ಮುಂದಿನ ನಿರ್ಧಾರ ಕೈಗೊಳ್ಳುವೆ. ನನ್ನ ಮಾತಿನಲ್ಲಿ ಯಾವುದೇ ಬದಲಾವಣೆಯಿಲ್ಲ ಎಂದಿದ್ದಾರೆ