ಹಾಸನ:- ಸಿದ್ದರಾಮಯ್ಯ ಅಹಂನ್ನು ಸದ್ಯದಲ್ಲೇ ಇಳಿಸ್ತೇನೆ ಎಂದು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ವಾಗ್ದಾಳಿ ಮಾಡಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ನಾನು ಕುಳಿತಿದ್ದೇನೆ ಆದರೆ ಬುದ್ದಿ ಕೆಲಸ ಮಾಡುತ್ತೆ. ಯಾರಿಗೂ ಜಗ್ಗಲ್ಲ. ಇವರು ಏನೇನು ಮಾಡಿದ್ದಾರೆ ಒಂದೊಂದು ಎಳೆಎಳೆಯಾಗಿ ಬಿಚ್ಚಿಡುತ್ತೇನೆ ಎಂದು ಹೇಳಿದ್ದಾರೆ.
ನಿಮ್ಮ ಸ್ಮಾರ್ಟ್ ಫೋನ್ ಅಪ್ ಡೇಟ್ ಕೇಳ್ತಿದ್ರೆ ಕೂಡಲೇ ಮಾಡಿ, ಇಲ್ಲಂದ್ರೆ ಫೋನ್ ಹ್ಯಾಕ್ ಆಗ್ಬಹುದು!
ಏ.4 ಹಾಸನದಲ್ಲಿ ಅರವತ್ತು, ಎಪ್ಪತ್ತು ಸಾವಿರ ಜನ ಸೇರುತ್ತಾರೆ. ಅಲ್ಲಿ ಹೇಳುತ್ತೇನೆ. ಅವರು ಏ.5 ಕ್ಕೆ ಹಾಸನಕ್ಕೆ ಬರುತ್ತಾರಂತೆ ಬರಲಿ. ಲೋಕಸಭಾ ಚುನಾವಣೆ ಆದಮೇಲೆ ಕಾಂಗ್ರೆಸ್ ಪರಿಸ್ಥಿತಿ ಏನಾಗುತ್ತೆ ಅನ್ನೋದನ್ನ ಕಾದುನೋಡೋಣ. ಈ ಭಾರಿ ಜನ ತೀರ್ಮಾನ ಮಾಡುತ್ತಾರೆ ಎಂದರು.
2019 ಮಾರ್ಚ್ 13 ರಂದು ನಾನು ಚುನಾವಣೆಗೆ ನಿಲ್ಲಲ್ಲ ಎಂದಿದ್ದೆ. ಆದರೆ ನನ್ನನ್ನು ಸೋಲಿಸಿ ಅವಮಾನ ಮಾಡಬೇಕು ಅಂತ ಮಾಡಿದ್ದರು. ನಾನು ಮತ್ತೆ ಚುನಾವಣೆಗೆ ನಿಲ್ಲಲ್ಲ. ಆದರೆ ನೀವು ಆ ಕಪ್ಪುಚುಕ್ಕೆ ಇಟ್ಟಿದ್ದೀರಲ್ಲ ಸಿದ್ದರಾಮಯ್ಯ ಅವರೇ. ನನಗೆ 91 ವಯಸ್ಸು ಸಿದ್ದರಾಮಯ್ಯ ಅವರೇ ನೆನಪಿನಲ್ಲಿ ಇಟ್ಕೊಳಿ. ನಾನು ಮೋದಿ ಸೇರಿರುವುದು ನಿಜ. ಪ್ರಧಾನಮಂತ್ರಿ ಸ್ಥಾನದಿಂದ ಏಕೆ ನನ್ನನ್ನು ತೆಗೆದಿರಿ.
ಪಿ.ಚಿದಂಬರಂ ಹೇಳ್ತಾರೆ ನಮ್ಮ ಅಕೌಂಟ್ ಸೀಜ್ ಮಾಡಿದ್ದಾರೆ ನಮ್ಮ ಹತ್ರ ದುಡ್ಡಿಲ್ಲ ಅಂತ. ನನ್ನ ಅರವತ್ತು ವರ್ಷದಲ್ಲಿ ರಾಜಕೀಯ ಜೀವನ ನೋಡಿದ್ದೇನೆ. ಇಡೀ ಬೆಂಗಳೂರು ಒಬ್ಬನ ಕೈಯಲ್ಲಿದೆ. ಬಿಡಿಎ, ಕಾರ್ಪೊರೇಷನ್, ಪ್ಲಾನಿಂಗ್ ಕಮಿಷನ್, ಒಬ್ಬನ ಕೈಯಲ್ಲಿದೆ. ಅಷ್ಟೇ ಅಲ್ಲಾ ಇಡೀ ನೀರಾವರಿ ಅವರ ಕೈಯಲ್ಲಿ ಇದೆ. ಎಲ್ಲಿದೆ ಕಾಂಗ್ರೆಸ್, ರಾಜಸ್ತಾನ, ಮಧ್ಯಪ್ರದೇಶ, ಛತ್ತೀಸ್ಗಡ್, ಕೇರಳ, ಆಂಧ್ರಪ್ರದೇಶದಲ್ಲಿ ಇದೆಯಾ? ಕರ್ನಾಟಕ, ತೆಲಂಗಾಣದಲ್ಲಿ ಮಾತ್ರ ಕಾಂಗ್ರೆಸ್ ಇದೆ ಎಂದರು.