ನಾವು ಮಾರುಕಟ್ಟೆಯಲ್ಲಿ ವ್ಯಾಪಕವಾಗಿ ಕಾಣುವ ಹಣ್ಣುಗಳಲ್ಲಿ ಸೇಬು ಮತ್ತು ದಾಳಿಂಬೆ ಪ್ರಮುಖವು. ದಾಳಿಂಬೆ ಕಡಿಮೆ ಬೆಲೆಗೆ ಸಿಗುತ್ತದೆ. ಹೆಚ್ಚಾಗಿ ಈ ಹಣ್ಣು ರಕ್ತವನ್ನು ವೃದ್ಧಿಸುತ್ತದೆ, ದೇಹದ ಎಲ್ಲಾ ಭಾಗಗಳಿಗೆ ಹರಿಯಲು ಸಹಾಯ ಮಾಡುತ್ತದೆ ಅಂತ ಎಲ್ಲರಿಗೂ ಗೊತ್ತು. ಆದರೆ ಈ ಹಣ್ಣು ಜಾಂಡೀಸ್ ಅನ್ನು ಸಹ ಗುಣಪಡಿಸುತ್ತದೆ ಅಂತ ಕೊಂಚ ಮಂದಿಗಷ್ಟೇ ಗೊತ್ತು..
R Shankar: ಪದೇ ಪದೇ ನನ್ನನ್ನು ಚುಚ್ಚಿ ಚುಚ್ಚಿ ಕೊಂದರು: ಕಣ್ಣೀರು ಹಾಕಿದ ಆರ್ ಶಂಕರ್
ವಿಶೇಷವಾಗಿ ಈ ಹಣ್ಣು ಮೆಗ್ನೀಸಿಯಮ್, ಸೆಲೆನಿಯಮ್ ಮತ್ತು ಸತುವಿನಿಂದ ಸಮೃದ್ಧವಾಗಿದ್ದು, ಇದನ್ನು ತಿನ್ನುವುದರಿಂದ ಹಲವಾರು ಆರೋಗ್ಯ ಪ್ರಯೋಜನಗಳಿವೆ. ಈ ದಾಳಿಂಬೆ ಎಲೆಗಳಿಂದ ಕಾಮಾಲೆಯನ್ನು ಗುಣಪಡಿಸಬಹುದು ಎನ್ನಲಾಗುತ್ತದೆ. ಈ ಎಲೆಗಳಿಂದ ಮಾಡಿದ ಕಷಾಯವನ್ನು ಸೇವಿಸಿದರೆ ಕಾಮಾಲೆ ಕಡಿಮೆಯಾಗುತ್ತದೆ ಎನ್ನುತ್ತಾರೆ ಆರೋಗ್ಯ ತಜ್ಞರು.
ಇದಲ್ಲದೆ, ದಾಳಿಂಬೆ ಎಲೆಗಳ ಕಷಾಯವನ್ನು ಸೇವಿಸುವುದರಿಂದ ನೀವು ದೀರ್ಘಕಾಲದ ಶೀತ ಮತ್ತು ಕೆಮ್ಮು ಸಮಸ್ಯೆಗಳಿಂದ ಮುಕ್ತರಾಗುತ್ತೀರಿ. ಇದರಿಂದ ರೋಗನಿರೋಧಕ ಶಕ್ತಿಯೂ ಹೆಚ್ಚುತ್ತದೆ. ದಾಳಿಂಬೆ ಎಲೆಗಳನ್ನು ಆಯುರ್ವೇದದಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ.