ಬಾಲಿವುಡ್ ನಟಿ ಅಥಿಯಾ ಶೆಟ್ಟಿ ಹಾಗೂ ಕ್ರಿಕೆಟಿಗ ಕೆ.ಎಲ್ ರಾಹುಲ್ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಡ್ಯಾನ್ಸ್ ಶೋವೊಂದರಲ್ಲಿ ಪುತ್ರಿ ಅಥಿಯಾ ಪ್ರೆಗ್ನೆನ್ಸಿ ಬಗ್ಗೆ ಸುನೀಲ್ ಶೆಟ್ಟಿ ಸುಳಿವು ನೀಡಿದ್ದಾರೆ.
‘ಡ್ಯಾನ್ಸ್ ದೀವಾನೆ’ ಶೋನಲ್ಲಿ ಸುನಿಲ್ ಶೆಟ್ಟಿ ಭಾಗಿಯಾಗಿದ್ದು ಈ ವೇಳೆ ನಿರೂಪಕಿ, ಅಜ್ಜನಾಗುವ ಕುರಿತು ಪ್ರಶ್ನೆ ಕೇಳಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸಿದ ಸುನೀಲ್ ಶೆಟ್ಟಿ, ಹೌದು ಮುಂದಿನ ಸೀಸನ್ ಗೆ ಬಂದಾಗ ನಾನು ವೇದಿಕೆ ಮೇಲೆ ಅಜ್ಜನಂತೆಯೇ ಓಡಾಡುತ್ತೇನೆ ಎಂದಿದ್ದಾರೆ.
ಸುನೀಲ್ ಶೆಟ್ಟಿ ಈ ಹೇಳಿಕೆ ನೀಡಿದ ನಂತರ ಅಥಿಯಾ ಶೆಟ್ಟಿ ಪ್ರೆಗ್ನೆಂಟ್ ಆಗಿದ್ದಾರಾ? ಹಾಗಾಗಿ ಈ ರೀತಿಯ ಹೇಳಿಕೆ ನೀಡಿದ್ರಾ ಎಂಬ ಅನುಮಾನ ಶುರುವಾಗಿದೆ. ಅದಕ್ಕೆ ಸರಿಯಾಗಿ ಮದುವೆ ನಂತರ ನಟಿ ಸಿನಿಮಾಗಳಿಂದ ದೂರವಿದ್ದಾರೆ. ಇತ್ತೀಚೆಗೆ ಯಾವುದೇ ಬಾಲಿವುಡ್ಗೆ ಸಂಬಂಧಿಸಿದ ಪಾರ್ಟಿಗಳಲ್ಲಿ ಅಥಿಯಾ ಕಾಣಿಸಿಕೊಳ್ಳುತ್ತಿಲ್ಲ. ಹಾಗಾಗಿ ಪ್ರೆಗ್ನೆನ್ಸಿ ಸುದ್ದಿಗೆಮತ್ತಷ್ಟು ಪುಷ್ಠಿ ಸಿಕ್ಕಿದೆ.