ಪ್ರತಿ ಹೊಸ ತಿಂಗಳು ಪ್ರಾರಂಭವಾಗುವ ಮುನ್ನ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) ಬ್ಯಾಂಕ್ ಗಳ ರಜಾಪಟ್ಟಿಯನ್ನು ಬಿಡುಗಡೆ ಮಾಡುತ್ತದೆ. ಅದರಂತೆ ಮಾರ್ಚ್ ತಿಂಗಳು ಮುಕ್ತಾಯವಾಗುತ್ತ ಬಂದಿದ್ದು, ಏಪ್ರಿಲ್ ತಿಂಗಳಬ್ಯಾಂಕ್ ಹಾಲಿಡೇ ಲಿಸ್ಟ್ ಅನ್ನು ಆರ್ ಬಿಐ ಬಿಡುಗಡೆ ಮಾಡಿದೆ. ಈ ಏಪ್ರಿಲ್ನಲ್ಲಿ ಯುಗಾದಿ, ಈದ್, ರಾಮನವಮಿ ಹಬ್ಬಗಳಿವೆ. ಇಂಥ ಹಬ್ಬ ಮತ್ತು ವಿಶೇಷ ದಿನಗಳ ಪ್ರಯುಕ್ತ ಒಂದು ತಿಂಗಳಲ್ಲಿ 9 ರಜೆಗಳಿವೆ. ಉಳಿದವು ಭಾನುವಾರ ಮತ್ತು ಶನಿವಾರದ ರಜೆಗಳು ಸೇರಿವೆ.
ಆರ್ಬಿಐ ಕ್ಯಾಲಂಡರ್ ಪ್ರಕಾರ 2024ರ ಏಪ್ರಿಲ್ನಲ್ಲಿ ಇರುವ ರಜೆಗಳು
- ಏಪ್ರಿಲ್ 1: ವಾರ್ಷಿಕ ಲೆಕ್ಕಗಳನ್ನು ಮುಗಿಸಲು ಬ್ಯಾಂಕುಗಳು ಮುಚ್ಚಿರುತ್ತವೆ.
- ಏಪ್ರಿಲ್ 5, ಶುಕ್ರವಾರ: ಬಾಬು ಜಗಜೀವನರಾಮ್ ಜಯಂತಿ, ಜುಮಾತ್ ಉಲ್ ವಿದಾ (ತೆಲಂಗಾಣ, ಕಾಶ್ಮೀರದಲ್ಲಿ ರಜೆ)
- ಏಪ್ರಿಲ್ 7: ಭಾನುವಾರ
- ಏಪ್ರಿಲ್ 9, ಮಂಗಳವಾರ: ಯುಗಾದಿ, ಗುದಿ ಪಡ್ವಾ, ಸಜಿಬು ನೊಂಗ್ಮಪನ್ಬ, ಮೊದಲ ನವರಾತ್ರಿ (ಕರ್ನಾಟಕ, ತಮಿಳುನಾಡು, ತೆಲಂಗಾಣ, ಆಂಧ್ರ, ಮಹಾರಾಷ್ಟ್ರ, ಮಣಿಪುರ್, ಗೋವಾ, ಕಾಶ್ಮೀರದಲ್ಲಿ ರಜೆ).
- ಏಪ್ರಿಲ್ 10, ಬುಧವಾರ: ಈದ್ ಉಲ್ ಫಿತರ್ (ಕೇರಳದಲ್ಲಿ ರಜೆ)
- ಏಪ್ರಿಲ್ 11, ಗುರುವಾರ: ಈದ್ ಉಲ್ ಫಿತರ್ (ಚಂಡೀಗಡ್, ಸಿಕ್ಕಿಂ, ಹಿಮಾಚಲಪ್ರದೇಶ, ಕೇರಳ ಹೊರತುಪಡಿಸಿ ಉಳಿದೆಡೆ ರಜೆ)
- ಏಪ್ರಿಲ್ 13, ಎರಡನೇ ಶನಿವಾರ
- ಏಪ್ರಿಲ್ 14: ಭಾನುವಾರ
- ಏಪ್ರಿಲ್ 15, ಸೋಮವಾರ: ಬೋಹಾಗ್ ಬಿಹು, ಹಿಮಾಚಲ ದಿನ (ಅಸ್ಸಾಂ ಮತ್ತು ಹಿಮಾಚಲಪ್ರದೇಶದಲ್ಲಿ ರಜೆ)
- ಏಪ್ರಿಲ್ 16, ಮಂಗಳವಾರ: ಶ್ರೀರಾಮನವಮಿ (ಗುಜರಾತ್, ಮಹಾರಾಷ್ಟ್ರ, ಮಧ್ಯಪ್ರದೇಶ, ಒಡಿಶಾ, ಚಂಡೀಗಡ, ಆಂಧ್ರಪ್ರದೇಶ, ತೆಲಂಗಾಣ, ರಾಜಸ್ಥಾನ, ಉತ್ತರಪ್ರದೇಶ, ಬಿಹಾರ, ಝಾರ್ಖಂಡ್, ಹಿಮಾಚಲಪ್ರದೇಶದಲ್ಲಿ ರಜೆ)
- ಏಪ್ರಿಲ್ 20, ಶನಿವಾರ: ಗರಿಯ ಪೂಜೆ (ತ್ರಿಪುರಾದಲ್ಲಿ ರಜೆ)
- ಏಪ್ರಿಲ್ 21: ಭಾನುವಾರ
- ಏಪ್ರಿಲ್ 27: ನಾಲ್ಕನೇ ಶನಿವಾರ
- ಏಪ್ರಿಲ್ 28: ಭಾನುವಾರ
ಎಪ್ರಿಲ್ 1ರಂದು ವಾರ್ಷಿಕ ಲೆಕ್ಕ ಸಮಾಪ್ತಿಗೆಂದು ಬ್ಯಾಂಕ್ ಬಾಗಿಲು ಮುಚ್ಚಿದ್ದರೂ, ಸಿಬ್ಬಂದಿ ಕೆಲಸ ಮಾಡುತ್ತಿರುತ್ತಾರೆ. ಸಾರ್ವಜನಿಕರಿಗೆ ಸೇವೆ ಇರುವುದಿಲ್ಲ. ಏಪ್ರಿಲ್ 5ರಿಂದ 16ರವರೆಗೆ 9 ರಜೆಗಳಿವೆ.
ಕರ್ನಾಟಕದಲ್ಲಿ ಏಪ್ರಿಲ್ನಲ್ಲಿ ಬ್ಯಾಂಕುಗಳಿಗೆ ಇರುವ ರಜೆಗಳು
ಕರ್ನಾಟಕದಲ್ಲಿ ಎಪ್ರಿಲ್ ತಿಂಗಳಲ್ಲಿ ಒಟ್ಟು 9 ದಿನಗಳು ಬ್ಯಾಂಕುಗಳಿಗೆ ರಜೆ ಇದೆ. ಇದರಲ್ಲಿ ಎಪ್ರಿಲ್ 9ರಂದು ಯುಗಾದಿ ಹಬ್ಬ, ಏಪ್ರಿಲ್ 11ರಂದು ಈದ್ ಹಬ್ಬಕ್ಕೆ ರಜೆ ಇದೆ. ಉಳಿದವು ಶನಿವಾರ ಮತ್ತು ಭಾನುವಾರದ ರಜೆಗಳಾಗಿವೆ.
- ಏಪ್ರಿಲ್ 1, ಸೋಮವಾರ
- ಏಪ್ರಿಲ್ 7: ಭಾನುವಾರ
- ಏಪ್ರಿಲ್ 9, ಮಂಗಳವಾರ (ಯುಗಾದಿ ಹಬ್ಬ).
- ಏಪ್ರಿಲ್ 11, ಗುರುವಾರ: ಈದ್ ಉಲ್ ಫಿತರ್
- ಏಪ್ರಿಲ್ 13, ಎರಡನೇ ಶನಿವಾರ
- ಏಪ್ರಿಲ್ 14: ಭಾನುವಾರ
- ಏಪ್ರಿಲ್ 21: ಭಾನುವಾರ
- ಏಪ್ರಿಲ್ 27: ನಾಲ್ಕನೇ ಶನಿವಾರ
- ಏಪ್ರಿಲ್ 28: ಭಾನುವಾರ