ಏಪ್ರಿಲ್ 1, 2024 ರಿಂದ ಹೊಸ ಹಣಕಾಸು ವರ್ಷ ಪ್ರಾರಂಭವಾಗಲಿದೆ. ಈ ದಿನವು ಬಹಳ ಮುಖ್ಯವಾಗಿದೆ, ಏಕೆಂದರೆ ವೈಯಕ್ತಿಕ ಹಣಕಾಸುಗೆ ಸಂಬಂಧಿಸಿದ ಹೆಚ್ಚಿನ ಬದಲಾವಣೆಗಳು ಈ ದಿನದಿಂದ ಜಾರಿಗೆ ಬರುತ್ತವೆ. ಬಜೆಟ್ನಲ್ಲಿ ಮಾಡಲಾದ ಬಹುತೇಕ ಘೋಷಣೆಗಳು ಈ ದಿನದಿಂದಲೇ ಜಾರಿಗೆ ಬರುತ್ತವೆ. ಈ ಬಾರಿಯೂ ಏಪ್ರಿಲ್ 1 ರಿಂದ ಕೆಲವು ಪ್ರಮುಖ ಬದಲಾವಣೆಗಳು ನಡೆಯಲಿವೆ, ಅವುಗಳ ಬಗ್ಗೆ ಮುಂದೆ ತಿಳಿಯಿರಿ.
ಎನ್ಪಿಎಸ್ ನಿಯಮದಲ್ಲಿ ಬದಲಾವಣೆ
ಎನ್ಪಿಎಸ್ ಖಾತೆಗಳಿಗೆ ಲಾಗಿನ್ ಆಗಲು ಎರಡು ಎಳೆಯ ಭದ್ರತಾ ವ್ಯವಸ್ಥೆ ಇದೆ. ಇಲ್ಲಿಯವರೆಗೂ ನ್ಯಾಷನಲ್ ಪೆನ್ಷನ್ ಸಿಸ್ಟಂ ಅಕೌಂಟ್ಗೆ ಲಾಗಿನ್ ಆಗಲು ಯೂಸರ್ ಐಡಿ ಮತ್ತು ಪಾಸ್ವರ್ಡ್ ಬೇಕಿತ್ತು. ಈಗ ಆಧಾರ್ ದೃಢೀಕರಣವನ್ನೂ ಪಡೆಯಬೇಕಾಗುತ್ತದೆ.
ಇಪಿಎಫ್ಒ ಹೊಸ ನಿಯಮ
ಇಪಿಎಫ್ ಸದಸ್ಯರು ತಮ್ಮ ಕೆಲಸ ಬದಲಾವಣೆ ಮಾಡಿದಾಗ ಅವರ ಖಾತೆಯಲ್ಲಿರುವ ಹಣ ಹೊಸ ಸಂಸ್ಥೆಯ ಪಿಎಫ್ ಖಾತೆಗೆ ಸ್ವಯಂ ಆಗಿ ವರ್ಗಾವಣೆ ಆಗುತ್ತದೆ. ಇದರಿಂದ ಉದ್ಯೋಗಿಗಳ ಒಂದು ತಲೆನೋವು ಕಡಿಮೆ ಆಗುತ್ತದೆ. ಈಗಿರುವ ವ್ಯವಸ್ಥೆಯಲ್ಲಿ ಒಂದಕ್ಕಿಂತ ಹೆಚ್ಚು ಪಿಎಫ್ ಖಾತೆಗಳಿದ್ದರೆ ಅದನ್ನು ವಿಲೀನಗೊಳಿಸಲು ಇಪಿಎಫ್ ಸಬ್ಸ್ಕ್ರೈಬರ್ಗಳು ಮನವಿ ಸಲ್ಲಿಸಬೇಕಾಗಿದೆ.
ಫಾಸ್ಟ್ಯಾಗ್ ನಿಯಮ
ಫಾಸ್ಟ್ಯಾಗ್ ಇದ್ದಲ್ಲಿ ಅದರ ಕೆವೈಸಿಯನ್ನು ನೀವು ಅಪ್ಡೇಟ್ ಮಾಡಬೇಕಾಗುತ್ತದೆ. ಇಲ್ಲದಿದ್ದರೆ ಬ್ಯಾಂಕುಗಳು ನಿಮ್ಮ ಫಾಸ್ಟ್ಯಾಗ್ ಅನ್ನು ಡೀ ಆ್ಯಕ್ಟಿವೇಟ್ ಮಾಡುವ ಸಾಧ್ಯತೆ ಇದೆ. ಕೆವೈಸಿ ಅಪ್ಡೇಟ್ ಆಗದ ಫಾಸ್ಟ್ಯಾಗ್ನ ಖಾತೆಯಲ್ಲಿ ಹಣ ಇದ್ದರೂ ಅದು ಕೆಲಸ ಮಾಡುವುದಿಲ್ಲ. ಆದ್ದರಿಂದ ಕೆವೈಸಿ ಅಪ್ಡೇಟ್ ಮಾಡಿರದಿದ್ದರೆ ಮಾರ್ಚ್ 31ರೊಳಗೆ ಅದನ್ನು ಮಾಡಿರಿ.
ಹೊಸ ಇನ್ಕಮ್ ಟ್ಯಾಕ್ಸ್ ಪದ್ಧತಿ ಡೀಫಾಲ್ಟ್?
2023-24ರ ಹಣಕಾಸು ವರ್ಷದಿಂದ ಸರ್ಕಾರ ಹಳೆಯ ತೆರಿಗೆ ಪದ್ಧತಿ ಜೊತೆಗೆ ಹೊಸ ಆದಾಯ ತೆರಿಗೆ ಪದ್ಧತಿಯನ್ನೂ ಸೇರಿಸಿದೆ. ಹೊಸ ಟ್ಯಾಕ್ಸ್ ರೆಜಿಮೆ ಡೀಫಾಲ್ಟ್ ಆಗಿರಲಿದೆ. ನೀವು ಈಗಾಗಲೇ ಓಲ್ಡ್ ಟ್ಯಾಕ್ಸ್ ರೆಜಿಮೆಯಲ್ಲಿಯೇ ಇದ್ದರೆ ಹೊಸ ಹಣಕಾಸು ವರ್ಷಕ್ಕೂ ಅದರಲ್ಲೇ ಮುಂದುವರಿಸಬಹುದು. ಒಂದು ವೇಳೆ ನೀವು ಓಲ್ಡ್ ಟ್ಯಾಕ್ಸ್ ರೆಜಿಮೆ ಆಯ್ಕೆ ಮಾಡಿಕೊಳ್ಳದೇ ಇದ್ದಲ್ಲಿ ಹೊಸ ತೆರಿಗೆ ಪದ್ಧತಿಯೇ ಡೀಫಾಲ್ಟ್ ಆಗಿರುತ್ತದೆ. ಒಮ್ಮೆ ನೀವು ಹೊಸ ತೆರಿಗೆ ಪದ್ಧತಿಯಲ್ಲಿ ರಿಟರ್ನ್ ಫೈಲ್ ಮಾಡಿದರೆ ಅದರಲ್ಲೇ ಮುಂದುವರಿಯಬೇಕಾಗುತ್ತದೆ.
ಹೊಸ ತೆರಿಗೆ ಪದ್ಧತಿಯಲ್ಲಿ ಸ್ಟಾಂಡರ್ಡ್ ಡಿಡಕ್ಷನ್
ಈ ಹಿಂದೆ ಹಳೆಯ ತೆರಿಗೆ ಪದ್ಧತಿಯಲ್ಲಿ 50 ಸಾವಿರ ರೂ.ಗಳ ಸ್ಟ್ಯಾಂಡರ್ಡ್ ಡಿಡಕ್ಷನ್ ಅನ್ವಯವಾಗುತ್ತಿತ್ತು. ಈಗ ಅದನ್ನು ಹೊಸ ತೆರಿಗೆ ಪದ್ಧತಿಯಲ್ಲಿ ಸೇರಿಸಲಾಗಿದೆ. ಸ್ಟ್ಯಾಂಡರ್ಡ್ ಡಿಡಕ್ಷನ್ ಅಡಿಯಲ್ಲಿ, 50 ಸಾವಿರಕ್ಕೆ ತೆರಿಗೆ ವಿನಾಯಿತಿ ಲಭ್ಯವಿದೆ.
ಇದು ನಿಮ್ಮ ತೆರಿಗೆಯ ಆದಾಯವನ್ನು ಕಡಿಮೆ ಮಾಡುತ್ತದೆ. ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 87 ಎ ಅಡಿಯಲ್ಲಿ ರಿಯಾಯಿತಿಯೊಂದಿಗೆ ಯಾವುದೇ ತೆರಿಗೆಯನ್ನು ವಿಧಿಸಲಾಗುವುದಿಲ್ಲ ಎಂದು ಈ ವಿನಾಯಿತಿಯಿಂದ ಕೆಲವರು ತುಂಬಾ ಪ್ರಯೋಜನ ಪಡೆಯುತ್ತಾರೆ. 5 ಲಕ್ಷಕ್ಕಿಂತ ಕಡಿಮೆ ಆದಾಯ ಹೊಂದಿರುವವರು ಸೆಕ್ಷನ್ 87A ಅಡಿಯಲ್ಲಿ 12,500 ರೂ.ವರೆಗೆ ವಿನಾಯಿತಿ ಪಡೆಯುತ್ತಾರೆ.
5 ಕೋಟಿಗಿಂತ ಹೆಚ್ಚು ಆದಾಯ ಹೊಂದಿರುವವರಿಗೆ ಹೆಚ್ಚಿನ ತೆರಿಗೆ ಉಳಿತಾಯವಾಗಲಿದೆ!
ಏಪ್ರಿಲ್ 1 ರಿಂದ ವಾರ್ಷಿಕ 5 ಕೋಟಿ ರೂ.ಗಿಂತ ಹೆಚ್ಚಿನ ಆದಾಯ ಹೊಂದಿರುವವರಿಗೂ ಭಾರಿ ಲಾಭ ದೊರೆಯಲಿದೆ. 5 ಕೋಟಿಗಿಂತ ಹೆಚ್ಚಿನ ಆದಾಯದ ಮೇಲಿನ ಹೆಚ್ಚುವರಿ ಶುಲ್ಕವನ್ನು ಸರ್ಕಾರವು ಶೇಕಡಾ 12 ರಷ್ಟು ಕಡಿಮೆ ಮಾಡಿದೆ. ಈ ಮೊದಲು ಶೇ.37ರಷ್ಟಿದ್ದು, ಏಪ್ರಿಲ್ 1ರಿಂದ ಶೇ.25ಕ್ಕೆ ಏರಿಕೆಯಾಗಲಿದೆ. ಆದಾಗ್ಯೂ, ಈ ಪ್ರಯೋಜನವು ಹೊಸ ತೆರಿಗೆ ವ್ಯವಸ್ಥೆಯನ್ನು ಆಯ್ಕೆ ಮಾಡುವ ಜನರಿಗೆ ಮಾತ್ರ ಲಭ್ಯವಿರುತ್ತದೆ.
ಸೈಡ್ ಬ್ಯುಸಿನೆಸ್
ನೀವು ಇಂಜಿನಿಯರ್, ವೈದ್ಯರು, ಪತ್ರಕರ್ತರು ಅಥವಾ ಯಾವುದೇ ಇತರೆ ವೃತ್ತಿಯ ಮೂಲಕ ಜೀವನ ನಡೆಸುತ್ತಿರಲಿ. ಆದರೆ ಇವುಗಳ ನಡುವೆ ನಿಮ್ಮಲ್ಲಿ ಒಂದಷ್ಟು ಬೇರೆ ಬೇರೆ ಪ್ರತಿಭೆ ಇರುತ್ತದೆ. ಸೃಜನಶೀಲ ಹಾಗೂ ಆಸಕ್ತಿಕರ ಹವ್ಯಾಸ ಇದ್ದರೆ ಇದನ್ನೇ ಸೈಡ್ ಬ್ಯುಸಿನೆಸ್ ಆಗಿ ಮಾಡಿಕೊಂಡು ಹಣಗಳಿಸಬಹುದು. ಈಗಾಗಲೇ ಕೆಲವು ಸೈಡ್ ಬ್ಯುಸಿನೆಸ್ಗಳು ಮಾಡಿಕೊಂಡಿರಬಹುದು. ಒಂದು ವೇಳೆ ಇಲ್ಲದಿದ್ದರೆ, ಪಾಡ್ಕಾಸ್ಟ್ಗಳ ಮೂಲಕ ಕಥೆ ಹೇಳುವುದು, ಆನ್ಲೈನ್ ಬೋಧನೆ, ಛಾಯಾಗ್ರಹಣ, ಫುಡ್ ಡೆಲಿವರಿ, ಅರೆಕಾಲಿಕವಾಗಿ ಪಾರ್ಸೆಲ್ ವಿತರಣೆ, ಮನೆ ಬಾಡಿಗೆ ನೀಡುವುದು ಹೀಗೆ ಯಾವುದಾದರೊಂದು ಸೈಡ್ ಬ್ಯುಸಿನೆಸ್ ಮಾಡಿಕೊಳ್ಳಬೇಕು.