ಕೋಲಾರ :- ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಮೇಲೆ ಕಣ್ಣಿಟ್ಟಿದ್ದ ಕೆ.ಹೆಚ್.ಮುನಿಯಪ್ಪ ಗೆ ತೀವ್ರ ನಿರಾಸೆಯಾಗಿದೆ.. ಅಳಿಯ ಚಿಕ್ಕಪೆದ್ದಣ್ಣನಿಗೆ ಸಿಗಬೇಕಿದ್ದ ಟಿಕೆಟ್ ಬೆಂಗಳೂರಿನ ಗೌತಮ್ ಪಾಲಾಗಿದೆ. ಕೆ.ಹೆಚ್.ಎಂ ಬಣಕ್ಕೆ ಹಿನ್ನಡೆ ಆಗಿದ್ದು, ರಮೇಶ್ ಕುಮಾರ್ ಬಣ ಕೈ ಮೇಲಾಗಿದೆ..ಬೂದಿಮುಚ್ಚಿದ ಕೆಂಡದಂತಹ ಕೋಲಾರದ ಕೈ ಟಿಕೆಟ್ ಅಸಮಾಧಾನ, ಚುನಾವಣಾ ಫಲಿತಾಂಶದ ಮೇಲೆ ಯಾವ ಪರಿಣಾಮ ಬೀರುತ್ತದೋ ಎಂಬ ಅತಂಕದಲ್ಲಿ ಕೋಲಾರದ ಜನ ತಬ್ಬಿಬ್ಬಾಗಿದ್ದಾರೆ..
ಬಿಜೆಪಿ ಸೇರುವ ಬಗ್ಗೆ ಬೆಂಬಲಿಗರ ಜೊತೆ ಸಭೆ ನಡೆಸಿ ತೀರ್ಮಾನ – ಸುಮಲತಾ ಅಂಬರೀಶ್!
ಕೋಲಾರ ಲೊಕಸಭಾ ಕಾಂಗ್ರೆಸ್ ಟಿಕೆಟ್ ಮೇಲೆ ಕಣ್ಣಿಟ್ಟಿದ್ದ ಕೆಹೆಚ್.ಮುನಿಯಪ್ಪಗೆ ಭಾರಿ ನಿರಾಸೆಯಾಗಿದೆ.. ಏಳು ಸಲ ಕೋಲಾರ ಸಂಸದನಾಗಿದ್ದ ಕೆ.ಹೆಚ್.ಎಂ ಗೆ ಇದು ರಾಜಕೀಯ ಜಿವನದ ಅತಿದೊಡ್ಡ ಹಿನ್ನಡೆ ಎನ್ನಲಾಗ್ತಿದೆ. ಕೆ.ಹೆಚ್.ಎಂ ಅಳಿಯ ಚಿಕ್ಕಪೆದ್ದಣ್ಣನ ಹೆಸರೇ ಅಂತಿಮ ಆಗಿದೆ.. ಇನ್ನೇನು ಘೋಷಣೆ ಮಾತ್ರ ಬಾಕಿ ಎನ್ನುವ ವೇಳೆ ರಮೇಶ್ ಕುಮಾರ್ ಬಣದ ಎಂ.ಸಿ.ಸುಧಾಕರ್, ನಂಜೇಗೌಡ, ನಾರಾಯಣಸ್ವಾಮಿ ಸೇರಿದಂತೆ ಕೋಲಾರದ ಶಾಸಕರು ರಾಜೀನಾಮೆ ನೀಡುವ ಬೆದರಿಕೆ ಒಡ್ಡಿತ್ತು.. ಇದರಿಂದ ತಬ್ಬಿಬ್ಬಾದ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿ ರವರು.ಕೆ.ಹೆಚ್.ಎಂ ಕುಟುಂಬಕ್ಕು ಮತ್ತು ರಮೇಶ್ ಕುಮಾರ್ ಬಣಕ್ಕೂ ಟಿಕೆಟ್ ನೀಡದೆ ಮೂರನೆ ವ್ಯಕ್ತಿ ಬೆಂಗಳೂರಿನ ಗೌತಮ್ ಗೆ ಟಿಕೆಟ್ ಘೋಷಿಸಿ ಅಚ್ಚರಿ ಮೂಡಿಸಿದೆ.. ಈ ಬಗ್ಗೆ ಕೆ.ಹೆಚ್.ಎಂ.ನ ಕೇಳಿದರೆ ನನಗೆ ಅಸಮಾಧಾನವಿಲ್ಲ.. ನಾನು ಮೊದಲು ಹೀಗಲು ಹೇಳ್ತಿದ್ದೇನೆ ಹೈಕಮ್ಯಾಂಡ್ ನಿರ್ಧಾರಕ್ಕೆ ಬದ್ದ ಎಂದಿದ್ದಾರೆ..
ಕಳೆದ ಮುರು ದಿನಗಳ ಕೋಲಾರ ಕ್ಷೇತ್ರದ ಟಿಕೆಟ್ ಹಂಚಿಕೆಯ ಗೊಂದಲ ರಾಜ್ಯಾದ್ಯಂತ ಸಖತ್ ಸದ್ದು ಮಾಡಿತ್ತು.. ರಾಜ್ಯದ ಎಲ್ಲಾ ಕ್ಷೇತ್ರಗಳ ಟಿಕೆಟ್ ಅಂತಿಮವಾಗಿದ್ದರು ಚಿಕ್ಕಬಳ್ಳಾಪುರ ಮತ್ತು ಕೋಲಾರ ಕ್ಷೇತ್ರಗಳ ಟಿಕೆಟ್ ಮಾತ್ರ ಘೋಷಣೆಯಾಗಿರಲಿಲ್ಲ.. 2019ರ ಲೋಕಸಬಾ ಚುನಾವಣೆಯಲ್ಲಿ ರಮೇಶ್ ಕುಮಾರ್, ಡಾ.ಎಂ.ಸಿ.ಸುಧಾಕರ್ ನಿರ್ಧಾರದಿಂದ ಕೆ.ಹೆಚ್.ಎಂ.ಗೆ ಸೋಲಾಗಿತ್ತು.. ಈ ಸಲವೂ ಅಳಿಯ ಚಿಕ್ಕಪೆದ್ದಣ್ಣನಿಗೆ ಟಿಕೆಟ್ ನೀಡಿದ್ದಾರೆ ವಿರೋಧಿ ಬಣ ಸೋಲಿಸುವ ಪಣ ತೊಟ್ಟಿತ್ತು.. ಮೂರು ದಶಕ ಕೋಲಾರದಲ್ಲಿ ಸೋಲರಿಯದ ಸರದಾರ ಕೆ.ಹೆಚ್.ಎಂ.ಗೆ 2019ರ ಸೋಲಿನ ನಂತರ ಈಗ ಕಾಂಗ್ರೆಸ್ ಟಿಕೆಟ್ ಕೈತಪ್ಪಿದ್ದು ಭಾರಿ ಹಿನ್ನಡೆ ಎನ್ನಲಾಗ್ತಿದೆ.. ಆದರೂ ಕೆ.ಹೆಚ್.ಎಂ ಮಾತ್ರ ಇದೆಲ್ಲಾ ರಾಜಕೀಯದಲ್ಲಿ ಮಾಮೂಲಿ.. ಕೋಲಾರ ಸೇರಿದಂತೆ ಚಿಕ್ಕಬಳ್ಳಾಪುರದ ಗೆಲುವಿಗೆ ನನ್ನ ಕೈಲಾದಮಟ್ಟಿಗೆ ಕೊಡುಗೆ ನೀಡ್ತೇನೆ ಎಂದಿದ್ದಾರೆ ಕೆ.ಹೆಚ್.ಮುನಿಯಪ್ಪ..
ಕೋಲಾರದ ಕಾಂಗ್ರೆಸ್ ಪಕ್ಷಗಳ ಬಣ ರಾಜಕೀಯ ಜೆ.ಡಿ.ಎಸ್ ಮತ್ತು ಬಿಜೆಪಿ ಮೈತ್ರಿ ಅಭ್ಯರ್ಥಿ ಮಲ್ಲೇಶ್ ಬಾಬು ಗೆಲುವಿಗೆ ಸಹಕಾರಿ ಆಗುತ್ತೆ ಎನ್ನಲಾಗ್ತಿದೆ.. ಕಳೆದ 2019ರ ಚುನಾವಣೆಲಿ ಕೆ.ಹೆಚ್.ಮುನಿಯಪ್ಪ ವಿರುದ್ಧ ವಿರೋಧಿ ಬಣ ಮಾಡಿದ್ದ ತಂತ್ರ ಈ ಸಲವೂ ಜಾರಿಯಾಗ್ತಿತ್ತು ಅಂತಾರೆ ರಾಜಕೀಯ ಪರಿಣಿತರು.. ಅದೇನೆ ಇರಲಿ ಕಾಂಗ್ರೆಸ್ ಪಕ್ಷದ ಟಿಕೆಟ್ ಹಂಚಿಜೆಯ ಒಳಜಗಳ ಪಕ್ಷದಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವುದನ್ನು ಎತ್ತಿ ತೋರುತ್ತಿದೆ..
ಇನ್ನಾದರೂ ಕಾದು ನೋಡಬೇಕಾಗಿದೆ
ಕಾಂಗ್ರೆಸ್ ಪಕ್ಷದಲ್ಲಿ ಎಲ್ಲಾ ಸರಿ ಇದೆಯೋ ಇಲ್ಲವೋ ಎಂದು ಎಂದು ನೋಡಬೇಕಾಗಿದೆ