ಯಶ್ ನಟನೆಯ ಕಿರಾತಕ ಸೇರಿದಂತೆ ಹಲವಾರು ಚಿತ್ರಗಳಲ್ಲಿ ಖಳನಟರಾಗಿ ನಟಿಸಿರುವ ಡೇನಿಯಲ್ ಬಾಲಾಜಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಇದೀಗ ಅವರು ಕಣ್ಣುಗಳನ್ನು ಕುಟುಂಬಸ್ಥರು ದಾನ ಮಾಡಿದ್ದಾರೆ.
ಬಾಲಜಿ ಅವರಿಗೆ ತಾವು ನಿಧನವಾದ ಬಳಿಕ ತಮ್ಮ ಕಣ್ಣುಗಳನ್ನು ದಾನ ಮಾಡಬೇಕು ಎಂಬ ಆಸೆ ಇತ್ತಂತೆ. ಇದೀಗ ಬಾಲಜಿ ಅವರ ಆಸೆಯಂತೆ ಕುಟುಂಬಸ್ಥರು ಇದೀಗ ಕಣ್ಣುಗಳನ್ನು ದಾನ ಮಾಡಲಾಗಿದೆ.
ನಟ ಡೇನಿಯಲ್ ಬಾಲಾಜಿ ನಿನ್ನೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಪ್ರಮುಖವಾಗಿ ತಮಿಳು ಚಿತ್ರಗಳಲ್ಲಿ ಕೆಲಸ ಮಾಡಿದ್ದ ನಟ ಡೇನಿಯಲ್ ಬಾಲಾಜಿ ನಿನ್ನೆ ರಾತ್ರಿ ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಎದೆನೋವಿನಿಂದ ಬಳಲುತ್ತಿದ್ದ ನಟನನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
48 ವರ್ಷದ ನಟನ ಹಠಾತ್ ಸಾವು ತಮಿಳು ಚಿತ್ರರಂಗ ಮತ್ತು ಅವರ ಅಭಿಮಾನಿಗಳನ್ನು ದಿಗ್ಭ್ರಮೆಗೊಳಿಸಿದೆ. ಬಾಲಾಜಿ ಅವರ ನಿಧನಕ್ಕೆ ಸಾಮಾಜಿಕ ಮಾಧ್ಯಮದಲ್ಲಿ ಸಂತಾಪ ಸೂಚಿಸಲಾಗುತ್ತಿದೆ. ಡೇನಿಯಲ್ ಬಾಲಾಜಿ ಅವರು ಕಮಲ್ ಹಾಸನ್ ಅವರ ಅಪೂರ್ಣ ‘ಮರುದುನಾಯಗಂ’ನಲ್ಲಿ ಯುನಿಟ್ ಪ್ರೊಡಕ್ಷನ್ ಮ್ಯಾನೇಜರ್ ಆಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ನಂತರ ಅವರು ರಾಧಿಕಾ ಶರತ್ಕುಮಾರ್ ಅವರ ‘ಚಿತ್ತಿ’ ಯೊಂದಿಗೆ ದೂರದರ್ಶನಕ್ಕೆ ತೆರಳಿದರು. ಅಲ್ಲಿನ ಪಾತ್ರದ ಮೂಲಕ ಡೇನಿಯಲ್ ಎಂದು ಜನಪ್ರಿಯತೆ ಗಳಿಸಿದರು.