ಕಲಬುರ್ಗಿ:- ಪ್ರಿಯಾಂಕ್ ಖರ್ಗೆಗೆ ಕೊಲೆ ಬೆದರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಉಮೇಶ್ ಜಾಧವ್ ಅವರು ಇದು ಯಾರಾದ್ರೂ ನಂಬುವ ಮಾತಾ? ಎಂದು ಜಾಧವ್ ಕಿಡಿಕಾರಿದ್ದಾರೆ.
15 ದಿನಗಳ ಹಿಂದೆ ಕೊಲೆ ಬೆದರಿಕೆ ಪತ್ರ ಬಂದಿದೆ ಎಂದು ಪ್ರಿಯಾಂಕ್ ಖರ್ಗೆ ಹೇಳುತ್ತಾರೆ. 8 ದಿನಗಳ ಹಿಂದೆ ದೂರು ನೀಡಿದ್ದೇನೆ ಎನ್ನುತ್ತಾರೆ. ಇನ್ನೂ 8 ದಿನ ನೀವೇನು ಮಲಗಿದ್ದಿರಾ? 24 ಗಂಟೆಯಲ್ಲೇ ಫೇಕ್ ಲೆಟರ್ ಬರೆದವರನ್ನು ಬಂಧಿಸಿ ಒದ್ದು ಒಳಗೆ ಹಾಕಬೇಕು. ನಿಮಗೆ ಅಧಿಕಾರ, ಪವರ್ ಇಲ್ವಾ ಎಂದು ಕಿಡಿಕಾರಿದರು.,
ಉಮೇಶ್ ಜಾದವ್ ಸಮಜಾಯಿಷಿ ಹೇಳಬೇಕು ಎಂದು ಖರ್ಗೆ ಹೇಳುತ್ತಾರೆ. ನೀವು ಎಐಸಿಸಿ ಅಧ್ಯಕ್ಷರ ಪುತ್ರರಾಗಿದ್ದೀರಿ. ನಿಮ್ಮ ಅಧಿಕಾರ ಬಳಸಿ. ನಾನು ಓರ್ವ ಸ್ವಾತಂತ್ರ್ಯ ಹೋರಾಟಗಾರರ ಮಗನಾಗಿದ್ದೇನೆ. ನಾನು ಯಾಕೆ ಸಮಜಾಯಿಷಿ ಹೇಳಬೇಕು? ನೀವೇನು ಮಂತ್ರಿ ಅಲ್ವಾ? ನಿಮ್ಮ ಅಧಿಕಾರ ಉಪಯೋಗಿಸಿ. ಕೊಲೆ ಬೆದರಿಕೆ ಪತ್ರ ಸಚಿವರಿಗೆ ಬಂದಿದೆ ಅಂದರೆ ಯಾರಾದ್ರು ನಂಬುತ್ತೀರಾ ಎಂದು ಹರಿಹಾಯ್ದರು.