ಟಾಲಿವುಡ್ ಸ್ಟಾರ್ ವಿಜಯ್ ದೇವರಕೊಂಡ ಸಿನಿಮಾಗಳಿಗಿಂತ ಹೆಚ್ಚಾಗಿ ನಟಿ ರಶ್ಮಿಕಾ ಮಂದಣ್ಣ ವಿಷಯದಲ್ಲಿಯೇ ಸದ್ದು ಮಾಡಿದ್ದರು. ಇದೀಗ ಮದುವೆ ಬಗ್ಗೆ ಪ್ರತಿಕ್ರಿಯಿಸಿರೋ ವಿಜಯ್ ದೇವರಕೊಂಡ, ಲವ್ ಮ್ಯಾರೇಜ್ ಆಗುವುದಾಗಿ ಹೇಳಿದ್ದಾರೆ.
‘ಫ್ಯಾಮಿಲಿ ಸ್ಟಾರ್’ ಚಿತ್ರದ ಪ್ರಚಾರ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ವೇಳೆ ವಿಜಯ್ ದೇವರಕೊಂಡಗೆ ಮದುವೆ ಪ್ರಶ್ನೆ ಎದುರಾಗಿದೆ. ‘ಫ್ಯಾಮಿಲಿ ಸ್ಟಾರ್’ ಸಿನಿಮಾದಲ್ಲಿ ನಟಿಸಿದ್ದೇನೋ ನಿಜ. ಹಾಗೇ ಇದೇ ವರ್ಷ ರಿಯಲ್ ಲೈಫ್ನಲ್ಲೂ ಫ್ಯಾಮಿಲಿ ಸ್ಟಾರ್ ಆಗುವ ಸಾಧ್ಯತೆ ಇದೆಯೇ ಎಂದು ಪ್ರಶ್ನೆ ಮಾಡಲಾಗಿದೆ. ಆ ಪ್ರಶ್ನೆಗೆ ವಿಜಯ್ ದೇವರಕೊಂಡ ಪ್ರತಿಕ್ರಿಯಿಸಿ, ನಾನು ಖಂಡಿತವಾಗಿಯೂ ಮದುವೆ ಆಗುತ್ತೇನೆ. ನನಗೂ ಮದುವೆ ಆಗಬೇಕೆಂಬ ಆಸೆ ಇದೆ. ನನಗೂ ಮಕ್ಕಳು ಬೇಕು. ಆದರೆ, ಈ ವರ್ಷ ಖಂಡಿತಾ ಅಲ್ಲ ಎಂದಿದ್ದಾರೆ.
ಲವ್ ಮ್ಯಾರೇಜ್ ಆಗುತ್ತೀರಾ? ಅರೇಂಜ್ಡ್ ಮ್ಯಾರೇಜ್ ಆಗುತ್ತೀರಾ? ಎಂಬ ಪ್ರಶ್ನೆಗೆ ಲವ್ ಮ್ಯಾರೇಜ್ ಆಗುತ್ತೀನಿ ಎಂದು ವಿಜಯ್ ಹೇಳಿದ್ದಾರೆ. ಆ ಹುಡುಗಿಯನ್ನು ಅಪ್ಪ, ಅಮ್ಮ ಇಬ್ಬರೂ ಮೆಚ್ಚಬೇಕು. ಅವರಿಗೆ ಆ ಹುಡುಗಿ ಇಷ್ಟ ಆಗಬೇಕು ಎಂದು ಹೇಳಿಕೊಂಡಿದ್ದಾರೆ. ಇದರ ಮಧ್ಯೆ ಆ ಹುಡುಗಿ ಯಾರು? ಎಂದಾಗ, ವಿಜಯ್ ‘ಡಾರ್ಲಿಂಗ್ ಐ ಲವ್ ಯೂ’ ಎಂದು ನಗುತ್ತಲೇ ಉತ್ತರಿಸಿ ಸುಮ್ಮನಾಗಿದ್ದಾರೆ. ಈ ಮೂಲಕ ವಿಜಯ್ ಮನದ್ದಲ್ಲಿರೋ ಹುಡುಗಿ ಯಾರು ಎಂಬ ಗುಟ್ಟನ್ನು ವಿಜಯ್ ಬಿಟ್ಟುಕೊಟ್ಟಿಲ್ಲ.